Bagalkote News : ಹೆಬ್ಬುಲಿ ರಿಲೀಸ್ ಆಗಿ 5 ವರ್ಷಗಳೇ ಕಳೆದರೂ ಇದೀಗ ಮತ್ತೆ ಹೆಬ್ಬುಲಿ ಚಿತ್ರ ಸದ್ದು ಮಾಡುತ್ತಿದೆ. ಹೌದು ಕಿಚ್ಚನ ಹೆಬ್ಬುಲಿ ಹೇರ್ ಕಟ್ ಗೆ ಹೆಡ್ ಮಾಸ್ಟರ್ ಒಬ್ಬರು ಗರಂ ಆಗಿದ್ದಾರಂತೆ. ಎಲ್ಲಾ ಒಕೆ 5 ವರ್ಷಗಳ ಮೇಲೆ ಈ ಕೋಪ ಯಾಕೆ ಸುದ್ದಿಯಾಗ್ತಿದೆ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್…
ಅದು 5 ವರ್ಷಗಳ ಹಿಂದೆ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ಕಿಚ್ಚನ ಚಿತ್ರವದು. ತನ್ನ ಡಿಫರೆಂಟ್ ಹೇರ್ ಸ್ಟೈಲ್ ನಲ್ಲೇ ವಿಭಿನ್ನವಾಗಿ ತೆರೆ ಮೇಲೆ ಮಿಂಚಿದ್ರು ಕಿಚ್ಚ ಸುದೀಪ್ ಆದರೆ ಈಗ ಅದೇ ಹೇರ್ ಸ್ಟೈಲ್ ಸದ್ದು ಮಾಡುತ್ತಿದೆ.
ಹೌದು ಹೆಬ್ಬುಲಿ ಹೇರ್‌ಕಟ್ ಮೇಲೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಳ್ಳಿಯೊಂದರ ಮೇಷ್ಟ್ರು ಗರಂ ಆಗಿದ್ದಾರೆ . ಹಲವು ವರ್ಷಗಳಿಂದ ಹೆಬ್ಬುಲಿ ಸ್ಟೈಲ್ ಹೇರ್‌ಕಟ್ ಮಾಡಿಸ್ಕೊಂಡು ಮಕ್ಕಳು ಶಾಲೆಗೆ ಬರ್ತಿದ್ರಂತೆ. ಹೆಡ್‌ಮಾಸ್ಟರ್‌ಗೆ ಇದೇ ಚಿಂತೆ. ಓದೋ ಟೈಮಲ್ಲಿ ಮಕ್ಕಳಿಗೆ ಇಂಥಹ ಸ್ಟೈಲ್ ಬೇಕಾ? ಒಬ್ರು ಈ ಥರ ಹೇರ್‌ಕಟ್ ಮಾಡಿಸ್ಕೊಂಡ್ರು ಅಂತ ಇನ್ನೊಬ್ರು ಮತ್ತೊಬ್ರು ಹೀಗೆ ಮಕ್ಕಳು ಬರೀ ಸ್ಟೈಲ್ ಬಗ್ಗೆನೇ ಗಮನ ಕೊಡ್ತಾ ಓದಿನ ಬಗ್ಗೆ ಆಸಕ್ತಿ ಕಳೆದುಕೊಳ್ತಾ ಇದ್ದಾರೆ ಅನ್ನೋದೆ ಮೇಷ್ಟ್ರ ಕಂಲ್ಲೈಂಟ್.
ಇದರಿಂದ ಬೇಸರಗೊಂಡ ಹೆಡ್‌ಮಾಸ್ಟರ್ ಶಾಲೆಯ ಹತ್ತಿರದ ಎಲ್ಲಾ ಸಲೂನ್‌ಗಳಿಗೆ ಪಾಠ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.ಇದು ತಮಾಶೆ ಅನ್ನಿಸಿದ್ರೂ ಸತ್ಯ. ಹಳ್ಳಿಯಲ್ಲಿ ಬಡ ಮಕ್ಕಳು ಹೇರ್ ಸ್ಟೈಲ್ ಮೋಹಕ್ಕೆ ಬಿದ್ದು ಬಡ ತಂದೆ ತಾಯಿಗಳಿಗೆ ತೊಂದರೆ ಕೊಡುತ್ತಾರೆ. ಆ ಹೇರ್ ಸ್ಟೈಲ್ ಮಾಡಿಸದೇ ಇದ್ದರೆ ಶಾಲೆಯ ವಾತಾವರಣ ಎರಡೂ ಚೆನ್ನಾಗಿರುತ್ತೆ.
ಹೀಗಾಗಿ 5 ವರ್ಷ ಕಳೆದ್ರೂ ಹೆಡ್‌ಮಾಸ್ಟರ್ ಮಾತು ಕೇಳದ ಮಕ್ಕಳ ಈ ಆಸೆಯನ್ನ ಬೇರಿಂದಲೇ ಕಿತ್ತೆಸೆಯಲು ಮೇಷ್ಟ್ರು ಸಲೂನ್ ಮಾಲಿಕರಿಗೆ ಪತ್ರ ಬರೆದಿದ್ದಾರೆ. ಒಟ್ಟಾರೆ ಸಿನಿಮಾದಿಂದ ಜನರು ತನ್ನ ಜೀವನ ಶೈಲಿ ಬದಲಾಯಿಸೋದು ಕಾಮನ್ ಆದ್ರೆ ಅದರ ಪರಿಣಾಮ ಧನಾತ್ಮಕವಾಗಿದ್ದರೆ ಮಾತ್ರ ಸ್ಟೈಲ್ ಫಾಲೋ ಮಾಡೋದು ಉತ್ತಮ ಅಷ್ಟೇ.
Hanitrap: ಸಚಿವರಾಗಿದ್ದಾಗ ಮುನಿರತ್ನ ಹನಿಟ್ರ್ಯಾಪ್ ಮಾಡಿಸುತ್ತಿದ್ದರು…!