2 ಸಾವಿರ. ಪ್ರತಿ ತಿಂಗಳು ಮನೆ ಯಜಮಾನಿಯರಿಗೆ 2 ಸಾವಿರ. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಹಣಕ್ಕೆ ಲಕ್ಷಾಂತರ ಗೃಹಿಣಿಯರು ಕಾಯುತ್ತಿದ್ದಾರೆ. ಆದರೆ ಕಳೆದ 3 ತಿಂಗಳಿಂದ ಗೃಹಲಕ್ಷ್ಮೀ ಹಣ ಹಾಕುತ್ತೇನೆ ಅಂದಿದ್ದ ಸರ್ಕಾರ, ಇನ್ನೂ ಹಾಕಿಲ್ಲ. ಇದೇ ವಿಚಾರವಾಗಿ ಗ್ಯಾರಂಟಿ ಸಮಿತಿ ಅಧ್ಯಕ್ಷ ಹೆಚ್.ಎಂ. ರೇವಣ್ಣ, ಪ್ರತಿ ತಿಂಗಳು ಹಣ ಹಾಕೋಕೆ ಕೆಲವೊಂದು ತೊಡಕುಗಳಿವೆ ಅನ್ನೋ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಾವು ಅಧಿಕಾರಕ್ಕೆ ಬಂದಾಗಿನಿಂದ ಗೃಹ ಲಕ್ಷ್ಮೀ ಹಣ ನಿಲ್ಲಿಸಿಲ್ಲ. ಪ್ರತಿ 3 ತಿಂಗಳಿಗೊಮ್ಮೆ ಹಣ ಕೊಡುತ್ತಿದ್ದೇವೆ. ಜಿಎಸ್‌ಟಿ ವಿಚಾರವಾಗಿ 1 ಲಕ್ಷದ 20 ಸಾವಿರ ಜನರಿಗೆ ಹಣ ಹೋಗಿರಲಿಲ್ಲ. ಅದರಲ್ಲೀಗ 58 ಸಾವಿರ ಜನರ ಸಮಸ್ಯೆ ಬಗೆಹರಿಸಿದ್ದೇವೆ. ಉಳಿದವರ ಸಮಸ್ಯೆ ಬಗೆಹರಿಸಿದ ಬಳಿಕ ಹಣ ಹಾಕುತ್ತೇವೆ ಅಂತಾ ಹೇಳಿದ್ದಾರೆ. ಈ ಮೂಲಕ ಪ್ರತಿ ತಿಂಗಳಿಗೆ ಬದಲಾಗಿ 3 ತಿಂಗಳಿಗೊಮ್ಮೆ ಹಣ ಕೊಡುತ್ತೇವೆ ಅಂತಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಹೇಳಿದ್ದಾರೆ.
ರಾಜ್ಯದ ಗೃಹಲಕ್ಷ್ಮಿಯರಿಗೆ ಕಳೆದ ಏಪ್ರಿಲ್, ಮೇ, ಜೂನ್ ತಿಂಗಳ ಹಣ ಬರಬೇಕಿದೆ. ಈ ಬಗ್ಗೆ ಕೆಲ ದಿನಗಳಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸ್ಪಷ್ಟನೆ ನೀಡುತ್ತಲೇ ಬಂದಿದ್ದಾರೆ. ಶೀಘ್ರವೇ ಗೃಹಲಕ್ಷ್ಮೀ ಹಣ ಹೆಣ್ಮಕ್ಕಳ ಖಾತೆಗೆ ಜಮಾ ಆಗಲಿದೆ ಅಂತಾ ಹೇಳಿದ್ದಾರೆ. ವರಮಹಾಲಕ್ಷ್ಮೀ ಹಬ್ಬದೊಳಗೆ ಮಹಿಳೆಯರಿಗೆ ಗೃಹ ಲಕ್ಷ್ಮೀ ಹಣ ಬರಬಹುದು. ಅಥವಾ ಗೌರಿ ಹಬ್ಬಕ್ಕೆ ಬಾಗಿನ ರೂಪದಲ್ಲಿ ಸರ್ಕಾರ ದುಡ್ಡು ಹಾಕುತ್ತಾ ಅಂತಾ ಮಹಿಳೆಯರು ಟೀಕಿಸುವಂತಾಗಿದೆ.
ವೀಕ್ಷಕರೇ… ಗೃಹಲಕ್ಷ್ಮೀ ಗ್ಯಾರಂಟಿ ವಿಚಾರವಾಗಿ, ಕಾಂಗ್ರೆಸ್ ನಾಯಕರು ಒಂದೊಂದು ಹೇಳಿಕೆ ಕೊಡ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ ತಿಳಿಸಿ.