Thursday, July 10, 2025

Latest Posts

Political News: ಗೃಹಲಕ್ಷ್ಮೀಯರಿಗೆ ಮೇ ತಿಂಗಳಲ್ಲಿ ಬರಲಿದೆ 6 ಸಾವಿರ ರೂಪಾಯಿ: ಸಚಿವೆ ಹೆಬ್ಬಾಳ್ಕರ್

- Advertisement -

Political News: ಕೆಲ ದಿನಗಳ ಹಿಂದೆಯಷ್ಟೇ ರಾಜ್ಯ ಮಹಿಳಾ ಮತ್ತು ಮಕ್ಕಳ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಧ್ಯಮದ ಜತೆ ಮಾತನಾಡಿ, ಮೇ ತಿಂಗಳ ಮೊದಲ ವಾರವೇ ಉಳಿದ ಗೃಹಲಕ್ಷ್ಮೀ ಕಂತು ಬರುತ್ತದೆ ಎಂದು ಹೇಳಿದ್ದರು. ಆದರೆ ಇದುವರೆಗೂ ಹಣ ಬರಲಿಲ್ಲ ಅನ್ನೋದು ರಾಜ್ಯದ ಗೃಹಲಕ್ಷ್ಮೀರ ಬೇಸರವಾಗಿದೆ.

ಆದರೆ ಈ ತಿಂಗಳು ಮುಗಿಯುವುದರ ಒಳಗೆ ಗೃಹಲಕ್ಷ್ಮೀ ಕಂತು ನಿಮ್ಮ ಖಾತೆಗೆ ಬರಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.  ಇಂದು ಕುಂದಾಪುರದಲ್ಲಿ ಮಾಧ್ಯಮಗಳ ಜತೆ ಮಾತನಾಡಿರುವ ಸಚಿವೆ, ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಬಿಡುಗಡೆ ಮಾಡಲಾಗುತ್ತದೆ. ಈ ತಿಂಗಳಲ್ಲಿ 6 ಸಾವಿರ ರೂಪಾಯಿ ನಿಮ್ಮ ಕೈ ಸೇರಲಿದೆ ಎಂದು ಹೇಳಿದ್ದಾರೆ.

ಕುಂದಾಪುರದಲ್ಲಿಂದು ರೈತ ಸಂಪರ್ಕ ಕೇಂದ್ರ ಉದ್ಘಾಟನೆ ಮಾಡಿ ಮಾತನಾಡಿರುವ ಲಕ್ಷ್ಮೀ ಹೆಬ್ಬಾಳ್ಕರ್, ರೈತರು ಕೃಷಿಯಲ್ಲಿ ಆಧುನಿಕರಣ ಕಂಡುಕ“ಳ್ಳಬೇಕು. ರೈತರು ಚೆನ್ನಾಗಿದ್ದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ರೈತರು ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕ“ಂಡು, ಕೃಷಿಯಲ್ಲಿ ಹೆಚ್ಚು ಆದಾಯ ಗಳಿಸುವಂತಾಗಬೇಕು. ಹೀಗಾಗಲು ರೈತ ಸಪರ್ಕ ಕೇಂದ್ರಗಳು ರೈತರಿಗೆ ಅನುಕೂಲವಾಗಿದೆ ಎಂದು ಸಚಿವೆ ಹೆಬ್ಬಾಳ್ಕರ್ ಹೇಳಿದ್ದಾರೆ.

ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆ ಕೂಡ  ಒಂದು. ಆದರೆ ಆ ಯೋಜನೆಯ ಪ್ರಯೋಜನ ರಾಜ್ಯದ ಹಲವು ಹೆಣ್ಣು ಮಕ್ಕಳಿಗೆ ಸಿಗುತ್ತಿಲ್ಲ. ಹಾಗಾದ್ರೆ ಗೃಹಲಕ್ಷ್ಮೀ ಹಣ ಸಿಗಬೇಕು ಅಂದ್ರೆ ನೀವು ಯಾವ ಅರ್ಹತೆಯನ್ನು  ಹೊಂದಿರಬೇಕು ಅಂತಾ ತಿಳಿಯೋಣ ಬನ್ನಿ..

  • ನೀವು ಕರ್ನಾ’’ಕ ರಾಜ್ಯದ ಸ್ಥಿರ ನಿವಾಸಿಯಾಗಿರಬೇಕು.
  • ಅರ್ಜಿ ಸಲ್ಲಿಸುವ ಮಹಿಳೆ ಕು’’ುಂಬದ ಮುಖ್ಯಸ್ಥೆಯಾಗಿರಬೇಕು. ಅದಕ್ಕಾಗಿ ಮನೆಯ ರೇಷನ್ ಕಾರ್ಡ್‌ನಲ್ಲಿ ಮಹಿಳೆಯ ಹೆಸರೇ ಮ“ದಲಿರಬೇಕು.
  • ಅರ್ಜಿ ಸಲ್ಲಿಸುವ ಮಹಿಳೆಯ ಬಳಿಕ ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್ ಇರಬೇಕು. ಅಂದ್ರೆ ಶ್ರೀಮಂತ ಮಹಿಳೆಯರಿಗೆಲ್ಲ ಈ ಯೋಜನೆ ಲಭ್ಯವಿಲ್ಲ.
  • ಅರ್ಜಿ ಸಲ್ಲಿಸುವ ಮಹಿಳೆಯ ಕು’’ುಂಬದ ಆದಾಯ ವರ್ಷಕ್ಕೆ 2 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಅರ್ಜಿ ಸಲ್ಲಿಸುವ ಮಹಿಳೆಯ ಮನೆಯವರ ಬಳಿ ಯಾವುದೇ ಭೂಮಾಲಿಕತ್ವ ಇರಬಾರದು.
  • ಸರ್ಕಾರಿ ಉದ್ಯೋಗಿಗಳು, Tax ಕಟ್ಟುವವರು, GST ರಿಟರ್ನ್ಸ್ ಸಲ್ಲಿಸುವವರು ಈ ಯೋಜನೆಗೆ ಅರ್ಹರಾಗಿರುುದಿಲ್ಲ.
  • ಇನ್ನು ಅರ್ಜಿ ಸಲ್ಲಿಸುವ ಮಹಿಳೆಯ ಬಳಿ ಆಧಾರ್ ಕಾಾರ್ಡ್, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ವಿವರ, Mobile Number ಇರಬೇಕು.

- Advertisement -

Latest Posts

Don't Miss