ಮೈಸೂರು: ಮೈಸೂರಿನಲ್ಲಿಂದು ಸುದ್ದಿಗೋಷ್ಟಿ ನಡೆಸಿ, ಮಾತನಾಡಿದ ಹೆಚ್,ವಿಶ್ವನಾಥ್, ಸಿದ್ದರಾಮಯ್ಯರಿಗೆ ಹೋರಾಟಕ್ಕೆ ಬನ್ನಿ ಎಂದು ಆಮಂತ್ರಣ ನೀಡಿದರು.

ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ, ವಿಶ್ವನಾಥ್, ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಹೋರಾಟಕ್ಕೆ ನಾವು ಬರ್ತಿವಿ. ಮೀಸಲಾತಿ ವಿಚಾರದಲ್ಲಿ ಹೋರಾಟದ ಅವಶ್ಯಕತೆ ಇದೆ. ಆದರೆ ನೀವೂ ಹೋರಾಟಕ್ಕೆ ಬರೋದಿಲ್ಲ ಎಂದಿದ್ದೀರಾ. ಎಸ್.ಟಿ.ನ ಯಾರೋ ಹೈಜಾಕ್ ಮಾಡ್ತಿದ್ದಾರೆ ಅಂತೀರಾ. ದೊಡ್ಡ ಸಮುದಾಯವನ್ನ ಯಾರು ಹೈಜಾಕ್ ಮಾಡಲು ಆಗಲ್ಲ ಎಂದು ಹೇಳಿದರು.

ಅಲ್ಲದೇ, ಸಿದ್ದರಾಮಯ್ಯ ಅವರೇ ನಿಮ್ಮನ್ನ ಎಲ್ಲರು ಹೋರಾಟಕ್ಕೆ ಬನ್ನಿ ಎಂದು ಕರೆದಿದ್ದಾರೆ. HM ರೇವಣ್ಣ, ಈಶ್ವರಪ್ಪ, ಸ್ವಾಮೀಜಿಗಳು ಸಹ ಹೋರಾಟಕ್ಕೆ ಬರುವಂತೆ ಕರೆದಿದ್ದಾರೆ. ಆದರೆ ನೀವೂ ನನಗೆ ಯಾರು ಕರೆದಿಲ್ಲ ಅಂತೀರಾ. ನೀವೂ ಬನ್ನಿ ಸಿದ್ದರಾಮಯ್ಯಮವರೇ ನಿಮ್ಮ ನಾಯಕತ್ವದಲ್ಲಿ ನಾವು ಹೋಗುತ್ತೇವೆ. ಸಿದ್ದರಾಮಯ್ಯ ನೇತೃತ್ವದ ಹೋರಾಟಕ್ಕೆ ಕೈಜೋಡಿಸುವುದಾಗಿ ಹೇಳಿದ ವಿಶ್ವನಾಥ್. ಹಳೆಯದೆಲ್ಲವನ್ನು ಮರೆತು ಮುಂದೆ ಸಾಗೋಣ ಬನ್ನಿ ಎಂದು ಎಸ್.ಟಿ.ಮೀಸಲಾತಿ ವಿಚಾರವಾಗಿ ಹೋರಾಟಕ್ಕೆ ಬರುವಂತೆ ವಿಶ್ವನಾಥ್ ಆಹ್ವಾನ ನೀಡಿದರು.

ದೇಶದಲ್ಲಿ ಯಾರು ಮಾಡದ ಸಾಹಸಕ್ಕೆ ನೀವು ಕೈ ಹಾಕಿದ್ದೀರಿ. ರಾಜ್ಯದಲ್ಲಿ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಮಾಡಿಸಿದ್ದೀರಿ. ಆ ಸಮಿಕ್ಷೆ ವರದಿ ಚರ್ಚೆಗೆ ಬಂದಿದ್ದರೆ ನೀವು ಮತ್ತೆ ಸಿಎಂ ಆಗುತ್ತಿದ್ರೇನೋ? ಇರಲಿ ಅದೇಲ್ಲವು ಮುಗಿದಿದೆ. ಆದ್ರೆ ಕುರುಬ ಸಮುದಾಯ ಎಸ್.ಟಿ.ಗೆ ಸೇರುವ ಹೋರಾಟ ಇನ್ನು ಕಠಿಣವಾಗಿ ಆಗಬೇಕಿದೆ. ಅದಕ್ಕಾಗಿ ನಿಮ್ಮ ಸಹಕಾರ ಹಾಗೂ ಬೆಂಬಲ ಬೇಕು. ನಮ್ಮ ಜೊತೆ ಹೋರಾಟಕ್ಕೆ ಬನ್ನಿ ಎಂದು ವಿಶ್ವನಾಥ್ ಸಿದ್ದರಾಮಯ್ಯರನ್ನ ಬಹಿರಂಗವಾಗಿ ಆಹ್ವಾನಿಸಿದ್ದಾರೆ.
ಮಲ್ಲೇಶ್, ಮೈಸೂರು, ಕರ್ನಾಟಕ ಟಿವಿ