ಪುಣೆ: ವೇಗಿ ಲಾಕಿ ಫಗ್ರ್ಯೂಸನ್ ಅವರ ಅಮೋಘ ಬೌಲಿಂಗ್ ಪ್ರದರ್ಶನದ ನೆರೆವಿನಿಂದ ಗುಜರಾತ್ ಟೈಟಾನ್ಸ್ ಬಲಿಷ್ಠ ಡೆಲ್ಲಿ ವಿರುದ್ಧ 14 ರನ್‍ಗಳ ಗೆಲುವು ದಾಖಲಿಸಿದೆ.
ಪುಣೆಯಲ್ಲಿ ನಡೆದ 10ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್ ಆಯ್ದುಕೊಂಡಿತು.
ಗುಜರಾತ್ ಪರ ಓಪನರ್ ಶುಭಮನ್ ಗಿಲ್ 84, ಮ್ಯಾಥ್ಯೂ ವೇಡ್ 1, ವಿಜಯ್ ಶಂಕರ್ 13, ನಾಯಕ ಹಾರ್ದಿಕ್ ಪಾಂಡ್ಯ 31, ಡೇವಿಡ್ ಮಿಲ್ಲರ್ 20, ರಾಹುಲ್ ತೆವಾಟಿಯಾ 14 ರನ್ ಗಳಿಸಿದರು. ಗುಜರಾತ್ 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಕಲೆ ಹಾಕಿತು.
ಡೆಲ್ಲಿ ಪರ ವೇಗಿ ಮುಸ್ತಾಫಿಜೂರ್ ರೆಹಮಾನ್ 3 ವಿಕೆಟ್, ಖಲೀಲ್ ಅಹ್ಮದ್ 2 ವಿಕೆಟ್ ಹಾಗೂ ಕುಲ್‍ದೀಪ್ ಯಾದವ್ 1 ವಿಕೆಟ್ ಪಡೆದರು.
172 ರನ್‍ಗಳ ಬೃಹತ್ ಮೊತ್ತ ಬೆನ್ನತ್ತಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಓಪನರ್ ಪೃಥ್ವ ಶಾ 10, ಟಿಮ್ ಸೀಫರ್ಟ್ 3, ಮಂದೀಪ್ ಸಿಂಗ್ 18, ರಿಷಭ್ ಪಂತ್ 43, ಲಲಿತ್ ಯಾದವ್ 25, ರೊವಮನ್ ಪೊವೆಲ್ 20, ಅಕ್ಷರ್ ಪಟೇಲ್ 8, ಕುಲ್‍ದೀಪ್ ಯಾದವ್ 14, ಮುಸ್ತಾಫಿಜುರ್ 3 ರನ್ ಕಲೆ ಹಾಕಿದರು.
ಅಂತಿಮವಾಗಿ ಡೆಲ್ಲಿ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 157 ರನ್ ಕಲೆ ಹಾಕಿತು. ಗುಜರಾತ್ ಪರ 4 ವಿಕೆಟ್ ಪಡೆದ ಫಗ್ರ್ಯೂಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.