Friday, June 20, 2025

Latest Posts

ಪತ್ತೆ ಮಾಡಿದ 315 ಮೊಬೈಲ್ ಹಸ್ತಾಂತರ:ಪೊಲೀಸ್ ಕಮೀಷನರೇಟ್ ಮಹತ್ವದ ಕಾರ್ಯ..!

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಬರುವ ಪ್ರದೇಶದಲ್ಲಿ ಮೊಬೈಲ್ ಕಳೆದುಕೊಂಡ ಸಾರ್ವಜನಿಕರ ಮೊಬೈಲ್ ಪತ್ತೆ ಮಾಡಿ ಹಸ್ತಾಂತರ ಮಾಡುವ ಕಾರ್ಯಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವತಿಯಿಂದ ಸುಮಾರು 315 ಮೊಬೈಲ್ ಹಸ್ತಾಂತರ ಮಾಡಲಾಯಿತು.

ಮೊಬೈಲ್ ಕಳೆದುಕೊಂಡ ಮಾಲೀಕರಿಗೆ ಮೊಬೈಲ್ ಹಸ್ತಾಂತರ ಕಾರ್ಯಕ್ರಮವನ್ನು ಹುಬ್ಬಳ್ಳಿ ಸವಾಯಿ ಗಂಧರ್ವ ಹಾಲ್‌ನಲ್ಲಿ ಆಯೋಜಿಸಲಾಗಿದ್ದು, ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ನೇತೃತ್ವದಲ್ಲಿ ಹಸ್ತಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹೌದು..315 ಮೊಬೈಲ್ ಹಸ್ತಾಂತರ ಮಾಡಿದ ಪೊಲೀಸ್ ಅಧಿಕಾರಿಗಳು, CEIR PORTAL ಮೊಬೈಲ್ ಪತ್ತೆ ಹಚ್ಚಿದ ಪೊಲೀಸ್ ಸಿಬ್ಬಂದಿ ಹುಧಾ ಪೊಲೀಸ್ ಕಮೀಷನರ್, ಸಾರ್ವಜನಿಕರಿಗೆ ಕಾರ್ಯಕ್ರಮದಲ್ಲಿಯೇ ವಿತರಣೆ ಮಾಡಲಾಯಿತು. ಇನ್ನೂ ಕಾರ್ಯಕ್ರಮದಲ್ಲಿ ಮಾತನಾಡಿದ ಪೊಲೀಸ್ ಆಯುಕ್ತರು, ಯಾರೇ ಆಗಲಿ, ಯಾವುದೇ ಸಂದರ್ಭದಲ್ಲಿ ಮೊಬೈಲ್ ಕಳೆದುಕೊಂಡರೇ ಕೂಡಲೇ ‌1930 ಹೆಲ್ಪ್ ಲೈನ್ ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಈ ಬಗ್ಗೆ ಜನರು ಕೂಡ ಸಾಕಷ್ಟು ಜಾಗೃತರಾಗಿರಬೇಕು ಎಂದು ಅವರು ಮನವಿ ಮಾಡಿದರು.

ಒಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಮೊಬೈಲ್ ಕಳೆದುಕೊಂಡ ಸಾರ್ವಜನಿಕರಿಗೆ ಪತ್ತೆ ಮಾಡಿದ ಮೊಬೈಲ್ ಹಸ್ತಾಂತರ ಮಾಡಿದ್ದು, ನಿಜಕ್ಕೂ ಆತಂಕಗೊಂಡಿದ್ದ ಸಾರ್ವಜನಿಕರಲ್ಲಿ ಭರವಸೆ ಮೂಡಿದ್ದು, ಪೊಲೀಸ್ ಇಲಾಖೆ ಅಂದರೇ ಭಯವಲ್ಲ ಭರವಸೆ ಎಂಬುವುದನ್ನು ಸಾಕ್ಷಿಕರಿಸಿದೆ.

- Advertisement -

Latest Posts

Don't Miss