ಬೆಂಗಳೂರು ಶಾಸಕರಿಗೆ ತಲಾ 50 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ವಿರೋಧ ಪಕ್ಷದ ನಾಯಕ ಆರ್ . ಅಶೋಕ್ ಆಗ್ರಹಿಸ್ತಿದ್ದಾರೆ. ಅಲ್ಲದೇ ಅಶೋಕ್ ನೇತೃತ್ವದ ಬೆಂಗಳೂರು ಶಾಸಕರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೆ ಪತ್ರ ಬರದು ,ಮನವಿ ಮಾಡಿದ್ರು.
ಮೊದಲ ಬಾರಿಗೆ ಚುನಾಯಿತರಾದ ಶಾಸಕರು ಮಂಗಳವಾರವಷ್ಟೇ ತಮಗೆ ತಲಾ 100 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಪತ್ರ ಸಲ್ಲಿಸಿದ್ರು. ಅದರ ಬೆನ್ನಲ್ಲೇ ಬುಧವಾರ ಬೆಂಗಳೂರಿನ ಎಲ್ಲಾ ಶಾಸಕರು ಉಪಮುಖ್ಯಮಂತ್ರಿಗಳಿಗೆ ಬೇಡಿಕೆ ಇಟ್ಟಿದ್ದಾರೆ.
ಬೆಂಗಳೂರು ನಗರವು ದಿನದಿಂದ ದಿನಕ್ಕೆ ಸವಿಸ್ತಾರವಾಗಿ ಬೆಳಯುತ್ತಾ ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ದೇಶಗಳ ಗಮನ ಸೆಳೆಯುತ್ತಿವೆ. ಆದ್ರೆ, ನಗರದಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣ್ತಿದೆ. ಮುಖ್ಯರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ತುಂಬಾ ಹಾಳಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆಯಾಗಿದೆ.
ಇನ್ನು ಬೆಂಗಳೂರಿಗೆ ಸಿಲಿಕಾನ್ ಸಿಟಿ ಅನ್ನೋ ಖ್ಯಾತಿಯಿದೆ. ಅಲ್ಲದೇ ಬೆಂಗಳೂರು ಮಾಹಿತಿ ತಂತ್ರಜ್ಣಾನದ ತಾಣವಾಗಿದೆ. ಮೂಲ ಸೌಕರ್ಯಗಳ ಕೊರತೆಯಿಂದ ಅನೇಕ ಕೈಗಾರಿಕಾ ಕಾರ್ಖಾನೆಗಳು ನೆರೆಯ ರಾಜ್ಯಗಳಿಗೆ ಹೋಗ್ತಿವೆ. ಹೀಗಾಗಿ ಮೂಲ ಸೌಕರ್ಯ ಕಲ್ಪಿಸಲು ನಗರದ ಎಲ್ಲಾ ಶಾಸಕರಿಗೆ ತಲಾ 50 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ.