ಬೆಂಗಳೂರು: ಜುಲೈ 19 ರಿಂದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಕ್ಕಿದ್ದರಿಂದ ಮಹಿಳೆಯರು ಹಗಲು ರಾತ್ರಿ ಎನ್ನದೆ ಬೆಂಗಳೂರು ಒನ್ , ಕರ್ನಾಟಕ ಒನ್ , ಗ್ರಾಮೀಣ ಒನ್ ,ಬಾಪೂಜಿ ಸೇವಾ ಕೇಂದ್ರದ ಮುಂದೆ ಸಾಲು ಗಟ್ಟಿ ನಿಂತು ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ. ಆದರೆ ಕೆಲವು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ಸರ್ವರ್ ಸಮಸ್ಯೆ ಎದುರಾಗುತ್ತಿದೆ.
ಇನ್ನು ರಾಜ್ಯ ದಲ್ಲಿ ಮಳೆ ಬಿಟ್ಟು ಬಿಡದೆ ಕಾಡುತ್ತಿದ್ದು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಬಂದಂತಹ ಮಹಿಳೆಯರಿಗೆ ಮಳೆ ಕಾಡುತ್ತಿದೆ ಯಾಕೆಂದರೆ ಹಾಸನದಲ್ಲಿ ನಗರಸಭೆ ಮುಂದೆ ಮಹಿಳೆಯರು ಜಮಾಯಿಸಿದ್ದು ಮಳೆಯಲ್ಲೂ ಕೊಡೆ ಹಿಡಿದುಕೊಂಡು ಅರ್ಜಿಯನ್ನು ಸಲ್ಲಿಸಲು ಸಾಲುಗಟ್ಟಿ ನಿಂತಿದ್ದಾರೆ. ಈ ಮದ್ಯೆ ಮಳೆಯಿಂದಾಗಿ ಸರ್ವರ್ ಸಮಸ್ಯೆಯು ಉಂಟಾಗಿದೆ ಹಾಗಾಗಿ ಮಹಿಳೆಯರು ಬೇಡಸರ ವ್ಯಕ್ತಪಡಿಸುತ್ತಿದ್ದಾರೆ.
ದೇವರು ವರ ಕೊಟ್ಟರು ಪೂಜಾರಿ ವರ ಕೊಡಲಿಲ್ಲ ಎನ್ನುವಂತಾಗಿದೆ. ಮಹಿಳೆಯರು ಮಾಸಿಕವಾಗಿ 2000 ಬರುತ್ತದೆ ಬೇಗ ಅರ್ಜಿ ಸಲ್ಲಿಸಿ ನಾವು ಸಹ ಫಲಾನುಭವಿಗಳಾಗೋಣ ಎಂದುಕೊಂಡವರಿಗೆ ಆಗಾಗ ಮಳೆ ಸಮಸ್ಯೆಯಿಂದಾಗಿ ಮಹಿಳೆಯರು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.
Hebbuli Haircut : ಹೆಬ್ಬುಲಿ ಹೇರ್ ಕಟ್ ಗೆ ಹೆಡ್ ಮಾಸ್ಟರ್ ಗರಂ ಆಗಿದ್ದೇಕೆ..?!