Saturday, July 27, 2024

Latest Posts

ಆಲ್ಟಿಯಸ್ ನ ನೂತನ ಆಸ್ಪತ್ರೆ ಉದ್ಘಾಟನೆ

- Advertisement -

www.karnatakatv.net :ಬೆಂಗಳೂರು: ನಗರದ ಸುಪ್ರಸಿದ್ಧ ಮೆಟರ್ನಿಟಿ ಮತ್ತು ಐವಿಎಫ್ ಸೆಂಟರ್ ಆಲ್ಟಿಯಸ್ ತನ್ನ ನೂತನ ಶಾಖೆಯನ್ನು ಬೆಂಗಳೂರಿನ ಎಚ್ ಬಿಆರ್ ಲೇಔಟ್ ನಲ್ಲಿ ತೆರೆದಿದೆ. ಇಂದು ನಡೆದ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಸಂಸದ, ಪಿ,ಸಿ ಮೋಹನ್, ನಟಿ ಐಂದ್ರಿತಾ ರೇ, ಗಾಯಕ ಅಲೋಕ್ ಬಾಬು ಸೇರಿದಂತೆ ಮತ್ತಿತರರು ಭಾಗಿಯಾಗಿದ್ರು. ನೂತನವಾಗಿ ಉದ್ಘಾಟನೆಗೊಂಡ ಆಸ್ಪತ್ರೆಗೆ ಅತಿಥಿಗಳು ಶುಭ ಕೋರಿದ್ರು.

ಇನ್ನು ದೇಶದಲ್ಲೇ ಆಲ್ಟಿಯಸ್ ಆಸ್ಪತ್ರೆ, ಅತ್ಯುತ್ತಮ ಸ್ತ್ರೀರೋಗ ಮತ್ತು ಐವಿಎಫ್ ಸೆಂಟರ್ ಗಳಲ್ಲೊಂದು ಅನ್ನೋ ಖ್ಯಾತಿ ಪಡೆದಿದೆ. ಇದೀಗ ಎಚ್ ಬಿಆರ್ ಲೇಔಟ್ ನಲ್ಲಿ ತೆರೆಯಲಾಗಿರೋ ನೂತನ ಶಾಖೆಯಲ್ಲಿ ಲಿಲ್ ಫೀಟ್ ಹೆಸರಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿಯೇ ವಿಶೇಷ ಚಿಕಿತ್ಸಾ ಸೌಲಭ್ಯವಿರೋ ಯೂನಿಟ್ ಹೊಂದಿದೆ. ಮಹಿಳೆಯರಿಗೆ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ, ಬಂಜೆತನ, ಮಹಿಳೆಯರಲ್ಲಿ ಕಂಡುಬರೋ ಕಿಡ್ನಿ ಸಮಸ್ಯೆಗಳಿಗೆ ಇಲ್ಲಿ ಸುಸಜ್ಜಿತ ಮತ್ತು ಅತ್ಯಾಧುನಿಕ ಯಂತ್ರಗಳಿಂದ ಚಿಕಿತ್ಸೆ ನೀಡಲಾಗುತ್ತೆ. ಸುಮಾರು 50 ಬೆಡ್ ವ್ಯವಸ್ಥೆ ಹೊಂದಿರೋ ಈ ಸುಸಜ್ಜಿತ ಆಸ್ಪತ್ರೆಯು ದಿನದ 24 ಗಂಟೆಗಳೂ ಸೇವೆಗೆ ಲಭ್ಯವಿದೆ.

ಸುಸಜ್ಜಿತ ಮತ್ತು ಅತ್ಯಾಧುನಿಕ ಉಪಕರಣಗಳಿಂದ ಕೂಡಿದ OR1 ಸಿಸ್ಟಮ್ ವುಳ್ಳ ರಾಜ್ಯದ ನಂಬರ್ ಒನ್ ಆಸ್ಪತ್ರೆ ಅನ್ನೋ ಹೆಗ್ಗಳಿಕೆಗೂ ಆಲ್ಟಿಯಸ್ ಪಾತ್ರವಾಗಿದೆ.

ಕಾರ್ಯಕ್ರಮದಲ್ಲಿ ಹಾಜರಾಗಿದ್ದ ಶಾಸಕ ಕೃಷ್ಣ ಭೈರೇಗೌಡ, ಸಂಸದ ಪಿ.ಸಿ ಮೋಹನ್, ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಆಸ್ಪತ್ರೆ ಬಗ್ಗೆ ಮಾತನಾಡಿದ್ದು ಹೀಗೆ.

ವಿನುತಾ ಹವಾಲ್ದಾರ್, ಕರ್ನಾಟಕ ಟಿವಿ- ಬೆಂಗಳೂರು

- Advertisement -

Latest Posts

Don't Miss