State News : ಚೈತ್ರಾ ಕುಂದಾಪುರ ಟಿಕೆಟ್ ಡೀಲ್ ಪ್ರಕರಣದಲ್ಲಿ ಅರೆಸ್ಟ್ ಆಗಿರೋ ಆರೋಪಿ ಹಾಲಶ್ರೀ ಇಂದು ಸಿಸಿಬಿ ಅಧಿಕಾರಿಗಳ ಮುಂದೆ ಹೈಡ್ರಾಮಾ ಮಾಡಿದ್ದಾರೆ.
ಗೋವಿಂದ ಬಾಬು ಪೂಜಾರಿಗೆ ನಾನು ಈಗಾಗಲೇ 50 ಲಕ್ಷ ಕೊಟ್ಟಿದ್ದು, ಉಳಿದ ಹಣವನ್ನೂ ವಾಪಸ್ ಮಾಡ್ತೀನಿ ಎಂದು ಹೇಳಿದ್ದಾರೆ. ಟಿಕೆಟ್ ಕೊಡಿಸ್ತೀನಿ ಅಂತ ನಾನು ಹಣ ಪಡೆದಿಲ್ಲ. ನನಗೆ ಕೊಟ್ಟಿರೋ ಹಣ ವಾಪಸ್ ಕೊಟ್ಟು ಬಿಡ್ತೀನಿ ಎಂದು ವಿಚಾರಣೆ ವೇಳೆ ನಾಟಕ ಶುರುಮಾಡಿದ್ದಾರೆ.
ಈಗಾಗಲೇ 50 ಲಕ್ಷ ಹಣವನ್ನು ಗೋವಿಂದ ಬಾಬುಗೆ ವಾಪಸ್ ಕೊಟ್ಟಿದ್ದೀನಿ. ದೂರು ಕೊಡುವ ಹಿಂದಿನ ದಿನವೂ ಹಣ ಕೊಡ್ತೀನಿ ಅಂತ ಹೇಳಿದ್ದೆ. ನನ್ನ ಹಣಕ್ಕೆ ಮಾತ್ರ ನಾನು ಜವಾಬ್ದಾರಿ, ಬೇರೆಯವರ ಹಣ ಗೊತ್ತಿಲ್ಲ ಎಂದು ಹೇಳುವ ಮೂಲಕ ನುಣುಚಿಕೊಳ್ಳುವ ಪ್ರಯತ್ನವನ್ನು ಹಾಲಶ್ರೀ ಮಾಡಿದ್ದಾರಂತೆ.
ಇದ್ರ ಮಧ್ಯೆ, 3ನೇ ಆರೋಪಿಯಾಗಿರುವ ಅಭಿನವ ಹಾಲಶ್ರೀಯನ್ನು 10 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ 1ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
KIMS Hospital: ಆಸ್ಪತ್ರೆಯಲ್ಲಿ ಮಕ್ಕಳನ್ನು ಅದಲು ಬದಲು ಮಾಡಿದ ಸಿಬ್ಬಂದಿಗಳು..!
Hubli Ganesha: ಗಣೇಶ ವಿಸರ್ಜನೆ ಹಿನ್ನೆಲೆ ಈದ್ ಮಿಲಾದ್ ಮೆರವಣಿಗೆ ಮುಂದೂಡಿದ ಅಂಜುಮನ್ ಸಮಿತಿ..!




