Saturday, July 27, 2024

Latest Posts

ಹಿಂದೂ ಪುರಾಣಗಳಲ್ಲಿ ‘ಗ್ರೇಟ್ ಮದರ್ಸ್’..!

- Advertisement -

ಹಿಂದೂ ಪುರಾಣಗಳಲ್ಲಿ ತಾಯ್ತನದ ಬಗ್ಗೆ ಅತ್ಯುತ್ತಮವಾದ ವ್ಯಾಖ್ಯಾನವನ್ನು ನೀಡಿರುವ ಕೆಲವು ತಾಯಂದಿರ ವಿವರಗಳು ಇಲ್ಲಿವೆ:

ಸಾಕ್ಷಾತ್ ಭಗವಂತನನೇ ಮಕ್ಕಳನಾಗಿ ಪಡೆದು ಸೇವೆಗಳನ್ನು ಮಾಡುತ್ತಾ ಪ್ರೀತಿ, ವಾತ್ಸಲ್ಯ ಹಂಚಿರುವ ಮಾತೃ ದೇವತೆಗಳಿಗೆ ನಮ್ಮ ಹಿಂದೂ ಪುರಾಣದಲ್ಲಿ ಹಲವರು ಕಾಣಿಸಿಕೊಳ್ಳುತ್ತಾರೆ ತಾಯಿಯ ಮಮಕಾರವನ್ನು,  ದೇವರೇ ಪುತ್ರರಾಗಿ ಜನಿಸಿದ ಆ ಮಹಾತಾಯಿಯರ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು ತಿಳಿದುಕೊಳ್ಳೋಣ

ಗೋಪಿಲೋಲ ಮುದ್ದಾದ ಮಗು –
ಭಾಗವತದಲ್ಲಿ ಯಶೋದೆಯ ಪಾತ್ರದ ಮಹತ್ವ ಅಷ್ಟಿಷ್ಟಲ್ಲ .ಶ್ರೀಕೃಷ್ಣನಿಗೆ ಸಾಕುತಾಯಿಯಾದರು ಹೆತ್ತ ಮಗುವಂತೆ ಲಾಲಿಸಿ ,ಪಾಲಿಸಿ ಮಾತೃತ್ವಕ್ಕೆ ಹೊಸ ಅರ್ಥವನ್ನು ನೀಡಿದ ಮಾತೃದೇವತೆ ಯಶೋದೆ. ಮೊದಲಿಗೆ ತನ್ನ ಮಗುವನ್ನು ದಂಡಿಸಿದರು ನಂತರ ತನ್ನ ಮಗ ಭಗವತ್ಸ್ವರೂಪ ಎಂದು ತಿಳಿದು ಆಶ್ಚರ್ಯಪಡುತ್ತಾಳೆ . ಯಶೋದಾ ಹಿಂದೂ ಪುರಾಣಗಳಲ್ಲಿ ಮಾತೃಪ್ರೀತಿಯ ಪ್ರತಿರೂಪವಾಗಿದೆ.

ಬಾಲ ಶಿವನೇ ಬಂಗಾರದ ಹುಡುಗ –
ಬೆಜ್ಜಮಹಾದೇವಿ, ಶಿವನನ್ನು ತನ್ನ ಮಗುವಿನಂತೆ ಪೂಜಿಸಿದ ಮಹಾನ್ ಭಕ್ತೆ. ಅವಳ ಭಕ್ತಿಗೆ ಮೆಚ್ಚಿದ ಶಿವನು ತನ್ನನ್ನು ತಾನು ಚಿಕ್ಕ ಹುಡುಗನಾಗಿ ಪರಿವರ್ತಿಸಿ ಅವಳ ಮನೆಗೆ ಬಂದು, ನಾನೇ ನಿನ್ನ ಮಗು ಎನ್ನುತ್ತಾನೆ, ಹಾಗ ಅವಳು ಆ ಮಗುವಿಗೆ ಊಟವನ್ನು ತಿನ್ನಿಸುತ್ತಾಳೆ . ಅಂತಿಮವಾಗಿ ಶಿವನು ಅವಳನ್ನು ತನ್ನಲ್ಲಿ ಲೀನಮಾಡಿಕೊಳ್ಳುತ್ತಾನೆ .

ತ್ರಿಮೂರ್ತಿಯರೇ ಅವಳ ಶಿಶುಗಳು –
ಅತ್ರಿ ಮಹರ್ಷಿ ಧರ್ಮಪತ್ನಿ ಅನಸೂಯಾದೇವಿಯ ಪತಿವ್ರತೆಯನ್ನು ಪರೀಕ್ಷಿಸಲು ಸಾಧುಗಳ ರೂಪದಲ್ಲಿ ತನ್ನ ಮನೆಗೆ ಊಟಕ್ಕೆ ಬಂದ ತ್ರಿಮೂರ್ತಿಗಳನ್ನು ಚಿಕ್ಕಮಕ್ಕಳಂತೆ ಪರಿವರ್ತಿಸಿ  ಮಾತೃತ್ತ್ವವನ್ನು ಹಂಚಿದ ಮಹಾನ್ ತಾಯಿ. ಆಕೆಯ ಭಕ್ತಿಗೆ ಮೆಚ್ಚಿ ಮೂವರು ತ್ರಿಮೂರ್ತಿಗಳು ದತ್ತಾತ್ರೇಯರಾಗಿ ಅವತರಿಸಿ ಪೂಜೆ ಸ್ವೀಕರಿಸುವುದು ವಿಶೇಷ .

ಕಲಿಯುಗ ದೈವವೇ ತನ್ನ ಸ್ವಂತ ಮಗು :
ಸಾಕ್ಷಾತ್ ಯಶೋದಾ ದೇವಿಯ ಅವತಾರವೆಂದು ಅನೇಕರು ಪರಿಗಣಿಸುತ್ತಾರೆ. ಕಲಿಯುಗ ದೇವರಾದ            ಶ್ರೀವೆಂಕಟೇಶ್ವರ ಸ್ವಾಮಿಯನ್ನು ತನ್ನ ಮಗನೆಂದು ಪರಿಗಣಿಸಿದ ಭಕ್ತೆ. ತಿರುಪತಿಯ ಶ್ರೀವಾರಿಯ ಮುಖ್ಯ ದೇವಾಲಯದ ಆಗ್ನೇಯ ದಿಕ್ಕಿನ ಅಡುಗೆಮನೆಯಲ್ಲಿ ವೆಂಕಟೇಶ್ವರನಿಗೆ ವಕುಳಮಾತೆ ಅನ್ನವನ್ನು ಉಣಬಡಿಸಿದರೆಂದು ಹೇಳಲಾಗುತ್ತದೆ.

ಈ ಬಾರಿಯ ವೈಕುಂಠ ಏಕಾದಶಿ ಯಾವಾಗ..ಶುಭಮಹೂರ್ತ, ಪೂಜಾ ವಿಧಾನಗಳನ್ನು ನೋಡಿ..!

ಮುಂದಿನ ವರ್ಷ 2023 ರಲ್ಲಿ ಯಾವಾಗ ಮತ್ತು ಎಷ್ಟು ಸೂರ್ಯ ಮತ್ತು ಚಂದ್ರ ಗ್ರಹಣಗಳು ಸಂಭವಿಸುತ್ತವೆ…

ಗರುಡ ಪುರಾಣದ ಪ್ರಕಾರ ಈ 5 ಅಭ್ಯಾಸಗಳಿಂದ ಬಡತನ ಹೆಚ್ಚಾಗುತ್ತದೆ..!

 

- Advertisement -

Latest Posts

Don't Miss