- Advertisement -
ಬೆಂಗಳೂರಿನಲ್ಲಿ ನಕಲಿ ಆರ್.ಓ ಪ್ಲಾಂಟ್ ಇನ್‌ಸ್ಟಾಲ್ ಮಾಡುವವರ ದಂಧೆ ಶುರುವಾಗಿದೆ. ಕಮರ್ಷಿಲ್ ಆರ್.ಓ ಪ್ಲಾಂಟ್ ಅನ್ನೋ ಕಂಪನಿಯವರು 10ರಿಂದ 20 ಸಾವಿರ ರೂಪಾಯಿ ಪಡೆದು, ಅದರಲ್ಲಿ ಒಂದರಿಂದ ಎರಡು ಡುಪ್ಲಿಕೇಟ್ ಮಷಿನ್‌ಗಳನ್ನ ಅಳವಡಿಸ್ತಾರೆ. ಒಂದೆರಡು ತಿಂಗಳ ಬಳಿಕ ಅದು ಹಾಳಾಗತ್ತೆ. ಅದನ್ನ ಸರಿ ಮಾಡಿಸೋಕ್ಕೆ ನೀವು ಈ ಕಂಪನಿಯವರಿಗೆ ಕಾಲ್ ಮಾಡಿದ್ರೆ, ಅವರಿಂದ ಯಾವುದೇ ರೆಸ್ಪಾನ್ಸ್ ಸಿಗೋದಿಲ್ಲಾ.

ಇದೇ ರೀತಿ ಎಷ್ಟೋ ಕಂಪನಿಗಳಿಗೆ ನಕಲಿ ಆರ್.ಓ ಪ್ಲಾಂಟ್ ಸೇಲ್ ಮಾಡಿ ಎಸ್ಕೇಪ್ ಆಗಿದೆ ಕಮರ್ಷಿಯಲ್ ಆರ್.ಏ ಪ್ಲಾಂಟ್ ಗ್ರೂಪ್. ಈ ಕಂಪನಿಯ ಪ್ರಾಡಕ್ಟ್ ಕೊಂಡುಕೊಂಡವರು ಇವರಿಗೆ ಹಿಡಿ ಶಾಪ ಹಾಕುವಂತಾಗಿದೆ. ನೀವೂ ಏನಾದ್ರೂ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವ ಮುಂಚೆ ಯೋಚನೆ ಮಾಡಿ. ಇಲ್ಲಾದ್ರೆ 10 ರಿಂದ 20 ಸಾವಿರ ರೂಪಾಯಿ ಕಳೆದುಕೊಳ್ಳುವುದು ಗ್ಯಾರಂಟಿ.


- Advertisement -