ದಸರಾ ಪ್ರಯುಕ್ತ ನೈರುತ್ಯ ರೈಲ್ವೆ ಕೊಟ್ಟ ಸಿಹಿ ಸುದ್ಧಿ..!

ಹುಬ್ಬಳ್ಳಿ: ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರಿಗೆ ನೈರುತ್ಯ ರೈಲ್ವೆ ಹುಬ್ಬಳ್ಳಿ ವಲಯ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ಹೆಚ್ಚುವರಿ ಬೋಗಿಗಳನ್ನು ವಿವಿಧ ರೈಲಿಗೆ ಅಳವಡಿಕೆ ಮಾಡಲಾಗಿದೆ.


ಹೌದು.. ದಸರಾ ಹಬ್ಬದಂದು ಪ್ರಯಾಣಿಕರಿಗೆ ತೊಂದರೆಯಾಗದಂತೆ ಮತ್ತು ಜನರ ದಟ್ಟಣೆ ತಪ್ಪಿಸಲು ಹಲವು ರೈಲುಗಳಿಗೆ ಹೆಚ್ಚುವ ರೈಲು ಸಂಖ್ಯೆ 06582 ಮೈಸೂರು- ಹುಬ್ಬಳ್ಳಿ, ರೈಲು ಸಂಖ್ಯೆ 06535 ಮೈಸೂರು- ಸೊಲ್ಲಾಪೂರ, ಹಾಗೇ ಮೈಸೂರು – ಶಿವಮೊಗ್ಗ, ಬೆಂಗಳೂರು – ಹುಬ್ಬಳ್ಳಿ ರೈಲುಗಳಿಗೆ ಅ.13 ಮತ್ತು 14ರಂದು ಹೆಚ್ಚುವರಿ ಬೋಗಿ ಇರಲಿದೆ.


ಹುಬ್ಬಳ್ಳಿ- ಮೈಸೂರು ರೈಲಿಗೆ ಅ.17 ರಂದು ಎರಡು ಹೆಚ್ಚುವರಿ ಬೋಗಿಯನ್ನು ಜೋಡಿಸಲಾಗಿದೆ. ಹಾಗೇ ಅ.13ರಿಂದ 16 ರವರೆಗೆ ಬೆಂಗಳೂರು- ಮೀರಜ್ ಮತ್ತು ಬೆಂಗಳೂರು- ಬೆಳಗಾವಿ ರೈಲಿಗೆ ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಗಿದೆ.
ಮೈಸೂರು ದಸರಾ ಸಂದರ್ಭದಲ್ಲಿ ಬೆಂಗಳೂರು ನಗರದಿಂದ ಮೈಸೂರಿಗೆ ಹೆಚ್ಚಿನ ಜನರು ಪ್ರಯಾಣ ಮಾಡುತ್ತಾರೆ ಮತ್ತು ಬೆಂಗಳೂರು – ಮೈಸೂರಿಗೆ ಪ್ರಾಯಾಣಿಸಿದ ಜನರಿಗೆ ಅನುಕೂಲಕ್ಕಾಗಿ ರೈಲುಗಳ ಪಟ್ಟಿಯನ್ನು ನೈಋತ್ಯ ರೈಲ್ವೆ ಪ್ರಕಟಿಸಿದೆ.

ಕರ್ನಾಟಕ ಟಿವಿ- ಹುಬ್ಬಳ್ಳಿ

About The Author