ಬೆಳಗಾವಿ: ವೀರ್ ಸಾವರ್ಕರ್ ಅವರು ದೇಶದ ಮಹಾನ್ ವ್ಯಕ್ತಿ, ದೇಶಕ್ಕಾಗಿ ಹೋರಾಡಿದ ಯಶಸ್ಸು ಅವರಿಗೂ ಸಲ್ಲುತ್ತದೆ. ಇನ್ನು ವೀರ್ ಸಾವರ್ಕರ್ ಫೋಟೋ ಹಿಡಿದು ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ. ಕಾಂಗ್ರೆಸ್ ನವರು ಇಂತಹ ವಿವೇಚನೆ ಇಲ್ಲದ ವಿಚಾರಗಳ ಪ್ರಸ್ತಾಪಿಸಿ, ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ, ಜನವೆರಿ 1ರೊಳಗೆ ಪ್ರಕಟಿಸಲಾಗುವುದು : ಡಿಕೆ ಶಿವಕುಮಾರ್
ದೇಶದಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನ ತಿರಸ್ಕರಿಸಿದ್ದಾರೆ. ಈಗಲೂ ಅವರಿಗೆ ಬುದ್ದಿ ಬಂದಿಲ್ಲ ಅಂದ್ರೆ ಜನರೇ ತಿರ್ಮಾನ ಮಾಡುತ್ತಾರೆ ಎಂದರು. ಬಸವಣ್ಣ, ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿಜೀ ಸೇರಿದಂತೆ ಇನ್ನೂ ಹಲವು ರಾಷ್ಟ್ರೀಯ ನಾಯಕರ ಭಾವಚಿತ್ರಗಳನ್ನ ಹಾಕುತ್ತೇವೆ. ಬಸವಣ್ಣನವರ ಫೋಟೋ ಹಾಕುವ ಬಗ್ಗೆ ನಾವು ಕಾಂಗ್ರೆಸ್ ನಿಂದ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು. ಕಾಂಗ್ರೆಸ್ ನ್ನ ಜನರು ತಿರಸ್ಕಾರ ಮಾಡಿದ್ದಾರೆ. ಹಾಗಾಗಿ ಅವರು ಬೀದಿಗೆ ಬಿದ್ದು, ಹೋರಾಟ ನಡೆಸಿದ್ದಾರೆ. ದೇಶದ ಜನ, ಅವರು ಅಧಿಕಾರ ನಡೆಸಲು ಸಮ್ಮತಿಸುವುದಿಲ್ಲ ಎಂದು ಕಿಡಿಕಾರಿದರು.
ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಕುರಿತು ಗುಪ್ತಚರ ವರದಿ ಬಹಿರಂಗಪಡಿಸಿದೆ : ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್