Friday, October 18, 2024

Latest Posts

ಬಸವನಗುಡಿ ಪೊಲೀಸ್ ಠಾಣೆಗೆ ಬೇಟಿನೀಡಿದ ಹಂಸಲೇಖ, ನಟ ಚೇತನ್ ಬೆಂಬಲ..!

- Advertisement -

www.karnatakatv.net:ಸoಗೀತ ನಿರ್ದೇಶಕ ಹಂಸಲೇಖ ವಿರುದ್ಧ ನೀಡಿರುವ ದೂರಿಗೆ ಸಂಬoಧಿಸಿದoತೆ ಇಂದು ಹಂಸಲೇಖ ಅವರು ಬಸವನಗುಡಿ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಪೇಜಾವರ ಶ್ರೀಗಳ ಕುರಿತಾದ ಹೇಳಿಕೆ ವಿಚಾರವಾಗಿ ಹಂಸಲೇಖ ವಿರುದ್ಧ ಬಸವನಗುಡಿ ಪೋಲಿಸ್ ಠಾಣೆಯಲ್ಲಿ ದೂರು ದಾಕಲಾಗಿತ್ತು.

ಹಂಸಲೇಖ ಅವರು ಪೋಲಿಸ್ ಠಾಣೆಗೆ ಆಗಮಿಸುವ ಸುದ್ದಿ ಕೇಳಿ ಭಜರಂಗದಳ ಸದಸ್ಯರು ಪೊಲೀಸ್ ಠಾಣೆ ಬಳಿ ಜಮಾಯಿಸಿ ಹಂಸಲೇಖರಿoದ ಕ್ಷಮೆಗೆ ಒತ್ತಾಯಿಸುವ ಸಾಧ್ಯತೆ ಇದೆ. ಹಂಸಲೇಖ ಜೊತೆಗೆ ನಟ ಚೇತನ್ ಸಹ ಠಾಣೆಗೆ ಆಗಮಿಸುವುದಾಗಿ ಹೇಳಿದ್ದು, ನಟ ಚೇತನ್ ಕೂಡ ಬಸವನಗುಡಿ ಪೋಲಿಸ್ ಠಾಣೆಗೆ ಬೇಟಿನೀಡಿದ್ದಾರೆ ಹಾಗೂ ನಮ್ಮ ಕರುನಾಡು ಯುವಸೇನೆ ಸೇರಿದಂತೆ ಹಲವು ಸಂಘಟನೆಗಳು ಹಂಸಲೇಖ ಪರವಾಗಿ ಬೇಟಿನೀಡಿವೆ.

ಈ ವೇಳೆ ರಸ್ತೆಯಲ್ಲೆ ಕುಳಿತು ಪ್ರತಿಭಟನೆ ಮಾಡಿರುವ ನಟ ಚೇತನ್ ಮಾತನಾಡಿ ‘ನಮ್ಮ ದೇಶದ, ನಮ್ಮ ಸಂವಿಧಾನದ ಮೂಲಭೂತ ಹಕ್ಕು, ವಾಕ್ ಸ್ವತಂತ್ರ ಅನ್ನೋದು ನಮ್ಮ ದೇಶನ, ನಮ್ಮ ರಾಜ್ಯನ ಬೆಳೆಸುವಂತ ಮಾರ್ಗ ಅದು. ಆ ವಾಕ್ ಸ್ವತಂತ್ರ ಹಂಸಲೇಖ ಅವರು ಮೈಸೂರಿನಲ್ಲಿ ಮಾತನಾಡಿದ್ದಾರೆ, ಅದರೇ ನಂತರ ಅವರು ಕ್ಷಮೆಯನ್ನ ಕೇಳಿದ್ದಾರೆ. ಕ್ಷಮೆ ಕೇಳಿದ ನಂತರ ಇವೋಂದು ಸಘಗಳು ಸಂಸ್ಥೆಗಳು ಅವರ ಮೇಲೆ ಕಿರುಕುಳವನ್ನ ಹಾಕಿದ್ದಾರೆ’ ಎಂಬ ಮಾತುಗಳನ್ನು ಹೇಳಿದ್ದಾರೆ.

ನಟ ಚೇತನ್ ಮೊದಲೆ ಹಂಸಲೇಖ ಅವರೊಂದಿಗೆ ತಾನು ಬರುವುದಾಗಿ ಹೇಳಿದ್ದನ್ನು ವಿರೋದಿಸಿದ್ದ ಭಜರಂಗದಳ ಸದಸ್ಯರು, ಚೇತನ್‌ಗೂ ಈ ಪ್ರಕರಣಕ್ಕೆ ನಂಟಿಲ್ಲ ಹಾಗಿದ್ದಾಗ ಚೇತನ್ ಏಕೆ ಬರಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಒಂದೊಮ್ಮೆ ಚೇತನ್ ಏನಾದರೂ ಹಂಸಲೇಖ ಜೊತೆ ಬಂದರೆ ನಾವು ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನೂ ಇದೆಲ್ಲದಕ್ಕು ಮೊದಲು ಬೆಂಗಳೂರು ಭಜರಂಗದಳದ ಮುಖಂಡ ತೇಜಸ್ ಮಾತನಾಡಿ, ”ಹಂಸಲೇಖ ಅವರ ಕ್ಷಮೆಯಿಂದ ತೃಪ್ತಿಯಾಗಿಲ್ಲ. ಹಂಸಲೇಖ ಬೇಷರತ್ತು ಕ್ಷಮೆಯಾಚಿಸಬೇಕು. ಈ ವಿಷಯದಲ್ಲಿ ಚೇತನ್ ಬರುವ ಅವಶ್ಯಕತೆ ಇಲ್ಲ. ಚೇತನ್ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಚೇತನ್ ಈ ದೇಶದ ಪ್ರಜೆ ಅಲ್ಲ. ಚೇತನ್ ಸಸ್ಯಾಹಾರಿ ಹಾಗೂ ಮಾಂಸಹಾರಿಗಳನ್ನು ಒಡೆಯುವ ಕೆಲಸ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಪೋಲಿಸ್ ಠಾಣೆ ಒಳಗೆ ಚೇತನ್ ಅವರನ್ನು ಬಿಡಬಾರದು. ಚೇತನ್ ಠಾಣೆಗೆ ಆಗಮಿಸಿದರೆ ಅವರ ವಿರುದ್ಧ ವಿರುದ್ದ ಕಪ್ಪುಪಟ್ಟಿ ಪ್ರದರ್ಶಿಸತ್ತೇವೆ” ಎಂದಿದ್ದಾರೆ.

ಹoಸಲೇಖ ಅವರು ಠಾಣೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪೋಲಿಸ್ ಠಾಣೆಯಬಳಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಇನ್ನೂ ಠಾಣೆ ಎದುರು ಹಂಸಲೇಖ ಅವರ ಪರ – ವಿರುದ್ದವಾಗಿ ಮಾತುಗಳು ಕೇಳಿಬರುತ್ತಿದ್ದವು.

ಹಂಸಲೇಖ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ”ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋದರು ಎಂಬುದು ಬಹಳ ಸುದ್ದಿಯಾಗಿತ್ತು. ದಲಿತರ ಮನೆಗೆ ಹೋಗಿ ಪೇಜಾವರ ಸ್ವಾಮಿಗಳು ಅಲ್ಲಿ ಕುಳಿತಿದ್ದರಷ್ಟೆ ಅವರು ಕೋಳಿ ಕೊಟ್ಟರೆ ತಿನ್ನಲಿಕ್ಕಾಗುತ್ತದೇನು? ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ಅವರು ತಿನ್ನುತ್ತಿದ್ದರೇನು? ಲಿವರ್ ಫ್ರೈ ಕೊಟ್ಟಿದ್ದರೆ ತಿನ್ನುತ್ತಿದ್ದರೇನು?” ಎಂದು ಪ್ರಶ್ನೆ ಮಾಡಿದ್ದರು. ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ಆಡಿದ್ದ ಮಾತುಗಳಿಗೆ ಕೃಷ್ಣ ಮಠದ ವಿಶ್ವೇಶ್ವರ ಪ್ರಸನ್ನ ಸ್ವಾಮೀಜಿ ಸೇರಿದಂತೆ ಹಲವು ಶಾಸಕರು, ಸಂಸದರು, ಬ್ರಾಹ್ಮಣ ಸಂಘ, ಹಿಂದುಪರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದವು. ಆ ಬಳಿಕ ಹಂಸಲೇಖ ತಮ್ಮ ಮಾತುಗಳಿಗೆ ಕ್ಷಮೆಯನ್ನೂ ಕೇಳಿದರು. ಆದರೂ ಕೆಲವು ಬ್ರಾಹ್ಮಣ ಸಂಘಗಳು ಹಂಸಲೇಖ ವಿರುದ್ಧ ದೂರು ಸಹ ದಾಖಲಿಸಿದ್ದಲ್ಲದೆ, ಹಂಸಲೇಖ, ಶ್ರೀಗಳ ಬೃಂದಾವನದ ಮುಂದೆ ಬಂದು ಕ್ಷಮೆ ಕೇಳಬೇಕು” ಎಂದು ಒತ್ತಾಯಿಸಿದ್ದಾರೆ.

- Advertisement -

Latest Posts

Don't Miss