Saturday, April 19, 2025

Latest Posts

ಬ್ಲಾಸ್ಟರ್ಸ್ ಗೆಲುವಿನ ಓಟಕ್ಕೆ ಮಿಸ್ಟಿಕ್ಸ್ ಕಡಿವಾಣ

- Advertisement -

ಬೆಂಗಳೂರು: ದೇವದತ್ ಪಡಿಕಲ್ ಅವರ ಅತ್ಯದ್ಭುತ ಬ್ಯಾಟಿಂಗ್ ನೆರೆವಿನಿಂದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡ ಮಹಾರಾಜ ಟಿ20 ಟ್ರೋಫಿಯಲ್ಲಿ ಬಲಿಷ್ಠ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 6 ವಿಕೆಟ್‍ಗಳ ಗೆಲುವು ದಾಖಲಿಸಿತು.

ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ  ಟಾಸ್ ಗೆದ್ದ ಗುಲ್ಬರ್ಗಾ ತಂಡ ಫಿಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ನಿಗದಿತ 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತು. ಗುಲ್ಬರ್ಗಾ ತಂಡ 17.3 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿ ವಿಜಯಿಯಾಯಿತು.

145 ರನ್ ಗುರಿ ಬೆನ್ನತ್ತಿದ ಗುಲ್ಬರ್ಗಾ ಪರ ದೇವದತ್ ಪಡಿಕಲ್ (61 ಎಸೆತ, 7 ಬೌಂಡರಿ 4 ಸಿಕ್ಸರ್)ಅಜೇಯ 78 ರನ್, ರೋಹನ್ ಪಾಟೀಲ್ 1, ಜೆಸ್ವಂತ್ ಆಚಾರ್ಯ 18, ಕೃಷ್ಣನ್ ಶ್ರೀಜೀತ್ 12,ಮನೀಶ್ ಪಾಂಡೆ 13, ಮನೋಜ್ ಅಜೇಯ 11 ರನ್ ಗಳಿಸಿದರು. ಬ್ಲಾಸ್ಟರ್ಸ್ ಪರ ರೋನಿತ್ ಮೋರೆ, ಜೆ.ಸುಚೀತ್ ಹಾಗೂ ಕ್ರಾಂತಿ ಕುಮಾರ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಬೆಂಗಳೂರು ಬ್ಲಾಸ್ಟರ್ಸ್ ಪರ ಚೇತನ್ 6,  ನಾಯಕ ಮಯಾಂಕ್ ಅಗರ್‍ವಾಲ್ 28, ಅನೀಶ್ 20, ರಕ್ಷಿತ್ 16, ಅನಿರುದ್ಧ ಜೋಶಿ 4,  ಕ್ರಾಂತಿ ಕುಮಾರ್ 17, ಜೆ .ಸುಚೀತ್ 17, ಬೋಪಣ್ಣ 9, ಪ್ರದೀಪ್ 8 ರನ್ ಗಳಿಸಿದರು. ಗುಲ್ಬರ್ಗಾ ಪರ ವಿದ್ವತ್ ಕಾವೇರಪ್ಪ ಹಾಗೂ ಮನೋಜ ತಲಾ 3 ವಿಕೆಟ್ ಪಡೆದರು.

- Advertisement -

Latest Posts

Don't Miss