Sunday, November 16, 2025

Latest Posts

ಹೂಡಿಕೆದಾರರಿಗೆ ‘ಸಿಹಿ ಸುದ್ದಿ’ ಮತ್ತೆ ಶುರುವಾದ ಚಿನ್ನ-ಬೆಳ್ಳಿ ಜೋಡಿ ಅಬ್ಬರ!

- Advertisement -

ಇತ್ತೀಚಿನ ದಿನಗಳಲ್ಲಿ ಚಿನ್ನದ ಮಾರುಕಟ್ಟೆ ಸಂಪೂರ್ಣ ಚುರುಕುಗೊಂಡಿದೆ. ಒಂದು ದಿನ ಶಾಂತವಾಗಿರುವಂತೆ ಕಾಣುವ ಚಿನ್ನದ ಬೆಲೆ, ಮರುದಿನವೇ ಅಬ್ಬರದ ಏರಿಕೆ ಕಂಡು ಎಲ್ಲರನ್ನೂ ಅಚ್ಚರಿ ಪಡಿಸುತ್ತಿದೆ. ಕೆಲವೊಮ್ಮೆ ಸ್ವಲ್ಪ ಇಳಿಕೆಯ ಲಕ್ಷಣ ತೋರಿಸಿದರೂ, ಅದೇ ಬೆಲೆ ಮುಂದಿನ ದಿನಗಳಲ್ಲಿ ಮತ್ತೆ ಏರಿಕೆಯಾಗುತ್ತಿರುವುದು ಹೂಡಿಕೆದಾರರ ನಿದ್ದೆ ಕೆಡಿಸಿದೆ.

ಚಿನ್ನದ ರೇಟ್ ಏರಿದರೆ, ಅದರ ಜೊತೆಗೇ ಬೆಳ್ಳಿ ರೇಟ್ ಕೂಡ ಏರುತ್ತದೆ. ಇವೆರಡೂ ಒಟ್ಟೊಟ್ಟಿಗೇ ‘ಜೋಡಿ ಎತ್ತುಗಳ’ ಹಾಗೆ ಏಕೆ ಏರುತ್ತವೆ? ಅನ್ನೋದು ಕುತೂಹಲ ಮೂಡಿಸಿದೆ. ಚಿನ್ನದ ಬೆಲೆ ಏರಿದರೆ, ಅದರ ಜೊತೆಯಲ್ಲೇ ಬೆಳ್ಳಿಯ ಬೆಲೆಯೂ ಏರಿಕೆಯಾಗುತ್ತದೆ. ಇದಕ್ಕೆ ಪ್ರಮುಖ ಕಾರಣ, ಈ ಎರಡರ ಮೇಲೂ ಹೂಡಿಕೆ ಮಾಡುವವರು ಸಾಮಾನ್ಯವಾಗಿ ಒಂದೇ ಗುಂಪಿನವರಾಗಿರುವುದು. ಚಿನ್ನದ ಮೇಲೆ ಬೇಡಿಕೆ ಹೆಚ್ಚಾದಾಗ, ಜನರು ಬೆಳ್ಳಿಯನ್ನೂ ಖರೀದಿಸಲು ಮುಗಿಬೀಳುತ್ತಾರೆ.

ಆದರೆ, ಈ ಎರಡರ ಉಪಯೋಗದಲ್ಲಿ ವ್ಯತ್ಯಾಸವಿದೆ. ‘ಚಿನ್ನ’ ಹೂಡಿಕೆಗಾಗಿಯೇ ಹೆಚ್ಚು ಖರೀದಿಸಲಾಗುತ್ತದೆ. ‘ಬೆಳ್ಳಿ’ ಹೂಡಿಕೆ ಜೊತೆಗೆ ಕೈಗಾರಿಕಾ ಬಳಕೆಯಲ್ಲಿಯೂ ಉಪಯೋಗವಾಗುತ್ತದೆ. ವಿಶೇಷವಾಗಿ ಎಲೆಕ್ಟ್ರಾನಿಕ್ಸ್, ಸೋಲಾರ್ ಪ್ಯಾನೆಲ್‌ಗಳು ಮತ್ತು ವೈದ್ಯಕೀಯ ಉಪಕರಣಗಳಲ್ಲಿ ಬಳಕೆಯಾಗತ್ತೆ. ಇದರಿಂದಾಗಿ ಬೆಳ್ಳಿಯ ಬೆಲೆ ಕೆಲವೊಮ್ಮೆ ಚಿನ್ನದಿಗಿಂತ ಹೆಚ್ಚು ಚಂಚಲವಾಗಿ ವರ್ತಿಸುತ್ತದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಶೇಕಡಾ 40ರಿಂದ 60ರಷ್ಟು ಏರಿಕೆ ಕಂಡಿವೆ. ಹೋಲಿಕೆಯಾಗಿ, ಬ್ಯಾಂಕ್‌ಗಳ FD ನೀಡುವ ಬಡ್ಡಿಯು ಈ ಮಟ್ಟದ ಲಾಭ ನೀಡಲು ಸಾಧ್ಯವಿಲ್ಲ. ಇದು ಚಿನ್ನದ ಹೂಡಿಕೆಯ ಶಕ್ತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ.

ತಜ್ಞರ ಪ್ರಕಾರ, ಮುಂದಿನ ಮೂರರಿಂದ ಆರು ತಿಂಗಳೊಳಗೆ ಚಿನ್ನದ ಬೆಲೆ ಮತ್ತೊಮ್ಮೆ ಹೊಸ ಶಿಖರ ತಲುಪುವ ಸಾಧ್ಯತೆ ಇದೆ. ಹೀಗಾಗಿ, ದೀರ್ಘಾವಧಿಗೆ ಹೂಡಿಕೆ ಮಾಡಲು ಯೋಚಿಸುವವರಿಗೆ ಇದು ಅತ್ಯುತ್ತಮ ಸಮಯವಾಗಿದೆ. ಚಿನ್ನ ಅಥವಾ ಬೆಳ್ಳಿಯ ಹೂಡಿಕೆಯನ್ನು ಕೇವಲ ಅಲ್ಪಾವಧಿ ಲಾಭಕ್ಕಾಗಿ ಮಾಡಬಾರದು. ಈ ಹೂಡಿಕೆಗಳು ದೀರ್ಘಾವಧಿಗೆ ತಾಳ್ಮೆಯಿಂದ ಕಾಯುವವರಿಗೆ ಮಾತ್ರ ದೊಡ್ಡ ಪ್ರಮಾಣದ ಲಾಭ ತಂದುಕೊಡುತ್ತವೆ ಎಂದಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss