Friday, March 29, 2024

Latest Posts

ಜೈಲಿಗೆ ಹೋಗಿ ಶಾ ಗೃಹಮಂತ್ರಿಯಾದ್ರು.. ಡಿಕೆ ಶಿವಕುಮಾರ್ ಸಿಎಂ ಆಗ್ತಾರಾ..?

- Advertisement -

ಅಕ್ರಮ ಹಣ ವರ್ಗವಾಣೆ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್ ಇಡಿ ಬಂಧನದಲ್ಲಿದ್ದಾರೆ.. ಡಿಕೆ ಶಿವಕುಮಾರ್ ರಾಜಕೀಯ ಭವಿಷ್ಯ ಹಾಳು ಮಾಡಲು ಬಿಜೆಪಿ ಪ್ಲಾನ್ ಮಾಡಿದೆ ಅಂತ ಕಾಂಗ್ರೆಸ್ ನಾಯಕರು ಆರೋಪಿಸ್ತಿದ್ದಾರೆ.. ಇತ್ತ ಡಿಕೆಶಿ ಅಕ್ರಮ ಮಾಡೇ ಇಲ್ವಾ ಅನ್ನೋದು ಬಿಜೆಪಿಯವರ ಪ್ರಶ್ನೆ.. ಫೈನಲ್ಲಾಗಿ ಡಿಕೆಶಿ ಕ್ಲೀನ್ ಕೃಷ್ಣಪ್ಪನಾ..? ಇಲ್ಲ ವಂಚನೆ ಮಾಡಿದ್ದಾರಾ..? ಅನ್ನೋದನ್ನ ಕೋರ್ಟ್ ತೀರ್ಮಾನ ಮಾಡುತ್ತೆ. ಆದ್ರೆ ಡಿಕೆಶಿ ರಾಜಕೀಯ ಜೀವನ ಹಾಳಾಯ್ತಾ.. ಡಿಕೆಶಿ ಜೈಲಿಗೆ ಹೋದ್ರೆ ಸಿಎಂ ಆಗೋದು ತಪ್ಪುತ್ತಾ.. ಹಾಗಿದ್ರೆ ಜೈಲಿಗೆ ಹೋಗಿದ್ದ ಶಾ ಈಗ ಗೃಹ ಮಂತ್ರಿಯಾಗಿಲ್ವಾ. ಹಾಗೆಯೇ ಡಿಕೆಶಿ ಜೈಲಿಂದ ಬಂದ್ಮೇಲೆ ಸಿಎಂ ಆಗ್ತಾರೆ ಅನ್ನೋ ಚರ್ಚೆ ಈಗ ಶುರುವಾಗಿದೆ..  ಅಷ್ಟಕ್ಕೂ ಅಮಿತ್ ಶಾ ಜೈಲಿಗೆ ಹೋಗಿದ್ಯಾಕೆ ಅಂತ ನೋಡೋದಾದ್ರೆ

ಸೋಹ್ರಾಬುದ್ಧಿನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ 2010 ಜುಲೈ 25ರಂದು ಅಮಿತ್ ಶಾ ಬಂಧನವಾಗುತ್ತೆ.. ಮುಂದೆ ಗುಜರಾತ್ ಸಿಎಂ ರೇಸ್ ನಲ್ಲಿದ್ದ ಶಾಗೆ ಯುಪಿಎ ಅಧಿಕಾರದ ವೇಳೆ ಸಿಬಿಐ ಶಾಕ್ ನೀಡುತ್ತೆ. ಸಿಬಿಐ ಬಂಧನದಿಂದಾಗಿ ಅಮಿತ್ ಶಾ ಸಿಎಂ ಕನಸು ಭಗ್ನವಾಗುತ್ತೆ. ಶಾ ಜೈಲಿಗೆ ಹೋಗ್ತಿದ್ದ ಹಾಗೆಯೇ ಹಲವು ನಾಯಕರು ಶಾ ಯಿಂದ ದೂರ ಸರೀತಾರೆ.. ಅಮಿತ್ ಶಾ ಬಂಧನವಾದ ಮೂರು ತಿಂಗಳ ನಂತರ ಗುಜರಾತ್ ಹೈಕೋರ್ಟ್ ಬೇಲ್ ನೀಡುತ್ತೆ. ಆದ್ರೆ, ಮರುದಿನವೇ ಅಂದಿನ ನ್ಯಾಯಮೂರ್ತಿ ಅಫ್ತಾಬ್ ಆಲಂ ಅಮಿತ್ ಶಾ ಗುಜರಾತ್ ಎಂಟ್ರಿಯಾಗದಂತೆ ಸಲ್ಲಿಕೆಯಾಗಿದ್ದ ಅರ್ಜಿ ತುರ್ತು ವಿಚಾರಣೆ ನಡೆಸ್ತಾರೆ. ತಕ್ಷಣವೇ ಅಮಿತ್ ಶಾ ಗುಜರಾತ್ ಪ್ರವೇಶಕ್ಕೆ ನಿರ್ಬಂಧ ವಿಧಿಸ್ತಾರೆ, ನಂತರ ಅಮಿತ್ ಶಾ ಎರಡು ವರ್ಷಗಳ ಕಾಲ ಗುಜರಾತ್ ನಿಂದ ದೂರ ಉಳಿಯುವಂತಾಗುತ್ತೆ. ಆ ವೇಳೆ ಎರಡು ವರ್ಷಗಳ ಕಾಲ ದೆಹಲಿಯ ಗುಜರಾತ್ ಭವನದ ಒಂದು ರೂಂ ನಲ್ಲಿ ಪತ್ನಿ ಜೊತೆ ದಿನ ದೂಡ್ತಾರೆ. 2012ರಲ್ಲಿ ಸುಪ್ರೀಂ ಕೋರ್ಟ್ ಅಮಿತ್ ಶಾ ಗೆ ಬೇಲ್ ನೀಡಿ ಗುಜರಾತ್ ಪ್ರವೇಶ ನಿಷೇಧವನ್ನ ತೆರವು ಗೊಳಿಸ್ತಾರೆ. ಎರಡು ವರ್ಷಗಳ ನಂತರ ಗುಜರಾತ್ ಗೆ ಎಂಟ್ರಿ ಕೊಡುವ ಅಮಿತ್ ಶಾ ನರನ್ ಪುರ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗ್ತಾರೆ.. ಮತ್ತೆ ಮೋದಿ ಸಂಪುಟದಲ್ಲಿ ಸಚಿವರಾಗ್ತಾರೆ.. 2014 ಲೋಸಕಭಾ ಚುನಾವಣೆ 6 ತಿಂಗಳಿರುವಾಗ ಉತ್ತರಪ್ರದೇಶ ಕ್ಕೆ ಕಾಲಿಡುವ ಅಮಿತ್ ಶಾ 80 ಲೋಕಸಭಾ ಕ್ಷೇತ್ರಗಳಲ್ಲಿ 71 ಬಿಜೆಪಿ ಅಭ್ಯರ್ಥಿಗಳು ಗೆಲುವು ದಾಖಲಿಸುವಂತೆ ಮಾಡಿ ಮೋದಿ ಪ್ರಧಾನಿಯಾಗಲು ಕೊಡುಗೆ ಕೊಡ್ತಾರೆ. ನಂತರ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಮೋದಿ ಎರಡನೇ ಬಾರಿ ಪ್ರಧಾನಿಯಾದಾಗ ಗೃಹ ಸಚಿವರಾಗಿದ್ದಾರೆ..

ಅಮಿತ್ ಜೈಲು ಸೇರಿದ ರೀತಿ, ನಂತರ ಬೆಳೆದ ರೀತಿ ನೋಡಿದ್ವಿ.. ಇನ್ನು ನಮ್ಮ ಕನಕಪುರದ ಬಂಡೆ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಸರ್ಕಾರದ ವೇಳೆ ನಡೆದ ಬಳ್ಳಾರಿ ಉಪಚುನಾವಣೆಯನ್ನ ಗೆಲ್ಲಿಸಿ ಬೀಗಿದ್ರು.. ದೋಸ್ತಿ ಸರ್ಕಾರವನ್ನ 14 ತಿಂಗಳು ಆಪರೇಷನ್ ಕಮಲದಿಂದ ಸೇಫ್ ಮಾಡಿದ ಸಾಧನೆ ಡಿಕೆಶಿ ಬೆನ್ನಿಗಿದೆ. ಆದ್ರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ತನ್ನ ಜಿಲ್ಲೆಯಲ್ಲಿ ತಾನು ಬಿಟ್ರೆ ಬೇರೆ ಕಡೆ ಕಾಂಗ್ರೆಸ್ ಗೆಲ್ಲಿಸುವಲ್ಲಿ ವಿಫಲರಾಗಿದ್ದಾರೆ.. ಮಂಡ್ಯ, ಹಾಸನ, ರಾಮನಗರ ಜಿಲ್ಲೆಯಲ್ಲಿ ಕನಕಪುರ ಬಿಟ್ರೆ ಬೇರೆಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳೂ ಗೆದ್ದೇ ಇಲ್ಲ.. ಇನ್ನು ವಿಧಾನಸಭಾ ಚುನಾವಣೆಗೆ ಮೂರುವರೆ ವರ್ಷ ಬಾಕಿ ಇದೆ.. ಆದ್ರೆ ಮೋದಿ ಸರ್ಕಾರಕ್ಕೆ ನಾಲ್ಕೂವರೆ ವರ್ಷ ಆಯಸ್ಸಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವವರೆಗೂ ಡಿಕೆಶಿಗೆ ಈ ಕೇಸ್ ಗಳಿಂದ ಮುಕ್ತಿ ಸಿಗೋದು ಡೌಟ್.. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಡಿಕೆಶಿ ಕಾಂಗ್ರೆಸ್ ಸಾರಥ್ಯ ವಹಿಸೋದು ಡೌಟ್.. ಒಂದು ವೇಳೆ ಪ್ರಕರಣದಿಂದ ಮುಕ್ತಿ ಸಿಕ್ಕಿದ್ರೂ ಅಂದ್ರೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಮುಖಂಡರೆಲ್ಲಾ ಡಿಕೆಶಿಯನ್ನ ನಾಯಕಅಂತ ಒಪ್ಕೊಂಡು ಸಾರಾಸಗಟಾಗಿ ಕಾಂಗ್ರೆಸ್ ಗೆ ಮತಹಾಕಿದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದೇನೋ.. ಆದ್ರೆ ಉತ್ತರಕರ್ನಾಟಕ ಭಾಗದಲ್ಲಿ ಡಿಕೆಶಿವಕುಮಾರ್ ರನ್ನ ನಾಯಕನನ್ನಾಗಿ ಒಪ್ಪಿ ಸಿಎಂ ಸ್ಥಾನ ಬಿಟ್ಟುಕೊಡುವ ಉದಾರವಾದಿ ನಾಯಕರಿಲ್ಲ.. ಡಿಕೆಶಿ ಜೈಲಿಗೆ ಹೋದ್ರೆ ಸಾಕು ನಾನು ಸಿಎಂ ಆಗಬೇಕು ಅಂತ ಹತ್ತಾರು ನಾಯಕರು ಟವಲ್ ಇಡ್ಕೊಂಡು ಕಾಂಗ್ರೆಸ್ ನಲ್ಲೇ ಕಾಯ್ತಿದ್ದಾರೆ..  ಯಶ್ ವೀಕ್ಷಕರೇ ಡಿಕೆ ಶಿವಕುಮಾರ್ ಮುಂದಿನ ಚುನಾವಣೆಯಲ್ಲಿ ಸಿಎಂ ಆಗಬೇಕಾ.. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ ಮಾಡಿ. ಧನ್ಯವಾದಗಳು..

- Advertisement -

Latest Posts

Don't Miss