Hubli News: ಹುಬ್ಬಳ್ಳಿ: ಸದಾಕಾಲ ರೈತರ ಬೆನ್ನಲುಬಾಗಿ ನಿಲ್ಲುವ ಕೇಂದ್ರದ ಬಿಜೆಪಿ ಸರಕಾರ ಹೆಸರು ಖರೀದಿ ಕೇಂದ್ರ ತೆರೆಯಲು ಅನುಮತಿ ನೀಡಿದ್ದು, ರಾಜ್ಯ ಸರಕಾರ ಬೇಗ ಖರೀದಿ ಕೇಂದ್ರ ಆರಂಭಿಸುವಂತೆ ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಒತ್ತಾಯಿಸಿದ್ದಾರೆ.
ಇತ್ತೀಚೆಗೆ ರೈತರು ಬೆಳೆದ ಹೆಸರು ಬೆಳೆಯನ್ನ ರೈತರೊಂದಿಗೆ ವೀಕ್ಷಣೆ ಮಾಡಿ, ಖರೀದಿ ಕೇಂದ್ರ ಆರಂಭಿಸದ ಹಿನ್ನೆಲೆಯಲ್ಲಿ, ರಾಜ್ಯ ಸರಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿ ಬೇಗನೇ ಹೆಸರು ಖರೀದಿ ಕೇಂದ್ರವನ್ನ ಆರಂಭಿಸುವಂತೆ ಆಗ್ರಹಿಸಿದ್ದರು.
ಇದೀಗ ಕೇಂದ್ರ ಅನುಮತಿ ನೀಡಿದೆ. ರಾಜ್ಯದ ಕಾಂಗ್ರೆಸ್ ಸರಕಾರ ಮೀನಮೇಷ ಎಣಿಸುತ್ತ ಕೂಡುವ ಬದಲು ತಕ್ಷಣವೇ ಖರೀದಿ ಕೇಂದ್ರ ಆರಂಭಿಸಬೇಕೆಂದು ಮುನೇನಕೊಪ್ಪ ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಅಮಿತ ಷಾ, ಕೃಷಿ ಸಚಿವ ಶಿವರಾಜಸಿಂಗ್ ಚವ್ಹಾಣ ಹಾಗೂ ಸಚಿವ ಪ್ರಲ್ಹಾದ ಜೋಶಿಯವರಿಗೆ, ಹೆಸರು ಖರೀದಿ ಕೇಂದ್ರ ಆರಂಭಿಸಲು ಪರವಾನಿಗೆ ನೀಡಿದ್ದರಿಂದ ಮಾಜಿ ಸಚಿವರು ಧನ್ಯವಾದ ತಿಳಿಸಿದ್ದಾರೆ.


