Sunday, May 18, 2025

Latest Posts

ಗ್ರಾಮ ಪಂಚಾಯತ್ ನಿರ್ಲಕ್ಷ್ಯಕ್ಕೆ  ಬಲಿಯಾದ್ರಾ ಬಡ ಮಕ್ಕಳು…?!

- Advertisement -

Raichur News:

ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಬ್ಯಾಗವಾಟ ಗ್ರಾಮದ ಶಾಲೆಗೆ ಮಳೆನೀರು ಬರುತ್ತಿದೆ. ಆ ನೀರು ಶಾಲೆ ಆವೆಣಕ ನುಗ್ಗಬಾರದು ಅಂತ ತಡೆಗೋಡೆ ನಿರ್ಮಾಣಕ್ಕಾಗಿ 8 ರಿಂದ 10 ಅಡಿ ಆಳದ ಗುಂಡಿ ಅವೈಜ್ಞಾನಿಕವಾಗಿ ತೊಡಲಾಗಿತ್ತು. ಗುಂಡಿ ತೊಡಿದ ಗ್ರಾ. ಪಂ. ಪಿಡಿಒ ತಾರಕೇಶ್ವರಿ ಮತ್ತು ಗ್ರಾ.ಪಂ. ಅಧ್ಯಕ್ಷೆ ಬಸಲಿಂಗಮ್ಮ ಕಾಮಗಾರಿ ಶುರು ಮಾಡಬೇಕಾಗಿತ್ತು. ಆದ್ರೆ ಗುಂಡಿ ತೊಡಿದ ಜಾಗದಲ್ಲಿ ಇದ್ದ ನೀರಿನ ಪೈಪ್ ಒಡೆದು ಇಡೀ ಗುಂಡಿ ತುಂಬ ನೀರು ತುಂಬಿಕೊಂಡಿತ್ತು. ಆ ಕಾಮಗಾರಿಗಾಗಿ ತೊಡಿದ ಗುಂಡಿ ಸುತ್ತಮುತ್ತ ಯಾವುದೇ ಸೂಚನೆ ಫಲಕವೂ ಇರಲಿಲ್ಲ. ಹೀಗಾಗಿ ಅಜಯ್ (5), ಯಲ್ಲಾಲಿಂಗ(8) ಎಂಬ ಇಬ್ಬರುಬಾಲಕರು ಆಟವಾಡಲು ಹೋಗಿ ನೀರು ಪಾಲಾಗಿ ಜೀವ ಬಿಟ್ಟಿದ್ದಾರೆ. ಶಾಲೆಯ ಬಳಿಯ ಗುಂಡಿಗೆ ಬಿದ್ದು ಬಲಿಯಾಗಿದ್ದಾರೆ. ಸುರೇಶ್ ಮತ್ತು ರಮೇಶ್ ಇಬ್ಬರು ಸಹೋದರ ಒಬ್ಬ ಮಕ್ಕಳು ಈಗ ನೀರು ಪಾಲಾಗಿದ್ದಾರೆ. ಅಣ್ಣತಮ್ಮಂದಿರು ಒಂದೊಂದು ಗಂಡು ಮಕ್ಕಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.

ಮೃತರ ಕುಟುಂಬಕ್ಕೆ ಸ್ವಾಂತನ ಹೇಳಿದ ಶಾಸಕರು ಮತ್ತು ಅಧಿಕಾರಿಗಳು:

ಮಾನ್ವಿ ತಾಲೂಕಿನ ಬ್ಯಾಗವಾಟ ಗ್ರಾಮದಲ್ಲಿ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿದರು. ಈ  ಸುದ್ದಿ ತಿಳಿದು ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಮಾನ್ವಿ ತಹಸೀಲ್ದಾರ್ ಶ್ರೀನಿವಾಸ್ ಹಾಗೂ ತಾ.ಪಂ. ಇಒ ಸೈಯದ್ ಪಟೇಲ್ ಸೇರಿ ಪಿಡಿಒ ಹಾಗೂ ಗ್ರಾಮಸ್ಥರು ಮೃತರ ಕುಟುಂಬಕ್ಕೆ ಭೇಟಿ ನೀಡಿದರು. ಕುಟುಂಬಸ್ಥರನ್ನ ಸ್ವಾಂತನ ಹೇಳಿದ ಶಾಸಕ ರಾಜಾ ವೆಂಕಟಪ್ಪ ನಾಯಕ ಮೃತರ ಕುಟುಂಬಸ್ಥರಿಗೆ ವೈಯುಕ್ತಿಕವಾಗಿ 10ಸಾವಿರ ರೂ. ನಗದು ನೀಡಿದರು. ಅಷ್ಟೇ ಅಲ್ಲದೇ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಕೊಡಿಸುವುದಾಗಿ ಕುಟುಂಬಸ್ಥರಿಗೆ ಭರವಸೆ ನೀಡಿದರು.

“ಚಡ್ಡಿ ಹಾಕಿ ಕೊಂಡವರೂ ನನ್ನನ್ನು ಭೇಟಿ ಮಾಡಬಹುದು”… RSS ಗೆ ಟಾಂಗ್ ಕೊಟ್ರಾ ಸಿದ್ದು..?!

ಪೋಸ್ಟರ್ ವಾರ್ ಮೂಲಕ ರಾಜಕೀಯ ಹೈಡ್ರಾಮಾ..! ಮಧ್ಯ ಪ್ರವೇಶಿಸಿದ ಕೋರ್ಟ್ ..!

ಚಲಿಸುವ ರೈಲಿಗೆ ಸಿಲುಕಿ ದಂಪತಿ, ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ..!

- Advertisement -

Latest Posts

Don't Miss