ರಾಜ್ಯದಲ್ಲಿ ದಿನದಿಂದ ದಿನಕ್ಕೆ ರಾಜ್ಯಪಾಲ ಹಾಗೂ ಸಿಎಂ ಸಿದ್ದರಾಮಯ್ಯ ನಡುವಿನ ಸಂಘರ್ಷ ಜೋರಾಗಿ ನಡೀತಿದೆ. ರಾಜಭವನದಿಂದ 8 ತಿಂಗಳಲ್ಲಿ ಬರೋಬ್ಬರಿ 11 ವಿಧೇಯಕ ವಾಪಸ್ ಆಗಿವೆ. ಆಗಸ್ಟ್ ತಿಂಗಳಿನಲ್ಲೇ ರಾಜ್ಯಪಾಲರಿಂದ 6 ಮಸೂದೆ ರಿಜೆಕ್ಟ್ ಆಗಿದ್ದು, ರಾಜ್ಯಪಾಲರಿಂದ ಕಾಯ್ದೆ ಪಾಸಾಗದೇ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.
ಕೆಲ ವಿಧೇಯಕಗಳ ಕುರಿತು ರಾಜ್ಯಪಾಲರು ಸರ್ಕಾರಕ್ಕೆ ಸ್ಪಷ್ಟನೆಗಳೇನನ್ನು ಕೇಳಿದ್ದಾರೆ. ಕರ್ನಾಟಕ ಸರ್ಕಾರ ಸಂಘಗಳ ವಿಧೇಯಕ 2024ರಲ್ಲಿ ಸಾಕಷ್ಟು ಗೊಂದಲಗಳಿವೆ. ಈ ವಿಧೇಯಕ ವಿರೋಧಿಸಿ ವಿಪಕ್ಷಗಳು ನನಗೆ ಮನವಿ ಸಲ್ಲಿಸಿದ್ದಾರೆ. ವಿಧೇಯಕದಲ್ಲಿನ ಅಂಶಗಳಿಗೆ ವ್ಯತಿರಿಕ್ತವಾದಂತದ ನ್ಯಾಯಲಯ ಆದೇಶಗಳಿವೆ ಅಂತ ರಾಜಭವನ ಸರ್ಕಾರಕ್ಕೆ ತಿಳಿಸಿದೆ. ಇದೇ ರೀತಿ ಸಾಕಷ್ಟು ವಿಧೇಯಕಗಳಲ್ಲಿ ಕಾನೂನಾತ್ಮಕ ತೊಡಕು ಇವೆ ಎಂದು ರಾಜಭವನ ತಿಳಿಸಿದೆ.
ಯಾವ ಯಾವ ಮಸೂದೆ ವಾಪಸ್..?1) ಕರ್ನಾಟಕ ಸಾರ್ವಜನಿಕ ಪರೀಕ್ಷಾ ವಿಧೇಯಕ
2) ಕರ್ನಾಟಕ ಧಾರ್ಮಿಕ ದತ್ತಿ (ತಿದ್ದುಪಡಿ) ವಿಧೇಯಕ
3) ಕರ್ನಾಟಕ ಟೌನ್ ಅಂಡ್ ಕಂಟ್ರಿ ಪ್ಲಾನಿಂಗ್ ವಿಧೇಯಕ
4) ಕರ್ನಾಟಕ ಶಾಸಕಾಂಗ ಸದಸ್ಯರ (ಅನರ್ಹತೆ ತಡೆ) ವಿಧೇಯಕ
5) ಕರ್ನಾಟಕ ಪುರಸಭೆಗಳು ಮತ್ತು ಕೆಲ ಇತರೆ ಕಾನೂನು ವಿಧೇಯಕ
6) ಚಲನಚಿತ್ರ ಮತ್ತು ಸಾಂಸ್ಕೃತಿಕ ಕಲಾವಿದರ ಕಲ್ಯಾಣ ವಿಧೇಯಕ
7) ಕರ್ನಾಟಕ ಸಹಕಾರ ಸಂಘಗಳ (ತಿದ್ದುಪತಿ) ವಿಧೇಯಕ
8) ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪತಿ) ವಿಧೇಯಕ
9) ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ವಿಧೇಯಕ
10) ಗದಗ ಬೆಟಗೇರಿ ವ್ಯಾಪಾರ, ಸಂಸ್ಕೃತಿ, ಪ್ರದರ್ಶನ ಪ್ರಾಧಿಕಾರ ವಿಧೇಯಕ
11) ಕರ್ನಾಟಕ ನೋಂದಣಿ(ತಿದ್ದುಪಡಿ) ವಿಧೇಯಕ