ಚಿನ್ನಾಭರಣ ಪ್ರಿಯರಿಗೆ ಇಂದು ಸಿಹಿ ಸುದ್ದಿ. ದಸರಾ ದೀಪಾವಳಿ ಹಬ್ಬದ ನಿಮಿತ್ಯ ಚಿನ್ನದ ದರ ಗಗನಕ್ಕೇರುತ್ತಿತ್ತು. ಗ್ರಾಹಕರಿಗೆ ಚಿನ್ನ ಖರೀದಿಸುವುದು ಕಷ್ಟ ಆಗಿತ್ತು. ಆದ್ರೆ ಚಿನ್ನದ ಬೆಲೆಯಲ್ಲಿ ಇಂದು ಭರ್ಜರಿ ಇಳಿಕೆ ಆಗಿದೆ. ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಇಳಿಕೆಯಾಗುತ್ತಿದ್ದ ಚಿನ್ನದ ದರ ಇಂದು ಮತ್ತೊಮ್ಮೆ ಕುಸಿತ ಕಂಡಿದೆ.
ಒಂದೇ ದಿನದಲ್ಲಿ 10 ಗ್ರಾಂ ಚಿನ್ನದ ಬೆಲೆ ಸುಮಾರು ₹1,910 ರೂ. ಇಳಿಕೆಯಾಗಿದೆ. ಅಕ್ಟೋಬರ್ 30 ರಂದು 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ₹12,049 ರೂ. ಆಗಿದೆ. ಇದು ನಿನ್ನೆಗಿಂತ ₹191 ರೂ. ಕಡಿಮೆ. 10 ಗ್ರಾಂ ಶುದ್ಧ ಚಿನ್ನಕ್ಕೆ ಈಗ ₹1,20,490 ರೂ. ದರ ದಾಖಲಾಗಿದೆ.
22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ₹11,045 ರೂ. ಆಗಿದ್ದು, ಇದು ನಿನ್ನೆಗಿಂತ ₹175 ರೂ. ಇಳಿಕೆಯಾಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ ₹1,10,450 ರೂ. ಇದೆ. ಅಂದರೆ, ಇಂದು 10 ಗ್ರಾಂಗೆ ₹1,750 ರೂ. ಇಳಿಕೆ ಕಂಡಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ ಗಮನಿಸೋದಾದ್ರೆ 22 ಕ್ಯಾರೆಟ್ 1 ಗ್ರಾಂ ಚಿನ್ನ ₹11,045. 10 ಗ್ರಾಂ ಚಿನ್ನಕ್ಕೆ ₹1,10,450 ಇದೆ. 24 ಕ್ಯಾರೆಟ್ 1 ಗ್ರಾಂ ಚಿನ್ನ ₹12,049 ಆದರೆ 10 ಗ್ರಾಂ ಚಿನ್ನದ ದರ ₹1,20,490. ಬೆಳ್ಳಿ ದರದಲ್ಲಿ ಇಂದು ಅಲ್ಪ ಬದಲಾವಣೆ ಕಂಡುಬಂದಿದೆ.
1 ಗ್ರಾಂ ಬೆಳ್ಳಿಯ ಬೆಲೆ ₹151 ರೂ. ಆಗಿದೆ. ನಿನ್ನೆಗಿಂತ ₹1 ರೂ. ಇಳಿಕೆ ದಾಖಲಾಗಿದೆ. ಕೆಜಿಗೆ ₹1,51,000 ರೂ. ಇದೆ. ಒಟ್ಟಾರೆಯಾಗಿ, ಚಿನ್ನದ ಬೆಲೆಯಲ್ಲಿ ಇಳಿಕೆ ಮುಂದಿನ ಕೆಲವು ದಿನಗಳಿಗೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ವರದಿ : ಲಾವಣ್ಯ ಅನಿಗೋಳ

