ಬೆಂಗಳೂರು: ನಾಯಕ ಮನೀಶ್ ಪಾಂಡೆ ಸೊಗಸಾದ ಬ್ಯಾಟಿಂಗ್ ನೆರೆವಿನಿಂದ ಗುಲ್ಬರ್ಗಾ ಮಿಸ್ಟಿಕ್ಸ್ ಮಹಾರಾಜ ಟಿ20 ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ 7 ರನ್‍ಗಳ ರೋಚಕ ಗೆಲುವು ಪಡೆಯಿತು. ಈ ಗೆಲುವಿನೊಂದಿಗೆ ಗುಲ್ಬರ್ಗಾ ಮೊದಲ ಸ್ಥಾನಕ್ಕೇರಿತು.
ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮೈಸೂರು ಫೀಲ್ಡಿಂಗ್ ಆಯ್ದುಕೊಂಡಿತು. ನಾಯಕ ಮನೀಶ್ ಪಾಂಡೆ ಅಜೇಯ 57, ಜೆಸ್ವತ್ ಆಚಾರ್ಯ 34, ಕೃಷ್ಣನ್ ಶ್ರೀಜಿತ್ 30 ರನ್ ಗಳಿಸಿದರು.
ಗುಲ್ಬರ್ಗಾ 17.3 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿದ್ದಾಗ ಜೋರಾಗಿ ಮಳೆ ಸುರಿದು ಪಂದ್ಯ ಸ್ಥಗಿತಗೊಂಡಿತು.
ಪಂದ್ಯಕ್ಕೆ ಮಳೆ ಅಡ್ಡಿ ಮಾಡಿದ್ದರಿಂದ ವಿಜೆಡಿ ನಿಯಮ ಅಳವಡಿಸಲಾಯಿತು. ಮೈಸೂರು ತಂಡಕ್ಕೆ 11 ಓವರ್‍ಗಳಲ್ಲಿ 110 ರನ್ ಗುರಿ ನೀಡಲಾಯಿತು.
ಮೈಸೂರು ಪರ ಪವನ್ ದೇಶಪಾಂಡೆ 25, ಕೊನೆಯಲ್ಲಿ ಶ್ರೇಯಸ್ ಗೋಪಾಲ್ 16 ಎಸೆತದಲ್ಲಿ 32 ರನ್ ಹೊಡೆದು ರನೌಟ್ ಆದರು. ಶುಭಾಂಗ ಹೆಗಡೆ 6, ಭರತ್ ` ಅಜೇಯ 7, ವಿದ್ಯಾಧರ್ ಅಜೇಯ 1 ರನ್ ಗಳಿಸಿದರು.
ಅಂತಿಮವಾಗಿ ನಿಗದಿತ 11 ಓವರ್‍ಗಳಲ್ಲಿ ಮೈಸೂರು 7 ವಿಕೆಟ್ ನಷ್ಟಕ್ಕೆ 102 ರನ್ ಗಳಿಸುವಲ್ಲಿ ಮಾತ್ರ ಶಕ್ತವಾಯಿತು. ಗುಲ್ಬರ್ಗಾ ಪರ ರಿತೇಶ್ `ಭಟ್ಕಳ್, ಅಜಿತ್ ಕಾರ್ತಿಕ್ ತಲಾ 2 ವಿಕೆಟ್ ಪಡೆದರು.