Facebook Instagram Twitter Youtube
  • Home
  • ರಾಜಕೀಯ
  • ಜಿಲ್ಲಾ ಸುದ್ದಿಗಳು
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಸಿನಿಮಾ
    • ಬ್ಯೂಟಿ ಟಿಪ್ಸ್
  • ಕ್ರೀಡೆ
  • ಆಧ್ಯಾತ್ಮ
  • ತಂತ್ರಜ್ಞಾನ
  • ವೆಬ್ ಸ್ಟೋರಿ
Search
Sign in
Welcome! Log into your account
Forgot your password? Get help
Privacy Policy
Password recovery
Recover your password
A password will be e-mailed to you.
Karnataka TVKarnataka Tv
Sign in / Join
Wednesday, April 22, 2026
Sign in / Join
Facebook
Instagram
Twitter
Youtube
Karnataka TVKarnataka Tv
  • Home
  • ರಾಜಕೀಯ
  • ಜಿಲ್ಲಾ ಸುದ್ದಿಗಳು
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಸಿನಿಮಾ
    • ಬ್ಯೂಟಿ ಟಿಪ್ಸ್
  • ಕ್ರೀಡೆ
  • ಆಧ್ಯಾತ್ಮ
  • ತಂತ್ರಜ್ಞಾನ
  • ವೆಬ್ ಸ್ಟೋರಿ
type here...
  • Best MLA
    • old ಮೈಸೂರು
Home ರಾಜ್ಯ ಕಾರ್ಮಿಕರಿಗೆ ಗುಡ್‌ನ್ಯೂಸ್‌ : EPF ಹಣಕ್ಕೆ ಕಾಯಬೇಕಿಲ್ಲ
  • ರಾಜ್ಯ

ಕಾರ್ಮಿಕರಿಗೆ ಗುಡ್‌ನ್ಯೂಸ್‌ : EPF ಹಣಕ್ಕೆ ಕಾಯಬೇಕಿಲ್ಲ

July 18, 2025
WhatsApp
Twitter
Facebook
Linkedin
Telegram

    EPF ಅಕೌಂಟ್​​ನಿಂದ ಪೂರ್ಣ ಹಣ ಹಿಂಪಡೆಯಬೇಕೆಂದರೆ ಕಾರ್ಮಿಕರು ನಿವೃತ್ತಿ ಆಗೋವರೆಗೂ ಕಾಯಬೇಕು. ಇಲ್ಲವೇ ಕೆಲಸ ಕಳೆದುಕೊಂಡು ಮೂರು ತಿಂಗಳು ನಿರುದ್ಯೋಗಿಯಾಗಿರಬೇಕು. ಸರ್ಕಾರ ಈ ಸಂಬಂಧ ಕೆಲ ನಿರ್ಬಂಧಗಳನ್ನು ಸಡಿಲಿಸಿ ಹೊಸ ನಿಯಮ ರೂಪಿಸಿದೆ. ಪ್ರತೀ 10 ವರ್ಷಕ್ಕೊಮ್ಮೆ EPF ಹಣವನ್ನು ಪೂರ್ಣವಾಗಿ ಹಿಂಪಡೆಯುವ ಅವಕಾಶವನ್ನು ನೀಡಿದೆ ಎಂದು ಮನಿಕಂಟ್ರೋಲ್ ವೆಬ್​ಸೈಟ್ ತನ್ನ ಎಕ್ಸ್​ಕ್ಲೂಸಿವ್ ವರದಿಯಲ್ಲಿ ತಿಳಿಸಿದೆ.

    ಒಂದೊಮ್ಮೆ 10 ವರ್ಷಕ್ಕೆ ಪೂರ್ಣ ಬ್ಯಾಲನ್ಸ್ ಮೊತ್ತ ಹಿಂಪಡೆಯಲು ಅನುಮತಿಸುವ ನಿರ್ಧಾರ ತೆಗೆದುಕೊಳ್ಳದೇ ಹೋದರೂ, ಶೇ. 60ರಷ್ಟನ್ನಾದರೂ ವಿತ್​ಡ್ರಾ ಮಾಡಲು ಅನುಮತಿಸಬಹುದು. ಈ ವಿಚಾರವನ್ನೂ ಸರಕಾರ ಅವಲೋಕಿಸುತ್ತಿದೆ ಎಂದು ಹೇಳಲಾಗಿದೆ. ಸದ್ಯ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು 7.4 ಇಪಿಎಫ್ ಸದಸ್ಯರನ್ನು ಹೊಂದಿದ್ದು, ಅವರೆಲ್ಲರ EPF ಅಕೌಂಟ್​​ಗಳಲ್ಲಿ ಇರುವ ಹಣ ಬರೋಬ್ಬರಿ 25 ಲಕ್ಷ ಕೋಟಿ ರೂಪಾಯಿ ಆಗಿದೆ.

    ಈಗ 10 ವರ್ಷದ ವಿತ್​​ಡ್ರಾ ನಿಯಮದ ಪ್ರಕಾರ, ಹಣ ಹಿಂಪಡೆಯಲು ಯಾವುದೇ ಕಾರಣ ನೀಡುವ ಅಗತ್ಯ ಇರುವುದಿಲ್ಲ. EPF ಸದಸ್ಯರು ತಮ್ಮ ಹಣವನ್ನು ಬೇರೆಲ್ಲಿಯಾದರೂ ಹೂಡಕೆ ಮಾಡಬಹುದು. ಸದ್ಯ ಇಪಿಎಫ್​​ನಲ್ಲಿ ಶೇ. 8.25ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. ಅದರ ಬದಲು ಜನರು ಶೇ. 10-16 ವಾರ್ಷಿಕ ಲಾಭ ತರುವ ಮ್ಯುಚುವಲ್ ಫಂಡ್​ಗಳಲ್ಲಿಯೋ, ಷೇರುಗಳಲ್ಲಿಯೋ ಹೂಡಿಕೆ ಮಾಡಬಹುದು. ಈ ಕಾರಣಕ್ಕೆ ಸರ್ಕಾರವು 10 ವರ್ಷದ ನಿಯಮ ರೂಪಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

    ಇಪಿಎಫ್ ಹಣ ಹಿಂಪಡೆಯಲು ಈಗಲೂ ಕೂಡ 10 ವರ್ಷ ಕಾಯಬೇಕಿಲ್ಲ. ಮನೆ ನಿರ್ಮಾಣ, ವೈದ್ಯಕೀಯ ತುರ್ತು ಚಿಕಿತ್ಸೆ, ಶಿಕ್ಷಣ, ಮದುವೆ ಕಾರಣಗಳಿಗೆ ಇಪಿಎಫ್ ಅಕೌಂಟ್​ನಿಂದ ಅಡ್ವಾನ್ಸ್ ಹಣ ಹಿಂಪಡೆಯಲು ಅವಕಾಶ ಇದೆ. ನಿವೇಶನ ಖರೀದಿಸಲು ಅಥವಾ ಮನೆ ನಿರ್ಮಾಣ ಮಾಡಲು ಶೇ. 90ರವರೆಗೆ ಇಪಿಎಫ್ ಹಣ ಹಿಂಪಡೆಯಬಹುದು. ಈ ಮೊದಲು ಐದು ವರ್ಷ ಪಿಎಫ್ ಅಕೌಂಟ್​ನಿಂದ ಯಾವುದೇ ಹಣ ಹಿಂಪಡೆಯದೇ ಇದ್ದಾಗ ಮನೆ ನಿರ್ಮಾಣಕ್ಕೆ ಹಣ ಹಿಂಪಡೆಯಬಹುದಿತ್ತು. ಅದನ್ನು ಈಗ ಮೂರು ವರ್ಷಕ್ಕೆ ಇಳಿಸಲಾಗಿದೆ. ತುರ್ತು ಸಂದರ್ಭಗಳಿಗೆ ಹಣದ ಅವಶ್ಯಕತೆ ಪೂರೈಸಲು ಈ ಅವಕಾಶ ಕೊಡಲಾಗುತ್ತಿದೆ.

     

    ವರದಿ:ರಂಜಿತ ರೇವಣ್ಣ ನಾಟನಹಳ್ಳಿ

    About The Author

    Karnataka Tv

    See author's posts

    • TAGS
    • ]karnataka tv
    • #centralgovernment
    • EPF money
    • money control website
    • PF account
    • Retirement age
    • Web Story
    Share
    WhatsApp
    Twitter
    Facebook
    Linkedin
    Telegram
      Previous articleಅವರಿಬ್ಬರ ಮಕ್ಕಳಷ್ಟೇ ಬೆಳೀಬೇಕು ; ಬಿಎಸ್‌ವೈ, ಸಿದ್ದು ವಿರುದ್ಧ ಬೆಂಕಿಯುಗುಳಿದ ಯತ್ನಾಳ್  : ಸಿದ್ದರಾಮಯ್ಯ, ಯಡಿಯೂರಪ್ಪ ನಡುವೆ ಅಡ್ಜಸ್ಟ್‌ಮೆಂಟ್‌ ರಾಜಕೀಯ ಎಂದ ಫೈರ್‌ ಬ್ರ್ಯಾಂಡ್!
      Next articleಸಿದ್ದು ರಾಹುಲ್‌ಗೆ ಚಮಚ: H.ವಿಶ್ವನಾಥ್ ಚಾಲೆಂಜ್
      Karnataka Tv

      RELATED ARTICLESMORE FROM AUTHOR

      𝟭𝟬𝟬 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ಭವ್ಯ ‘ತಿರುಪತಿ ವೆಂಕಟೇಶ್ವರ’ ದೇವಸ್ಥಾನ

      Hubli News: 7 ಸಾವಿರ ತಾಯಂದಿರಿಂದ ಹಾಲು ದಾನ, 2.5 ಸಾವಿರ ಶಿಶುಗಳಿಗೆ ಪ್ರಯೋಜನದ ದಾಖಲೆ!

      ಬೆಂಗಳೂರಿನ ‘ಟ್ರಾಫಿಕ್ ನರಕ’ ಈಗ ಗೋಲ್ಡನ್ ಕಾರಿಡಾರ್!

      Stay connected

      Facebook
      Instagram
      Twitter
      Youtube

      © 2026 Karnataka TV - All Rights Reserved | Powered by Kalahamsa Infotech Pvt. ltd.