Wednesday, September 11, 2024

Latest Posts

ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿದೆ ಗರಡಿ ಸಿನಿಮಾ

- Advertisement -

Film News:

ಇತ್ತೀಚಿನ ದಿನಗಳಲ್ಲಿ ಕ್ರೀಡೆಯ ಕುರಿತು ಹಲವು ಸಿನಿಮಾಗಳು  ಬಂದಿವೆ ಅದೇ ರೀತಿ ದೇಸಿ ಕ್ರೀಡೆಯನ್ನು ಮುನ್ನಲೆಗೆ ತರಲು ಜಾನಪದ ಕ್ರೀಡೆಗಳನ್ನು ಪರಿಚಯಿಸಿ ಅದರ ಮಹತ್ವವನ್ನು ಆದುನಿಕ ಜನರಿಗೆ ತಿಳಿಸಲು  ಕನ್ನಡದಲ್ಲಿ ಮತ್ತೊಂದು ಕ್ರೀಡಾ ಪ್ರಧಾನ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ .

ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದಿರುವ  ಮತ್ತು ಯುವ ನಟ ಯಶಸ್ ಸೂರ್ಯ  ಹಾಗೂ ಸೋನಾಲ್ ಮಂತೋರೆ ನಾಯಕಿಯಾಗಿ ನಟಿಸಿರುವ ಸಿನಿಮಾವನ್ನುಸಚಿವ ಬಿ ಸಿ ಪಾಟೀಲ್ ಪತ್ನಿ  ಮತ್ತು  ಮಗಳು ಸೃಷ್ಠಿ ಪಾಟೀಲ್ ನಿರ್ಮಾಣದಲ್ಲಿ ಮೂಡಿಬಂದಿರುವ  16 ನೇ ಮತ್ತು ಕನಸಿನ ಚಿತ್ರ ಗರಡಿ .

ಹಳೆ ಮೈಸೂರು ಭಾಗದಲ್ಲಿ ನಡೆಯುವ ಕಥೆ ಇದಾಗಿದ್ದು  ದೇಸಿ ಕ್ರೀಡೆಗೆ ಒತ್ತು ನೀಡುವ ಸಲುವಾಗಿ ಆಯ್ಕೆ ಮಾಡಿಕೊಂಡು ಕಥೆ ಇದಾಗಿದ್ದೂ ಚಿತ್ರಕಥೆ ಬರೆದು ನಿರ್ದೇಶನವನ್ನು ಮಾಡಿದ್ದಾರೆ.ಇನ್ನು ರಾಮುಹಳ್ಳಿಯ ಜಿವಿ ಅಯ್ಯರ್ ಸ್ಟುಡಿಯೋದಲ್ಲಿ ಗರಡಿ ಮನೆಯ ಸೆಟ್ ಹಾಕಿ ಸುಮಾರು 20 ದಿನಗಳ ಚಿತ್ರೀಕರಣ ಮುಗಿಸಿದ ಚಿತ್ರತಂಡ ಚಿತ್ರೀಕರಣ ಮುಗಿಸಿರುವುದಾಗಿ ತಿಳಿಸಿದ್ದಾರೆ.  ಈ ಸಿನಿಮಾದಲ್ಲಿ ನಾಯಕ ಕುಸ್ತಿಪಟುವಾಗಿ ಕಾಣಿಸಿಕೊಂಡಿದ್ದು ಇನ್ನು ಕಡೂರು ಶಾಸಕ ಬೆಳ್ಳಿಯಪ್ಪ ಚಿತ್ರದಲ್ಲಿ ನಟಿಸಿದ್ದು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಹಾಗೂ ಆರ್ಮುಗಂ ರವಿಶಂಕರ್ ನಟಿನಿದ್ದಾರೆ.

ಈ ಸಿನಿಮಾದ ಹಾಡುಗಳನ್ನು ಸರಿಗಮಪ ಸಂಸ್ಥೆ ಗೆ ಮಾರಾಟ ಮಾಡಿದ ಚಿತ್ರತಂಡ ಬರೋಬ್ಬರಿ ಒಂದು ಕೋಟಿಗೆ  ಸೇಲ್  ಮಾಡಿದೆ. ಚಿತ್ರತಂಡ ಇದೇ ಸಂದರ್ಭದಲ್ಲಿ ಮಾತನಾಡಿದ ಸಿರ್ಮಾಪಕಿ ಸೃಷ್ಠಿ ಪಾಟೀಲ್ ನಮ್ಮ ಸಿನಿಮಾಗೆ ಸಾಥ್ ನೀಡಿದ ಎಲ್ಲಾ ನಟರಿಗೆ ಹಾಗೂ ತಂತ್ರಜ್ಞರಿಗೆ ಧನ್ಯವಾದಗಳನ್ನು ತಿಳಿಸಿದರು ಹಾಗೂ ಚಿತ್ರಿಕರಣ  ಮುಕ್ತಾಯಗೊಳಿಸಿದ ಚಿತ್ರತಂಡ ಗರಡಿ ಸಿನಿಮಾವನ್ನು ಫೆಬ್ರುವರಿ ಕೊನೆಯ ವಾರ ಅಥವಾ ಮಾರ್ಚ ತಿಂಗಳ ಮೊದಲ ವಾರ ಚಿತ್ರವನ್ನು ಬಿಡುಗಡೆ ಮಾಡುವುದಾಗಿ  ತಿಳಿಸಿದರು ಗರಡಿ ಸಿನಿಮಾದ ಚಿತ್ರೀಕರಣ ಮುಗುಸಿರುವ  ಚಿತ್ರತಂಡ.

 

- Advertisement -

Latest Posts

Don't Miss