ವಿಶ್ವಮಟ್ಟದ ಬಾಲಿ ಬಿಲ್ಡಿಂಗ್ ನಲ್ಲಿ ಹೆಸ್ರು ಮಾಡಿದವರು.. ಬಣ್ಣನ ನಂಟು ಇವ್ರಿಗೆ ಉಂಟು.. ಬಟ್ ಹೀರೋ ಆಗಿ ಮಿಂಚುವ ಅವಕಾಶ ಸಿಕ್ಕಿರಲಿಲ್ಲ. ಹಾಗಂತ ಜಿಮ್ ರವಿ ಕನ್ನಡ ಇಂಡಸ್ಟ್ರೀಯಲ್ಲಿ ಮಿಂಚಿಲ್ಲ ಅಂತಲ್ಲ. ಇವ್ರ ಭತ್ತಳಿಕೆಯಲ್ಲಿ ಬರೋಬ್ಬರಿ 140ಕ್ಕೂ ಹೆಚ್ಚು ಸಿನಿಮಾಗಳ ಲಿಸ್ಟ್ ಇದೆ. ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ತಿದ್ದ ಜಿಮ್ ರವಿ ಅವರು ಈಗ ಹೀರೋ ಆಗಿ ಪ್ರಮೋಷನ್ ಪಡೆದಿದ್ದಾರೆ.

ಜಿಮ್ ರವಿಯವರು ಪುರುಷೋತ್ತಮ ಎಂಬ ಸಿನಿಮಾಕ್ಕೆ ಬಂಡವಾಳ ಹೂಡುವುದರ ಜೊತೆ ಈ ಚಿತ್ರದಲ್ಲಿ ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ. ಅಮರನಾಥ್ ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ಅವರ ಆ್ಯಕ್ಷನ್ ಕಟ್ ಹೇಳಿದ್ದು, ಇದೇ ತಿಂಗಳ ಫೆಬ್ರವರಿ 14 ಅಂದ್ರೆ ಪ್ರೇಮಿಗಳ ದಿನದಂದು ಪುರುಷೋತ್ತಮ ಸಿನಿಮಾದ ಮುಹೂರ್ತ ಕಾರ್ಯಕ್ರಮ ನೆರವೇರಲಿದೆ.

ಸದ್ಯ ಕಲಾವಿದರ ಅಪ್ ಡೇಟ್ ಸದ್ಯಕ್ಕೆ ಸಿಕ್ಕಿಲ್ಲವಾದ್ರು. ಶ್ರೀಧರ್ ವಿ ಸಂಭ್ರಮ್ ಮ್ಯೂಸಿಕ್ ಕಂಪೋಸ್ , ಕುಮಾರ್ ಕ್ಯಾಮರಾ ವರ್ಕ್ ಸಿನಿಮಾದಲ್ಲಿರಲಿದೆ.
ಇನ್ನು, ಜಿಮ್ ರವಿ ಅವರು, ದೇಹದಾರ್ಢ್ಯ ವಿಭಾಗದಲ್ಲಿ ಭಾರತಕ್ಕೆ ಹಲವು ಪದಕ ತಂದುಕೊಟ್ಟವರು. ನಾಲ್ಕು ಬಾರಿ ಭಾರತ ತಂಡದ ನಾಯಕನಾಗಿ, ಎರಡು ಬಾರಿ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇಂಡೋ-ಪಾಕಿಸ್ತಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ್ಕೆ ಮುತ್ತಿಟ್ಟವರು. ‘ಭಾರತ ಶ್ರೀ’, ‘ಭಾರತ ಶ್ರೇಷ್ಠ’, ‘ಕರ್ನಾಟಕ ಶ್ರೀ’, ‘ಕರ್ನಾಟಕ ಶ್ರೇಷ್ಠ’ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಹಾಗೂ 90ಕ್ಕೂ ಹೆಚ್ಚು ಚಿನ್ನದ ಪದಕಗಳನ್ನ ರವಿಯವರ ಮುಡಿಗೇರಿವೆ.
ಇಷ್ಟೆಲ್ಲಾ ಪದಕಗಳಿಗೆ ಭಾಜನರಾಗಿರುವ ರವಿ ಇದೀಗ ಹೀರೋ ಆಗಿ ಬಡ್ತಿ ಪಡೆದಿದ್ದು, ಸ್ಟಾರ್ ಹೀರೋ ಆಗಿ ಮಿಂಚಲಿ.
