www.karnatakatv.net :ತಾನಾಯ್ತು, ತನ್ನ ಕೆಲಸ ಆಯ್ತು ಅಂತಿದ್ದ ಇಬ್ಬರು ಸ್ಕೂಲ್ ಹುಡುಗ್ರ ಅಕೌಂಟ್ ನಲ್ಲಿ ದುಡ್ಡಿನ ಹೊಳೆಯೇ ಹರಿದಿದೆ.
ಹೌದು, ಬಿಹಾರದ ಕತಿಹಾರ್ ಜಿಲ್ಲೆಯ ಬಗೌರಾ ಪಂಚಾಯತ್‌ನ ಪಾಸ್ಟಿಯಾ ಗ್ರಾಮದ ಬಾಲಕರಾದ ಗುರುಚಂದ್ರ ವಿಶ್ವಾಸ್ ಮತ್ತು ಅಸಿಟ್ ಕುಮಾರ್ ತಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಕೋಟಿ ಕೋಟಿ ಹಣ ಇರೋದನ್ನ ನೋಡಿ ಕನ್ಫೂಸ್ ಆಗಿದ್ದಾರೆ. ಯಾಕಂದ್ರೆ ಇವರಿಬ್ಬಕ ಅಕೌಂಟ್ ನಲ್ಲಿದ್ದದ್ದು ಬರೋಬ್ಬರಿ 960ಕೋಟಿ ರೂಪಾಯಿ. ಸ್ಕಾಲರ್ ಶಿಪ್ ಗಾಗಿ ಮಾಡಿಸಲಾಗಿದ್ದ ಈ ಅಕೌಂಟ್ ನಲ್ಲಿ ಈ ಬಾರಿ ಸರ್ಕಾರದಿಂದ ಯೂನಿಫಾರ್ಮ್ ಖರೀದಿಗೆ ಹಣ ಬರಬೇಕಿತ್ತು. ಇದರ ಬಗ್ಗೆ ವಿಚಾರಿಸೋದಕ್ಕೆ ಬ್ಯಾಂಕ್ ಗೆ ಹೋಗಿದ್ದ ಈ ಬಾಲಕರು ತಮ್ಮ ಅಕೌಂಟ್ ಬ್ಯಾಲೆನ್ಸ್ ನೋಡಿ ಶಾಕ್ ಆಗಿದ್ದಾರೆ.
ಮೊದಲು ಪ್ರಿಂಟಿಂಗ್ ಮಿಸ್ಟೇಕ್ ಇರಬಹುದು ಅಂತ ಅಂದುಕೊಂಡು ಸುಮ್ಮನಾಗಿದ್ರು, ಆದ್ರೆ ಮತ್ತೊಮ್ಮೆ ಪರಿಶೀಸಿದಾಗ ಒಬ್ಬನ ಅಕೌಂಟ್ ಗೆ 60 ಕೋಟಿ ಮತ್ತೊಬ್ಬನ ಅಕೌಂಟ್ ಗೆ 900 ಕೋಟಿ ರೂಪಾಯಿ ಹಣ ಜಮೆಯಾಗಿರೋದು ಪಕ್ಕಾ ಆಗಿದೆ.
ಇಷೊಂದು ದೊಡ್ಡಮೊತ್ತದ ಹಣವನ್ನ ಇವರ ಖಾತೆಗೆ ಜಮೆ ಮಾಡಿದ್ದಾದ್ರು ಯಾರು ಅನ್ನೋದು ಮಾತ್ರ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಈ ಮಧ್ಯೆ ಬಾಲಕರ ಬ್ಯಾಂಕ್ ಖಾತೆಯಿಂದ ಒಂದು ನಯಾ ಪೈಸೆ ಡ್ರಾ ಅಗದಂತೆ ಬ್ಯಾಂಕ್ ತಡೆದಿದೆ. ಹಾಗೆಯೇ ಕೋಟಿ ಕೋಟಿ ಹಣ ಎಲ್ಲಿಂದ ಬಂತು ಅನ್ನೋಬಗ್ಗೆಯೂ ಸದ್ಯ ತನಿಖೆ ನಡೆದಿದೆ.




