ಚಾರ್ ಧಾಮ್ ಯಾತ್ರೆಗೆ ಗ್ರೀನ್ ಸಿಗ್ನಲ್ ..!

www.karnatakatv.net :ಚಾರ್ಧಾಮ್ ಯಾತ್ರೆಯ ಮೇಲಿನ ತಡೆಯಾಜ್ಞೆಯನ್ನು ಉತ್ತರಾಖಂಡ ಹೈಕೋರ್ಟ್  ಇಂದು ತೆರವುಗೊಳಿಸಿದೆ. ಕೋವಿಡ್ -19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋದ್ರೊಂದಿಗೆ ಯಾತ್ರೆ ನಡೆಸೋದಕ್ಕೆ ಅಡ್ಡಿಯಿಲ್ಲ ಅಂತ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಯಾತ್ರೆ ಕೈಗೊಳ್ಳೋ  ಭಕ್ತರು ಕೋವಿಡ್ ನೆಗಟಿವ್ ವರದಿ ಹಾಗೂ ಎರಡೂ ಡೋಸ್ ಲಸಿಕೆ ಪಡೆದ ಪ್ರಮಾಣಪತ್ರವನ್ನು ಖಡ್ಡಾಯವಾಗಿ ಹೊಂದಿರಬೇಕು ಅಂತ ತಿಳಿಸಿದೆ.   ಇನ್ನು ಪ್ರತಿದಿನ  ಚಾರ್ ಧಾಮ್ ಗಳಾದ ಕೇದಾರನಾಥದಲ್ಲಿ ಕೇವಲ 800, ಬದರಿನಾಥದಲ್ಲಿ 1200, ಗಂಗೋತ್ರಿಯಲ್ಲಿ 600 ಮತ್ತು ಯಮುನೋತ್ರಿಯಲ್ಲಿ 400 ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಿದೆ. ಇದರ ಜೊತೆ ಯಾತ್ರಾರ್ಥಿಗಳು ದೇವಾಲಯಗಳ ಸುತ್ತಮುತ್ತಲಿನ ಯಾವುದೇ ಕೊಳದಲ್ಲಿ ಸ್ನಾನ ಮಾಡುವಂತಿಲ್ಲ ಅಂತಲೂ ಹೈಕೋರ್ಟ್ ತಿಳಿಸಿದೆ.

About The Author