Thursday, November 13, 2025

Latest Posts

ಧರ್ಮಸ್ಥಳ ಮತ್ತೊಂದು ಜಯ ಗುಟ್ಟು ಬಿಚ್ಚಿಡುತ್ತಾ GPR ?

- Advertisement -

ಧರ್ಮಸ್ಥಳದಲ್ಲಿ ತನಿಖೆ ನಡೆಸುತ್ತಿರುವ SIT ತಂಡ ಕೊನೆಗೂ GPR ಬಳಸಿ ತನಿಖೆ ನಡೆಸೋಕೆ ಮುಂದಾಗಿದೆ. 13 ಮತ್ತು 14ನೇ ಪಾಯಿಂಟ್‌ನಲ್ಲಿ ಯಾವುದೇ ಅವಶೇಷಗಳು ಸಿಗದ ಕಾರಣ ಅನಾಮಿಕ ವ್ಯಕ್ತಿ GPR ಮೂಲಕ ತನಿಖೆ ನಡೆಸಬೇಕು ಎಂದು ಕೇಳಿಕೊಂಡಿದ್ದ. ಹಾಗಾದ್ರೆ ಏನಿದು GPR? ಯಾಕೆ ಮತ್ತು ಹೇಗೆ GPR ಕಾರ್ಯನಿರ್ವಹಿಸತ್ತೆ ಅನ್ನೋ ಮಾಹಿತಿಯನ್ನ ನೋಡ್ತಾ ಹೋಗೋಣ.

ಭಾರತದ ವಿವಿಧ ರಾಜ್ಯಗಳಲ್ಲಿ ಅಪರೂಪದ ಪ್ರಕರಣಗಳಲ್ಲಿ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (Ground Penetrating Radar) ಅಥವಾ GPR ತಂತ್ರಜ್ಞಾನ ಇದೀಗ ಕ್ರಿಮಿನಲ್ ತನಿಖೆಗಳಲ್ಲೂ ಮಹತ್ವ ಪಡೆದಿದೆ. ಧರ್ಮಸ್ಥಳ ಪ್ರಕರಣದಿಂದ ಹಿಡಿದು, ಅಯೋಧ್ಯೆ, ಉನ್ನಾವ್ ಮತ್ತು ಇತ್ತೀಚಿನ ಉತ್ತರ ಕನ್ನಡ ಹಾಗೂ ಕೇರಳದ ಪ್ರಕರಣಗಳವರೆಗೂ – ನೆಲದಡಿಯ ಸತ್ಯಗಳನ್ನು ಪತ್ತೆ ಹಚ್ಚಲು ಇದು ಪ್ರಮುಖ ಪಾತ್ರ ವಹಿಸುತ್ತಿದೆ.

GPR ಅಂದರೆ ನೆಲದೊಳಗಿನ ವಸ್ತುಗಳನ್ನು ಪತ್ತೆ ಹಚ್ಚುವ ರಾಡಾರ್ ತಂತ್ರಜ್ಞಾನ. ಇದು ರೇಡಿಯೋ ತರಂಗಗಳನ್ನು ನೆಲದೊಳಗೆ ಕಳುಹಿಸಿ, ಪ್ರತಿಬಿಂಬಗಳನ್ನು ಹಿಡಿದು ಆ ಆಧಾರದ ಮೇಲೆ ಅಲ್ಲಿ ಏನಿದೆಯೆಂಬುದನ್ನು ತೋರಿಸುತ್ತದೆ. ಹಳೆಯ ಕಟ್ಟಡದ ಅವಶೇಷಗಳು, ಕಬ್ಬಿಣದ ವಸ್ತುಗಳು, ಪೈಪುಗಳು, ತಂತಿಗಳು, ಮಣ್ಣಿನ ಬದಲಾವಣೆಗಳು, ಎಲ್ಲವನ್ನೂ GPR ಸ್ಕ್ಯಾನ್ ಪತ್ತೆ ಹಚ್ಚಬಹುದು.

ಇದರಲ್ಲಿ ವಿಶೇಷವಾದ ಅಂಶವೆಂದರೆ – ನೆಲ ಕೆದಕದೆ ಸುಲಭವಾಗಿ ಪರೀಕ್ಷೆ ಮಾಡಬಹುದಾಗಿದೆ, ತಕ್ಷಣ ಫಲಿತಾಂಶ ಸಿಗುತ್ತದೆ ಮತ್ತು ಪ್ರಕೃತಿಗೆ ಯಾವುದೇ ಹಾನಿಯೂ ಆಗುವುದಿಲ್ಲ. ಇತ್ತೀಚೆಗೆ GPR ಹೆಚ್ಚು ಚರ್ಚೆಗೆ ಬಂದಿದೆ ಧರ್ಮಸ್ಥಳದ ಮಾಸ್ಬುರಿಯಲ್ ಪ್ರಕರಣದೊಂದಿಗೆ. ಅನೇಕ ಮಹಿಳೆಯರು ಕಾಣೆಯಾಗಿರುವ ಹಿನ್ನೆಲೆಯಲ್ಲಿ, ಶಂಕಿತ ಸ್ಥಳಗಳಲ್ಲಿ GPR ಉಪಯೋಗಿಸಿ ಶೋಧನೆ ನಡೆಸಲು ಆಗ್ರಹಿಸಲಾಗಿದೆ. ಈ ಪ್ರಕರಣದಲ್ಲಿ ನೆಲದೊಳಗೆ ಹೂಳಲಾಗಿದೆ ಎಂಬ ಗಂಭೀರ ಅನುಮಾನಗಳು ಇದ್ದು, ಈ ತಂತ್ರಜ್ಞಾನದ ನೆರವು ಬಹುಮುಖ್ಯವಾಗಿದೆ.

ಇದೆ ತಂತ್ರಜ್ಞಾನವನ್ನು ಅಯೋಧ್ಯೆ ಯಲ್ಲಿಯೂ ಬಳಸಲಾಗಿತ್ತು – ಮಸೀದಿಯ ಕೆಳಗೆ ಹಳೆಯ ದೇವಸ್ಥಾನವಿದೆಯಾ ಎಂಬುದನ್ನು ಪರಿಶೀಲಿಸಲು. GPR ಮೂಲಕ ಆಧಾರಶಿಲೆಗಳ ಚಿತ್ರಣ ಸಿಕ್ಕಿದ್ದು, ಈ ದೃಶ್ಯಾವಳಿಗಳು ಸುಪ್ರೀಂ ಕೋರ್ಟ್ ತನಿಖೆಗೂ ಅವಿಭಾಜ್ಯ ಭಾಗವಾಯಿತು. ಉನ್ನಾವ್ ಜಿಲ್ಲೆಯ ಬಂಗಾರದ ಕಥೆಯೂ ಬಹಳ ಪ್ರಸಿದ್ಧ. ಭವಿಷ್ಯದಲ್ಲಿ ಬಂಗಾರ ಪತನವಾಗಿದೆ ಎಂಬ ಕನಸಿನ ಪ್ರಕಾರ, ASI ಹಾಗೂ ವಿಜ್ಞಾನಿಗಳು GPR ಉಪಯೋಗಿಸಿ ಶೋಧನೆ ನಡೆಸಿದ್ರು. ಬಹುಮೌಲ್ಯವಾದ ವಸ್ತುಗಳು ಸಿಕ್ಕಿಲ್ಲವಾದರೂ, GPR ಬಳಕೆಯು ಎಲ್ಲರ ಗಮನಸೆಳೆದಿತು.

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ, ಇತ್ತೀಚೆಗಷ್ಟೇ ಕಾಣೆಯಾದ ಟ್ರಕ್ ಚಾಲಕನ ಶೋಧ ಕಾರ್ಯಾಚರಣೆಯಲ್ಲಿ NITK ತಂಡ GPR ಬಳಸಿ ನೆಲದೊಳಗಿನ ಯಾವುದೇ ವಾಹನ ಅಥವಾ ಮಾನವ ಶರೀರದ ಗುರುತುಗಳನ್ನು ಹುಡುಕಲು ಪ್ರಯತ್ನಿಸಿದೆ. ಇದು ತುರ್ತು ರಕ್ಷಣಾ ಕಾರ್ಯದಲ್ಲಿ GPR ಎಷ್ಟು ಉಪಯುಕ್ತವೋ ತೋರಿಸಿದೆ. ಕೇರಳದಲ್ಲಿಯೂ ಮಹಿಳೆಯರು ಕಾಣೆಯಾದ ಪ್ರಕರಣದಲ್ಲಿ, Crime Branch ಅಧಿಕೃತರು ಶಂಕಿತ ಮನೆ ಮತ್ತು ಸ್ಥಳಗಳಲ್ಲಿ GPR ಉಪಯೋಗಿಸಿ ಶೋಧನೆ ನಡೆಸಿದ್ರು. ಈ ಬಾರಿ ಯಾವುದೇ ಪ್ರಮುಖ ಪತ್ತೆ ಸಿಕ್ಕಿಲ್ಲ, ಆದರೆ ತಂತ್ರಜ್ಞಾನದ ನಿಖರತೆಯೂ ನಂಬಿಕೆಯನ್ನು ನೀಡುತ್ತದೆ.

ಮತ್ತೊಂದು ಘಟನೆ – ಭಾರಿ ಮಳೆಯ ನಂತರದ ಲ್ಯಾಂಡ್ಸ್ಲೈಡ್ನಲ್ಲಿ ಟ್ರಕ್ ಚಾಲಕ ಅರ್ಜುನ್ ಮಣ್ಣಿನಡಿಯಲ್ಲಿ ಪತನಗೊಂಡಿರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ, GPR ಉಪಯೋಗಿಸಿ ಶೋಧನೆ ನಡೆದಿದೆ. ತುರ್ತು ಕಾರ್ಯಾಚರಣೆಗೂ ಸಹ ಇದು ಉಪಯುಕ್ತವಾಗಿದೆ.

ಇದರಿಂದ ಸ್ಪಷ್ಟವಾಗುವುದು ಏನಂದರೆ GPR ತಂತ್ರಜ್ಞಾನವು ಇಂದಿನ ಕ್ರೈಂ ಇನ್ವೆಸ್ಟಿಗೇಷನ್ನ ಭಾಗವಾಗುತ್ತಿದೆ. ಧರ್ಮಸ್ಥಳದಂತಹ ಸಂವೇದನಾಶೀಲ ಪ್ರಕರಣಗಳಲ್ಲಿ ಅದು ದಾರಿ ತೋರುತ್ತಿದೆ. ಇನ್ನು ಮುಂದೆ ಪುರಾತತ್ವ, ಭೂವಿಜ್ಞಾನ, ರಸ್ತೆ ನಿರ್ಮಾಣವಷ್ಟೇ ಅಲ್ಲ ನೆಲದಡಿ ಪತನಗೊಂಡಿರುವ ಸತ್ಯವನ್ನೂ GPR ಪತ್ತೆಹಚ್ಚಲಿದೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss