Sunday, July 6, 2025

Latest Posts

ಗುಡ್ ನ್ಯೂಸ್ ನೀಡಿದ ಕೆ.ಎಲ್.ರಾಹುಲ್- ಆಥಿಯಾ: ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆ

- Advertisement -

Bollywood News: ಕ್ರಿಕೇಟಿಗ ಕೆ.ಎಲ್.ರಾಹುಲ್ ಮತ್ತು ನಟ ಸುನೀಲ್ ಶೆಟ್ಟಿ ಪುತ್ರಿ, ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಆಥಿಯಾ ಗರ್ಭಿಣಿಯಾಗಿದ್ದಾರೆ. ಆಥಿಯಾ ಮತ್ತು ರಾಹುಲ್ ಈಗಾಗಲೇ ಪೋಷಕರಾಗಿದ್ದು, ಮುಂದಿನ ವರ್ಷ ಜನವರಿಗೆ ಮಗುವನ್ನು ಬರ ಮಾಡಿಕೊಳ್ಳಲಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಜೋಡಿ, ಅವರ್ ಬ್ಯೂಟಿಫುಲ್ ಬ್ಲೆಸ್ಸಿಂಗ್ ಈಸ್ ಕಮಿಂಗ್ ಸೂನ್ 2025 ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಾವು ತಂದೆ ತಾಯಿಯಾಗುತ್ತಿದ್ದು, ಮುಂದಿನ ವರ್ಷವೇ ಮಗುವಿನ ಆಗಮನವಾಗಲಿದೆ ಎಂದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ, ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೇಟಿಗರು ಶುಭಕೋರಿದ್ದಾರೆ.

ಆಥಿಯಾ ಮತ್ತು ರಾಹುಲ್ 2019ರಿಂದಲೇ ಡೇಟಿಂಗ್ ಮಾಡುತ್ತಿದ್ದು, 2023ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇನ್ನು ಅಥಿಯಾ ಮತ್ತು ರಾಹುಲ್ ಕೆಲ ತಿಂಗಳ ಹಿಂದಷ್ಟೇ ನಟಿ ಕಟ್ರೀನಾ ಕೈಫ್ ಜೊತೆ ಮಂಗಳೂರಿಗೆ ಬಂದು, ಕುತ್ತಾರಿನಲ್ಲಿ ನಡೆದ ಕೊರಗಜ್ಜನ ಭೂತಕೋಲದಲ್ಲಿ ಭಾಗಿಯಾಗಿದ್ದರು. ಅದಕ್ಕೂ ಮುನ್ನ ಬಪ್ಪನಾಡು ದುರ್ಗಾ ಪರಮೇಶ್ವರಿ ಅಮ್ಮನವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದರು. ರಾಹುಲ್ ಮತ್ತು ಆತಿಯಾ ಇಬ್ಬರೂ ತುಳುವರೇ ಆಗಿದ್ದರಿಂದ, ತುಳುನಾಡಿನ ಎಲ್ಲ ಪದ್ಧತಿಗಳನ್ನು ಈಗಲೂ ಅನುಸರಿಸುತ್ತಿದ್ದಾರೆ.

- Advertisement -

Latest Posts

Don't Miss