Saturday, July 27, 2024

Latest Posts

ನಿಖಿಲ್, ಸುಮಲತಾ, ಕುಮಾರಸ್ವಾಮಿ ಲೋಕಸಭೆ ಚುನಾವಣೆ ಸ್ಪರ್ಧೆಯ ಬಗ್ಗೆ ಜಿ.ಟಿ.ಡಿ. ಸ್ಪಷ್ಟನೆ..

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿದ್ದು,  ರಾಜ್ಯಾದ್ಯಂತ 28 ಕ್ಷೇತ್ರಗಳಲ್ಲಿ ಗೆಲ್ಲಲು ಬಿಜೆಪಿ ಜೊತೆ ಸೇರಿ ಕಾರ್ಯಕ್ರಮ ರೂಪಿಸಿದ್ದೇವೆ. ಎಚ್‌.ಡಿ. ದೇವೇಗೌಡರು, ಕುಮಾರಸ್ವಾಮಿಯವರಿಗೆ ಆರು ಕ್ಷೇತ್ರ ಕೇಳಲು ಹೇಳಿದ್ದೇವೆ. ಹಾಸನ, ತುಮಕೂರು, ಮಂಡ್ಯ, ಮೈಸೂರು, ಕೋಲಾರ, ಬೆಂಗಳೂರು ಉತ್ತರದಿಂದ ಜೆಡಿಎಸ್‌ಗೆ ಟಿಕೆಟ್ ಕೇಳಲು ಹೇಳಿದ್ದೇವೆ. ಸುಮಲತಾ ಬಿಜೆಪಿ ಅಭ್ಯರ್ಥಿ ಆದ್ರೆ ನಾವು ಸ್ವಾಗತ ಮಾಡ್ತೇವೆ. ಆದರೆ ಸುಮಲತಾ ಕಾಂಗ್ರೆಸ್‌ಗೆ ಹೋದ್ರೆ ಅಚ್ಚರಿ ಪಡಬೇಕಿಲ್ಲ. ನಾರಾಯಣಗೌಡ್ರ ಜೊತೆ ಸೇರಿ ಸುಮಲತಾ ಕಾಂಗ್ರೆಸ್ ಹೋಗಬಹುದು. ನಿಖಿಲ್ ಚುನಾವಣೆಗೆ ನಿಲ್ಲುವ ತೀರ್ಮಾನ ಮಾಡಿಲ್ಲ. ಕುಮಾರಸ್ವಾಮಿ ಸ್ಪರ್ಧಿಸದೇ ಇದ್ದರೆ ಗೌಡರ ಕುಟುಂಬದಿಂದ ಒಬ್ಬರೇ ನಿಲ್ಲುತ್ತಾರೆ ಎಂದು ಹೇಳಿದ್ದಾರೆ.

ಅಲ್ಲದೇ, ಬಿಜೆಪಿ ಜೊತೆ ಹೋಗುವ ನಿರ್ಧಾರವನ್ನು ಜೆಡಿಎಸ್ ಕಾರ್ಯಕರ್ತರು ಸ್ವಾಗತಿಸಿದ್ದಾರೆ, ಯಾರೂ ವಿರೋಧಿಸಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ದೌರ್ಜನ್ಯ, ದಬ್ಬಾಳಿಕೆ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ತೆಗೆದು ಹಾಕಲು ನಾವು ಒಂದಾಗಿದ್ದೇವೆ. ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಒಂದಾಗಿ ಹೋಗುತ್ತೇವೆ. ಕೇಸರಿ ಶಾಲಿನ ಮೇಲೆ ಬಿಜೆಪಿ ಚಿಹ್ನೆ ಇರಲಿಲ್ಲ. ಬಿಜೆಪಿ ತತ್ವ ಸಿದ್ಧಾಂತ ಬೇರೆ, ಜೆಡಿಎಸ್ ಸಿದ್ಧಾಂತ ಬೇರೆ. ನಮ್ಮ ತತ್ವ ಸಿದ್ಧಾಂತಗಳನ್ನು ಇಟ್ಟುಕೊಂಡೇ ಪಕ್ಷ ಕಟ್ಟುತ್ತೇವೆ ಎಂದು ಜಿ.ಟಿ.ದೇವೇಗೌಡರು ಹೇಳಿದ್ದಾರೆ.

ಅನುದಾನದ ಬಗ್ಗೆ ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸುತ್ತೆ. ಹಣಕಾಸು ಆಯೋಗದ ಗೈಡ್‌ಲೈನ್ಸ್ ಪ್ರಕಾರ ಅನುದಾನ ಕೊಡಲಾಗಿದೆ. ಸಿದ್ದರಾಮಯ್ಯ ಈ ರಾಜ್ಯಕ್ಕೆ ಏನೇನು ಕೊಟ್ಟಿದ್ದಾರೆ? ಎಮ್‌ಎಲ್‌ಎಗಳಿಗೆ ಕೇವಲ 50 ಲಕ್ಷ ಕೊಟ್ಟಿದ್ದು ಬಿಟ್ಟರೆ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ನಮ್ಮ‌ ರಾಜ್ಯಕ್ಕೆ ಸಿಗಬೇಕಾದ ಅನುದಾನ ಸಿಗಲೇಬೇಕು, ಅದಕ್ಕಾಗಿ ಧ್ವನಿ ಎತ್ತುತ್ತೇವೆ. ಖರ್ಗೆ ಪ್ರಧಾನಿಯಾಗಲು ಸೂಕ್ತ ಅಭ್ಯರ್ಥಿ, ಆದರೆ ಅವರೊಬ್ಬರಿಗೆ ಪಿಎಮ್ ಆಗಲು ಸಾಧ್ಯವಿಲ್ಲ. ಖರ್ಗೆ ಪಿಎಮ್ ಆದರೆ ನಾವೆಲ್ಲಾ ಸಂತೋಷ ಪಡುತ್ತೇವೆ. ಆದರೆ ಸಿದ್ದರಾಮಯ್ಯನವರು ರಾಹುಲ್ ಗಾಂಧಿ ಪಿಎಮ್ ಆಗಲಿ ಅಂತಿದ್ದಾರೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.

ಕಾಂಗ್ರೆಸ್‌ಗೆ ಸೇರಲಿದ್ದಾರೆ ಕೋಲಾರದ ಇಬ್ಬರು ಜೆಡಿಎಸ್ ಶಾಸಕರು..!

ನಾಳೆ ರಾಜ್ಯದಲ್ಲಿ ಅಧಿಕೃತ ಆಪರೇಷನ್ ಕಮಲಕ್ಕೆ ಚಾಲನೆ ಸಿಗಲಿದೆ: ಶಂಕರ್ ಪಾಟೀಲ್ ಮುನೇನಕೊಪ್ಪ

ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಷ್..

- Advertisement -

Latest Posts

Don't Miss