Sunday, April 20, 2025

Latest Posts

ಗೌರಿ ಗಣೇಶ ಹಬ್ಬಕ್ಕೆ ಗ್ರೀನ್ ಸಿಗ್ನಲ್…!

- Advertisement -

www.karnatakatv.net :ತುಮಕೂರು : ಕೊರೋನಾ ಆತಂಕದ ನಡುವೆ ವಿಘ್ನ ನಿವಾರಕ ವಿನಾಯಕ ಹಬ್ಬ ಆಚರಣೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.  ನೂರಾರು ಗಣೇಶ ಮೂರ್ತಿಗಳು ಮಾರಾಟಕ್ಕೆ ಸಿದ್ದಗೊಂಡಿವೆ. ವಿಗ್ರಹಗಳಿಗೆ ಬೇಡಿಕೆ ಕಾಣಲಿಲ್ಲ ದೊಡ್ಡ ಮಟ್ಟದ ವಿಗ್ರಹಗಳು 4 ಅಡಿಯಷ್ಟು ಎತ್ತರದ ವಿಗ್ರಹಗಳು ಮಾತ್ರ ಮಾರುಕಟ್ಟೆಯಲ್ಲಿ ಲಭ್ಯ.

ಕಳೆದ ವರ್ಷ ಸಾಕಷ್ಟು ಕೊರೊನಾ ಇದ್ದ ಕಾರಣ ಹಬ್ಬಗಳೇ ಮರೆತು ಹೋಗಿತ್ತು. ಆದರೆ ಈ ಬಾರಿ ಕೊರೊನಾ ಇದ್ದರು ಸಹ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಸರ್ಕಾರದ ಮಾರ್ಗ ಸೂಚಿಯಂತೆ ಗೌರಿ ಗಣೇಶ  ಹಬ್ಬಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇದ್ರಿಂದ ಮರುಕಟ್ಟೆಗಳಿಗೆ ವಿಗ್ರಹಗಳು ಬಂದಿದ್ದು ದೊಡ್ಡ ಪ್ರಮಾಣದಲ್ಲಿ ಇಲ್ಲದಿದ್ದರೂ ಕಡಿಮೆ ಪ್ರಮಾಣದಲ್ಲಿ ವಿಗ್ರಹಗಳು ಪಟ್ಟಣದಲ್ಲಿ ಕಾಣೀಸಿಕೊಂಡಿವೆ.  ಆದರೆ ವಿಗ್ರಹ ತಯಾರಕರ ಸಮಸ್ಯೆ ಮಾತ್ರ ಸಾಕಷ್ಟು ಇದೆ.

ನಾಡಿನಾದ್ಯಂತ ಗಣೇಶ ಹಬ್ಬದ ಸಂಭ್ರಮಕ್ಕೆ ಕ್ಷಣಗಣೆ ಮಾತ್ರ ಬಾಕಿ ಇದ್ದು, ಈ ನಡುವೆ ಕೊರೊನಾ ನೆಪ ಹೇಳಿ ಸರ್ಕಾರ ಇಂದಿಷ್ಟು ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ. ತುಮಕೂರಿನಲ್ಲಿ ಪೊಲೀಸ್ ಇಲಾಖೆ ಸಾರ್ವಜನಿಕ ಸಭೆ ನಡೆಸಿದ್ದು, ಈ ಸಭೆಯಲ್ಲಿ ಮಾರ್ಗಸೂಚಿಗಳ ಬಗ್ಗೆ ತಿಳಿಸಲಾಯಿತು.

ಸಭೆಯಲ್ಲಿ ನಗರ ಶಾಸಕ ಬಿ.ಜಿ.ಜ್ಯೋತಿಗಣೇಶ್, ಎಸ್ಪಿ ರಾಹುಲ್ ಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದ ಜನರು ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಡಿಜೆ , ಆರ್ಕೆಸ್ಟ್ರಾಗೆ ಅನುಮತಿ ಸೇರಿದಂತೆ ವಿವಿಧ ವಿಚಾರಗಳನ್ನ ಮುಂದಿಟ್ಟರು.

ಸಭೆಯ ಬಳಿಕ ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಮಾತನಾಡಿ, ಮುಖಂಡರು ವಾದ ವಿವಾದ ಮಂಡಿಸಿದ್ದಾರೆ. ಸರ್ಕಾರದ ಆದೇಶದಂತೆ ಜನರು ಸಹಕರಿಸಬೇಕು. ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಮನವಿ ಮಾಡಿದರು.

ಸರ್ಕಾರದ ಆದೇಶದ 17 ಮಾರ್ಗಸೂಚಿಗಳನ್ನ ನಗರ ಡಿವೈಎಸ್ಪಿ ಶ್ರೀನಿವಾಸ್ ಸಭೆಯಲ್ಲಿ ಗಮನಕ್ಕೆ ತಂದರು. ಕೊರೋನಾ ನಡುವೆ ಗಲ್ಲಿ ಗಲ್ಲಿಗಳಲ್ಲಿ ಗಣೇಶ ಕಾಣಿಸಿಕೊಳ್ಳಲಿದ್ದಾನೆ. ಜನರಲ್ಲಿ ಇರಲಿ ಎಚ್ಚರ. ಹಬ್ಬದ ಸಂಭ್ರಮದ ನಡುವೆ ಮೈಮರೆಯದಿರಿ. ಅನ್ನೋದು ನಮ್ಮೆಲ್ಲರ ಕಾಳಜಿ.

ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ- ತುಮಕೂರು

- Advertisement -

Latest Posts

Don't Miss