ಸರ್ಕಾರ-ರಾಜಮನೆತದ ಕಿತ್ತಾಟ: ‘ಮಾಲ್’ ಪ್ರಾಜೆಕ್ಟ್‌ಗೆ ದೊಡ್ಡ ಬ್ರೇಕ್!

ಮೈಸೂರಿನ ರಾಜವಂಶಸ್ಥರು ಮತ್ತು ಸರ್ಕಾರದ ನಡುವಿನ ನೆಗೆಟಿವ್ ಚರ್ಚೆಗಳು ಮುಂದುವರೆದಿವೆ. ರಾಜವಂಶಸ್ಥ ಯದುವೀರ್ ಮಾಡಿದ್ದ ಗುದ್ದಲಿ ಪೂಜೆಯ ಪ್ರಾಜೆಕ್ಟ್​​​ಗೆ ಸ್ವತಃ ರಾಜವಂಶಸ್ಥೆ ಪ್ರಮೋದಾ ದೇವಿ ನಿರ್ಬಂಧ ಹೇರಿದ್ದಾರೆ. ಸರ್ಕಾರ- ರಾಜಮನೆತನದ ಬಹಿರಂಗ ಯುದ್ಧಕ್ಕೆ ಇದೀಗ ಅಂತರ್ ಯುದ್ಧವೂ ಸೇರ್ಪಡೆಯಾದಂತಿದೆ‌.

ಪ್ರಮೋದಾ ದೇವಿ ‘ಯುನಿಟಿ ಮಾಲ್’ ನಿರ್ಮಾಣ ಕಾರ್ಯವನ್ನು ತಡೆಹಿಡಿಯಲು ಕೋರ್ಟ್ಗೆ ಮನವಿ ಮಾಡಿದ್ದು, ಅಂದಿನ ಆದೇಶದಂತೆ ಯಾವುದೇ ಕಾಮಗಾರಿ ನಡೆಯಬಾರದು ಹಾಗೂ ಯೋಜನೆಯ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ನ್ಯಾ. ಕೋರ್ಟ್ ಸೂಚಿಸಿದೆ.

ಈ ಕೇಂದ್ರದ ಮಹತ್ವದ ಯೋಜನೆ, PPP ಮಾದರಿಯಲ್ಲಿ 193 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವಂತಿತ್ತು. ಯೋಜನೆಯ ಪ್ರಕಾರ, 2027 ರೊಳಗೆ ‘ಯುನಿಟಿ ಮಾಲ್’ ಪೂರ್ಣಗೊಂಡು ಕಾರ್ಯಾರಂಭ ಮಾಡಬೇಕಾಗಿತ್ತು.

ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಅಡ್ಡಿಯ ಬಗ್ಗೆ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. “ರಾಜಕಾಲುವೆ ಒತ್ತುವರಿ ಹಾಕಿ, ಸರ್ಕಾರದ ಸಂಸ್ಥೆಯೇ ಕಾಮಗಾರಿ ಮಾಡಲು ಮುಂದಾಗಿತ್ತು. ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಪ್ರತಿಭಟನೆಯ ಬಳಿಕ ಸ್ಥಳ ಪರಿಶೀಲನೆ ಮಾಡಿದಾಗ, ಕಾಮಗಾರಿ ಅನುಮತಿ ಇಲ್ಲದೆ ನಡೆಯುತ್ತಿದ್ದದ್ದು ಬೆಳಕಿಗೆ ಬಂದಿತ್ತು ಎಂದು ತಿಳಿಸಿದ್ದಾರೆ. ಒಟ್ನಲ್ಲಿ ಯದುವೀರ್​​​​​​ ನೆರವೇರಿಸಿದ್ದ ‘ಯುನಿಟಿ ಮಾಲ್’​​​ ನಿರ್ಮಾಣಕ್ಕೆ ಸದ್ಯ ಸ್ಟೇ ಇದೆ. ಮುಂದೇನಾಗುತ್ತೆ ಕಾದು ನೋಡಬೇಕು ಅಷ್ಟೇ.

ವರದಿ : ಲಾವಣ್ಯ ಅನಿಗೋಳ

About The Author