ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೋಲಿಸ್ ಠಾಣ ವ್ಯಾಪ್ತಿಯಲ್ಲಿ ನಡೆದ ಘಟನೆ
ಮದುವೆಯಾಗಿ ವಯಸ್ಸಿಗೆ ಬಂದಿರುವ ಇಬ್ಬರು ಮಕ್ಕಳು 20 ವರ್ಷದವರು. ಅದರೆ ಅದೇಕೋ ಗೊತ್ತಿಲ್ಲ ಮದುವೆಗೆ ಫೋಟೋಗ್ರಾಫರ್ ನ ಮೇಲೆ ಪ್ರೇಮವಾಗಿ ಮಕ್ಕಳು ಮತ್ತುಗಂಡನನ್ನು ಬಿಟ್ಟು ಪ್ರೀತಿ ಮಾಡಿ ಮನೆಬಿಟ್ಟು ಬಂದು ರಿಜಿಸ್ಟಾರ್ ಮದುವೆ ಮಾಡಿಕೊಂಡು ಜೀವನ ಸಾಗಿಸುತಿದ್ದಳು. ಫೋಟೋ ಗ್ರಾಫರ್ ತುಕಾರಾಮ್ ನ ವಯಸ್ಸು ಕೆವಲ 28 .ಆದರೆ ಪ್ರೀತಿ ಮಾಡಿ ಮರುಮದುವೆಯಾದ ಶಾಂತಕುಮಾರಿ ವಯಸ್ಸು ವಯಸ್ಸು ಬರೋಬ್ಬರಿ 39 ಅವಳು ಮತ್ತು ಇವನ ಮದ್ಯೆ 11 ವರ್ಷ ಅಂತರ. ಅದ್ಯೇಗೆ ಈ ತುಕಾರಾಮ ಅವಳನ್ನು ಪ್ರೀತಿಸಿದನೋ ಗೊತ್ತಿಲ್ಲ.ಜೊತೆಗೆ ಮದುವೆನೂ ಆದ. ಕೆಲವು ದಿನಗಳು ತುಂಬಾ ಚೆನ್ನಾಗಿದ್ದವು ಆದರೆ ಬರುಬರುತ್ತಾ ಈ ತುಕಾರಾಮ ಅಪ್ಪಿತಪ್ಪಿಯೂ ಯಾವ ಮಹಿಳೆಯ ಜೊತೆ ಮಾತನಾಡಿದರೆ.ನಿದ್ದೆ ಬರುವರೆಗೂ ಜಗಳ ಆಡುತಿದ್ದರು. ಯಾಕೆಂದರೆ ಶಾಂತಕುಮಾರಿಗೆ ತುಕಾರಾಮನ ಮೇಲೆ ಅದಾಗಲೆ ಅನುಮಾನ ಶುರುವಾಗಿತ್ತು.ಹೀಗೆ ಅನುಮಾನಿಸಿದವಳು ಕೊನೆಯುಸಿರೆಳು.
ಹೌದು ಸ್ನೇಹಿತರೆ ಅವಳು ಅವನ ಮೇಲಿನ ಅನುಮಾನದಿಂದ ಪ್ರತಿಕ್ಷಣ ಜಗಳವಾಡುತಿದ್ದಳು ಹೀಗೆ ಜಗಳ ವಾಡುತ್ತಿರಬೇಕಾದರೆ ಅವನ ಕೋಪ ನೆತ್ತಿಗೆರಿ ಅವಳ ಕತ್ತನ್ನು ಹಿಸುಕಿದ್ದಾನೆ . ಹಿಸುಕಿದ್ದೇ ತಡ ಅವಳ ಪ್ರಾಣ ಪಕ್ಷಿ ಹಾರಿಹೋಗಿದೆ. ನಂತರ ಅವನಿಗೆ ದಿಕ್ಕು ತೋಚದಂತಾಗಿ ಅವಳ ಶವವನ್ನು ಡ್ರಮ್ಮಿನಲ್ಲಿಟ್ಟು ಶವದ ಜೊತೆ ಇಡಿ ರಾತ್ರಿ ಕಳೆದಿದ್ದಾನೆ.
ಬೆಳಕು ಹರಿಯುತಿದ್ದಂತೆ ಅವಳ ಶವವನ್ನು ನೀರು ತುಂಬುವ ಪ್ಲಾಸ್ಟಿಕ್ ಡ್ರಮ್ಮಿನಲ್ಲಿ ತುಂಬಿ ಎಂದು ಟಾಟ ಏಸ್ ಗಾಡಿಯನ್ನು ಬಾಡಿಗೆ ಪೆಡದು ಕೆಲವು ಸಾಮಾನುಗಳನ್ನು ಸಾಗಿಸುವ ನೆಪದಲ್ಲಿ ಶವ ತುಂಬಿರುವ ಭಾರವಾದ ಡ್ರಮನ್ನು ಗಾಡಿಗೆ ಏರಿಸಿದ್ದಾರೆ. ನಂತರ ಅದನ್ನು ಬೇರೆಡೆಗೆ ಸಾಗಿಸಿ ಬೆಟ್ಟದ ಮೇಲಿಂದ ಉರುಳಿಸಿದ್ದಾರೆ. ನಂತರ ವಾಒಸ್ ಮನೆಗೆ ಬರುವಷ್ಟರಲ್ಲಿ ಪೋಲಿಸ್ ವಾಹನ ಬಂದು ಅವನಿಗಾಗಿ ಕಾಯುತ್ತಿದೆ. ಏಕೆಂದರೆ ಭಾರವಾದ ಡ್ರಮ್ ಅನ್ನು ಗಾಡಿಗೆ ಏರಿಸುವಾಗ ಅನುಮಾನಗೊಂಡ ಸ್ಥಳಿಯರು ಪೋಲಿಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೋಲಿಸರು ತಮ್ಮ ಶೈಲಿಯಲ್ಲಿ ವಿಚಾರಿಸಿದಾಗ ಎಲ್ಲವನ್ನು ಬಾಯಿ ಬಿಟ್ಟಿದ್ದಾರೆ. ತುಕಾರಾಮ ಮತ್ತು ಶವವನ್ನು ಸಾಗಿಸಲು ಸಹಾಯ ಮಾಡಿದ ವಾಹನ ಚಾಲಕರನ್ನು ಬಂಧಿಸಿದ್ದಾರೆ.
ರೈತರೆ ನಿಮ್ಮ ಖಾತೆಗೆ ಹಣ ಜಮ ಆಗಿದೆಯಾ ಇಲ್ವಾ ? ಹಾಗಿದ್ರೆ ಈ ರೀತಿ ಮಾಡಿ