Tuesday, May 28, 2024

Latest Posts

ಯಡಿಯೂರಪ್ಪನವರ ಜೊತೆ ಸರ್ಕಾರ ಮಾಡಿದ್ದು ಸುವರ್ಣ ಯುಗ: ಹೆಚ್.ಡಿ.ಕುಮಾರಸ್ವಾಮಿ

- Advertisement -

Political News: ರಾಮನಗರದಲ್ಲಿ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮೈತ್ರಿಗೆ ಸಂಬಂದಿಸಿದಂತೆ ಗೋವಾ ಸಿಎಂ ಪ್ರಮೋದ್ ಸಾವಂತ್ ಕಾರ್ಯ ದೊಡ್ಡ ಮಟ್ಟದಲ್ಲಿದೆ. ಇಂದು ಈ ವಾತಾವರಣ ಮೂಡುವಲ್ಲಿ ಸಾವಂತ್ ಪಾತ್ರ ದೊಡ್ಡದು. ನನ್ನ ಮತ್ತು ರಾಮನಗರದ ಸಂಬಂಧ ತಾಯಿ-ಮಗುವಿನ ಸಂಬಂಧ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ರಾಮನಗರಕ್ಕೆ ನಮ್ಮ‌ ಕೊಡುಗೆ ಏನು ಎಂದು ನಮ್ಮ ಎದುರಾಳಿಗಳು ಕೇಳುತ್ತಾರೆ. 1994 ರಲ್ಲಿ ರಾಮನಗರದ ಪರಿಸ್ಥಿತಿ ಏನಿತ್ತು, ಈಗ ಹೇಗಿದೆ ಎಂದು ಕೇಳಲು ಬಯಸುತ್ತೇನೆ. ಕನಕಪುರದಲ್ಲಿ ನರೇಗಾ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಲೂಟಿ ಹೊಡೆದಿದ್ದೇ ಇವರ ಸಾಧನೆ. ಕನಕಪುರದಲ್ಲಿ ರೈತರು ಹೊಲಕ್ಕೆ ಹೋಗದಂತೆ ಮಾಡಿ, ಅಧಿಕಾರಿಗಳನ್ನು ಗುಲಾಮರಂತೆ ಕಂಡ ವ್ಯಕ್ತಿಗಳು ಈ ಅಣ್ಣತಮ್ಮಂದಿರು. ನನ್ನ ಸರ್ಕಾರಕ್ಕೆ ಇವರು ಯಾವ ರೀತಿ ಬೆಂಬಲ ಕೊಟ್ಟಿದ್ದರು ಅಂತಾ ನಾನು ಅನುಭವಿಸಿದ್ದೇನೆ. ಯಡಿಯೂರಪ್ಪನವರ ಜೊತೆ ಸರ್ಕಾರ ಮಾಡಿದ್ದು ಸುವರ್ಣ ಯುಗ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಯೆಸ್. ನಾನು ತಪ್ಪು ಮಾಡಿದ್ದೇನೆ. ಕಾಂಗ್ರೆಸ್ ಜೊತೆ ಸಹವಾಸ ಮಾಡಿ ನನ್ನ ನಿಷ್ಠಾವಂತ ಕಾರ್ಯಕರ್ತರನ್ನು ಕಳೆದುಕೊಂಡು ನಿಂತಿದ್ದೇನೆ. ಅಣ್ಣತಮ್ಮಂದಿರು ಮಂಡ್ಯದಲ್ಲಿ ಕುತ್ತಿಗೆ ಕುಯ್ದರು. ಕಾಂಗ್ರೆಸ್ ಅಭ್ಯರ್ಥಿ 2019 ರಲ್ಲಿ ಗೆಲ್ಲಲು ಜೆಡಿಎಸ್ ಕೊಡುಗೆಯನ್ನು ಅವರು ಮರೆತರೆ ದೇವರು ಪ್ರಾಯಶ್ಚಿತ್ತ ಕೊಡಲ್ಲ. ನಾನು ಅವತ್ತು ಮನಸ್ಸು ಮಾಡಿರುತ್ತಿದ್ದರೆ ಪಾಪ ಅವತ್ತೇ ಹಾರಿ ಹೋಗುತ್ತಿದ್ದಿರಿ. ಜಿಲ್ಲೆಗೆ ಕೊಟ್ಟ ಕೊಡುಗೆ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ. ಕನಕಪುರದ ಡಬಲ್ ರೋಡ್ ಕುಮಾರಸ್ವಾಮಿ ಕೊಡುಗೆ. ಕನಕಪುರದ ಅಭಿವೃದ್ಧಿ ಯಡಿಯೂರಪ್ಪ ಮಾಡಿದ್ದು, ಶಿವಕುಮಾರ್ ಅಲ್ಲ. ಅಣ್ಣ ತಮ್ಮಂದಿರ ಆಟ ಕೊನೆಯಾಗುವ ಕಾಲ ಸನ್ನಿಹಿತ. ನಾನು ಸಿಎಂ ಆಗಿದ್ದಾಗ ಕನಕಪುರ ಮೆಡಿಕಲ್ ಕಾಲೇಜಿಗೆ ದುಡ್ಡು ಕೊಟ್ಟಿದ್ದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

H. D. Kumaraswamy : ಮಂಡ್ಯ : ನಾಮಪತ್ರ ಸಲ್ಲಿಸಿದ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ

ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ: ವಿಜಯೇಂದ್ರ ಆಹ್ವಾನದ ಬಳಿಕವೂ ಗೈರಾದ ಪ್ರೀತಂಗೌಡ

ನಾಮಪತ್ರ ಸಲ್ಲಿಕೆ ಬಳಿಕ ಡಿ.ಕೆ.ಸುರೇಶ್ ಕಾರಿಗೆ ಮೈತ್ರಿ ಕಾರ್ಯಕರ್ತರಿಂದ ಮುತ್ತಿಗೆ..

- Advertisement -

Latest Posts

Don't Miss