ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಚಂದ್ರಯಾನ-3 ನೌಕೆಯನ್ನು ಚಂದ್ರನ ಅಂಗಳದಲ್ಲಿ ಇಳಿಸುವ ಮೂಲಕ ಯಶಸ್ವಿಯಾಗಿದ್ದು, ಇಸ್ರೋ ತಂಡಕ್ಕೆ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅಭಿನಂದಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, “ಭಾರತದ ISRO ಮತ್ತೊಮ್ಮೆ ಸಾಧನೆ ಮಾಡಿದೆ. ಚಂದ್ರಯಾನ 3 ರ ಯಶಸ್ವಿ ಮಿಷನ್ ಬಾಹ್ಯಾಕಾಶ ಪರಿಶೋಧನೆಯಲ್ಲಿ ಮತ್ತೊಂದು ಯಶಸನ್ನು ಗುರುತಿಸುತ್ತದೆ. ಈ ಮಿಷನ್ ನ ಯಶಸ್ವಿಯಲ್ಲಿ ಭಾಗಿಯಾದ ಇಸ್ರೋದ ವಿಜ್ಞಾನಿಗಳು ಸೇರಿದಂತೆ ಪ್ರತಿಯೊಬ್ಬರಿಗೂ, ಇಡೀ ತಂಡಕ್ಕೆ ಅವರ ಸಮರ್ಪಣೆ ಮತ್ತು ನಾವೀನ್ಯತೆಗಾಗಿ ಅಭಿನಂದನೆಗಳು!” ಎಂದಿದ್ದಾರೆ.
ಅಲ್ಲದೆ, ವಿಶ್ವದಲ್ಲಿ ದೇಶದ ಕೀರ್ತಿ ಹೆಚ್ಚಿಸಿದ ಎಲ್ಲರಿಗೂ ನನ್ನ ಹೃದಯ ಪೂರ್ವಕ ನಮನಗಳು. ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶದ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆಯಲಾಗಿದೆ ಎಂದು ಹೇಳಿದ್ದಾರೆ.
Police tweet: ವೀಲಿಂಗ್ ಮಾಡುವವನನ್ನು ಬಂಧಿಸಿ ವಿಶೇಷವಾಗಿ ಟ್ವೀಟ್ ಮಾಡಿದ ಪೊಲೀಸರು..!
Drought Area: ನಾಯಕನಹಟ್ಟಿನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಲು ಒತ್ತಾಯ..!
Drought Area: ನಾಯಕನಹಟ್ಟಿನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಲು ಒತ್ತಾಯ..!