ದೀಪಾವಳಿ ಹಬ್ಬಕ್ಕೆ ಚಿನ್ನಾಭರಣ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಚಿನ್ನದ ಬೆಲೆಯಲ್ಲಿ ಇಂದು ದಾಖಲೆ ಮಟ್ಟದಲ್ಲಿ ಕುಸಿತ ಕಂಡಿದೆ. ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಂದು ಗಣನೀಯವಾಗಿ ಇಳಿಕೆಯಾಗಿವೆ. ಭಾರೀ ಹೆಚ್ಚಳವಾಗಿದ್ದ ಚಿನ್ನದ ಬೆಲೆ ಹಬ್ಬದ ದಿನಗಳಲ್ಲಿ ಇಳಿಕೆ ಆಗುತ್ತಿರುವುದು ಗ್ರಾಹಕರಿಗೆ ಹಬ್ಬದ ಖುಷಿ ತಂದಿದೆ.
ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಂದು ಗಣನೀಯವಾಗಿ ಇಳಿಕೆಯಾಗಿದ್ದು, ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ದರ ಗ್ರಾಮಿಗೆ ₹500ಕ್ಕೂ ಹೆಚ್ಚು ಇಳಿಕೆಯಾಗಿದೆ. ಬೆಳ್ಳಿ ದರವೂ ಸತತವಾಗಿ ಇಳಿಯುತ್ತಿದ್ದು, ಗ್ರಾಂಗೆ ₹8ರಷ್ಟು ಕಡಿಮೆಯಾಗಿದೆ. ಇಂದು ಒಂದೇ ದಿನಕ್ಕೆ 3380 ರೂಪಾಯಿ ಕಡಿಮೆ ಆಗಿದೆ.
ಅಕ್ಟೋಬರ್ 22 ಬುಧವಾರದಂದು ದೇಶೀಯ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂ ಗೆ 12,720 ರೂಪಾಯಿ ಇದೆ. ಮಂಗಳವಾರದಿಂದ ಬುಧವಾರಕ್ಕೆ 338 ರೂಪಾಯಿ ಇಳಿಕೆ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,27,200 ರೂಪಾಯಿ ಇದ್ದು ಇಂದು 3,380 ರೂ ಕುಸಿದಿದೆ.
ಚಿನ್ನದ ಬೆಲೆಯ ಏರಿಳಿತ ಹಾವು ಏಣಿ ಆಟದ ರೀತಿಯಲ್ಲಿ ನಡೆಯುತ್ತಿದೆ. ಹಳದಿ ಲೋಹದ ಬೆಲೆ ಗ್ರಾಮ್ಗೆ 500ಕ್ಕೂ ಹೆಚ್ಚು ರೂಗಳಷ್ಟು ಕಡಿಮೆ ಆಗಿದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಹೆಚ್ಚಿನ ಕಡೆ ಬೆಲೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯಂತೂ ಭರ್ಜರಿ ಇಳಿಕೆ ಮುಂದುವರಿಸಿದೆ. ಇಂದು ಅದರ ಬೆಲೆ ಗ್ರಾಮ್ಗೆ ಬರೋಬ್ಬರಿ 8 ರೂಗಳಷ್ಟು ಕಡಿಮೆ ಆಗಿದೆ. 162 ರೂಗೆ ಬೆಲೆ ಇಳಿಕೆ ಆಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,16,600 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,27,200 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 16,200 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,16,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 16,390 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 18,000 ರೂ ಇದೆ.
ವರದಿ : ಲಾವಣ್ಯ ಅನಿಗೋಳ