Friday, December 13, 2024

Latest Posts

ಮರ ಉಳಿಸಿ ಪಕ್ಷಿ ಬೆಳೆಸಿ

- Advertisement -

www.karnatakatv.net :ರಾಯಚೂರು :ಪಕ್ಷಿಗಳು ತಾವು ಗುಡುಕಟ್ಟಿ  ಪುಟ್ಟ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದವು, ಆದರೆ ಹಳೆಯ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಮರಗಳ ಮಾರಣಹೋಮಕ್ಕೆ  ಪಕ್ಷಿಗಳಿಗೆ ಗುಡ್ಡಿಗೆ ಕೊಡಲಿ ಪೆಟ್ಟು ಕೊಡಲು  ಮುಂದಾಗಿದ್ದಾರೆ.

ಹೌದು ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಬಾಲಕಯರ  ವಸತಿ ನಿಲಯದ ಮುಂದೆ ದೊಡ್ಡದೊಂದು ಅರಳಿ ಮರವಿದೆ, ಈ ಮರದಲ್ಲಿ ಸಾವಿರರು ಪಕ್ಷಿಗಳು ಗೂಡು ಕಟ್ಟಿಕೊಂಡು ತಮ್ಮ ಪುಟ್ಟ ಕಂದಮ್ಮಗಳೊಂದಿಗೆ ವಾಸಮಾಡುತ್ತಿವೆ. ಆದರೆ ಹಳೆಯ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಹೊಸ ಕಟ್ಟಡಕ್ಕೆ ಅಡ್ಡಿ ಆಗಿದೆ ಎಂದು ಈ ಅರಳಿ ಮರವನ್ನು ನೆಲಸಮ ಮಾಡೋಕೆ ಮುಂದಾಗಿದ್ದಾರೆ. ಆದರೆ ಈ ಸಾವಿರಾರು ಬಾನಡಿಗಳ ವಾಸಿಸುವ ಮನೆಗಳಿಗೆ ಕಂಟಕ್ಕವಾಗಿವೆ.

ಮಾನ್ವಿ ಐ‌‌ಬಿಯಲ್ಲಿ ಇರುವ‌ ವಿದ್ಯಾರ್ಥಿ ನಿಲಯದ ಅವರಣದಲ್ಲಿ ಅರಳಿ ಮರದ ಮೇಲೆ ಬಹುಸಂಖ್ಯೆಯಲ್ಲಿ ಇರುವ ಕೊಕ್ಕರೆ , ನೀರಿನ ಕಾಗೆ , ಇನ್ನೂ ಮುಂತಾದ ಪಕ್ಷಿಗಳು ಗೂಡುಗಳನ್ನು ಮಾಡಿ  ಮರಿಗಳನ್ನು  ಇಟ್ಟುಕೊಂಡು  ವಾಸಿಸುತ್ತಿವೆ . ಸದ್ಯ ಕಟ್ಟಡ ನಿರ್ಮಾಣ ವಿಚಾರವಾಗಿ  ಅರಳಿ ಮರವನ್ನು ಕಡೆದರೆ ಗಿಡದ ಮೇಲೆ ವಾಸವಾಗಿರುವ ಹಕ್ಕಿ ಮರಿ‌ಗಳು ನೆಲೆಯಿಲ್ಲದಂತಾಗುತ್ತೆ. ಆಗಾಗಿ ಕಟ್ಟಡ ಕಾಮಗಾರಿ ಹೆಸರಲ್ಲಿ ಮರಗಳ ಮಾರಣ ಹೋಮ ನಿಲ್ಲಿಸಿ ಪಕ್ಷಿ ಹಾಗೂ ಮರಿಗಳನ್ನ ರಕ್ಷಣೆ ಮಾಡಬೇಕೆಂದು ಪಕ್ಷಿ ಪ್ರೇಮಿಗಳು  ಅರಣ್ಯ ಇಲಾಖೆ ಅಧಿಕಾರಿಗಳ ಮೊರೆ ಹೊಗಿದ್ದಾರೆ.

ಅನಿಲ್ ಕುಮಾರ್, ಕರ್ನಾಟಕ ಟಿವಿ -ರಾಯಚೂರು

- Advertisement -

Latest Posts

Don't Miss