ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಗಣೇಶೋತ್ಸವ ಆಚರಣೆ ವಿವಾದದ ಬಿಸಿ ತಣ್ಣಗಾಗುತ್ತಿರುವಂತೆಯೇ ಶಾಂತಿ ಸೌಹಾರ್ದತೆಗಾಗಿ ಅಂಜುಮನ್ ಸಮಿತಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈದ್ ಮಿಲಾದ್ ಹಬ್ಬದ ಮೆರವಣಿಗೆಯನ್ನು ಒಂದು ದಿನ ಮುಂದೂಡಲು ಅಂಜುಮನ್ ಸಮಿತಿ ನಿರ್ಧರಿಸಿದೆ.
ನಗರದಲ್ಲಿ ಸೆ 28 ರಂದು ಗಣೇಶ ವಿಸರ್ಜನೆ ಇದ್ದು ಅಂದು ಮುಸ್ಲಿಂ ಬಾಂದವರ ಈದ್ ಮಿಲಾದ್ ಮೆರವಣಿಗೆ ಇದ್ದು ಶಾಂತಿ ಸೌಹಾರ್ದತೆ ಕಾಪಾಡಲು ಈದ್ ಮಿಲಾದ್ ಮೆರವಣಿಗೆ ಒಂದು ದಿನ ಮುಂದೂಡಲು ಮುಸ್ಲೀಂ ಗುರುಗಳು ಅಮಜುಮನ್ ಸಮಿತಿಯ 52 ಸದಸ್ಯರು ಒಮ್ಮತದಿಂದ ನಿರ್ಧಾರ ಮಾಡಲಾಗಿದೆ ಎಂದು ಸಮಿತಿಯ ಅಧ್ಯಕ್ಷರಾದ ಯುಸೂಫ್ ಸವಣೂರು ತಿಳಿಸಿದ್ದಾರೆ.
ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಸ್ಥಾಪನೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಕೊನೇ ಕ್ಷಣದವರೆಗೂ ಧರಣಿ ನಡೆಸಿದ್ದವು. ಈ ಮಧ್ಯೆ, ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಹುಬ್ಬಳ್ಳಿ-ಧಾರವಾಡ ಪಾಲಿಕೆ ಠರಾವಿಗೆ ತಡೆಯಾಜ್ಞೆ ಕೋರಿ ಅಂಜುಮನ್ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್ನ ಪೀಠ ವಜಾಗೊಳಿಸಿತ್ತು.
ನಾವು ಬಿಜೆಪಿ ಸರ್ಕಾರದಲ್ಲಿ ತುಂಬಾ ತೊಂದರೆಗಳನ್ನು ಅನುಭವಿಸಿದ್ದೇವೆ ಆದರೆ ಈ ವರ್ಷ ಈ ಯಾವುದೇ ರೀತಿಯ ಗಲಾಟೆ ಆಗಬಾರದು ಎನ್ನುವ ಕಾರಣಕ್ಕೆ ನಾವು ನಮ್ಮ ಹಬ್ಬದ ಮೆರವಣಿಗೆಯನ್ನು ತ್ಯಾಗ ಮಾಡಿದ್ದೇವೆ ಅವರು ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರ ಮಾಡಲಿ ಅವರಿಗೆ ಗಣೇಶ ಹಬ್ಬದ ಶುಭಾಶಯಗಳು ಎಂದು ಹೇಳಿದರು.
Chaitra kundapura: ಹಾಲಾ ಶ್ರೀ ಮಠದಲ್ಲಿ ವಂಚನೆ ಹಣ ಪತ್ತೆ: ಅಬ್ಬಬ್ಬಾ ಎಷ್ಟು ಗೊತ್ತಾ..!
Press Meet; ಹುಬ್ಬಳ್ಳಿಯಲ್ಲಿ ಶಾಸಕ ಅರವಿಂದ್ ಬೆಲ್ಲದ, ಮಹೇಶ್ ಟೆಂಗಿನಕಾಯಿ ಜಂಟಿ ಸುದ್ದಿಗೋಷ್ಠಿ