Tuesday, October 14, 2025

Latest Posts

ಈ ರಾಶಿಯವರಿಗೆ ಹನುಮನ ಕೃಪಾ ಕಟಾಕ್ಷ ಸದಾ ಇರುತ್ತದೆ..

- Advertisement -

ರಾಮನನ್ನು ನೆನೆದರೆ ಹನುಮನನ್ನು ನೆನೆದಂತೆ ಅನ್ನೋ ಮಾತಿದೆ. ಯಾರು ರಾಮಭಕ್ತರಾಗಿರ್ತಾರೋ, ಅವರು ಹನುಮ ಭಕ್ತರಾಗಿರಲೇಬೇಕು. ಮತ್ತು ಯಾರು ಹನುಮ ಭಕ್ತರಾಗಿರುತ್ತಾರೋ, ಅವರು ರಾಮನನ್ನು ಪೂಜಿಸುತ್ತಾರೆ. ಹೀಗೆ ರಾಮ ಹನುಮನ ಕೃಪೆಗೆ ಪಾತ್ರರಾದ ಕೆಲ ರಾಶಿಯವರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ..

ಮೇಷ ರಾಶಿ: ಮೇಷ ರಾಶಿಯವರ ಮೇಲೆ ಹನುಮನ ಕೃಪೆ ಸ್ವಲ್ಪ ಹೆಚ್ಚೆನ್ನಬಹುದು. ಮೇಷ ರಾಶಿಯವರು ಯಾವುದಾದರೂ ಸಮಸ್ಯೆಯಿಂದ ಬಳಲುತ್ತಿದ್ದರೆ, ಅಂಥವರು ಹನುಮನ ದೇವಸ್ಥಾನಕ್ಕೆ ಭೇಟಿ ಕೊಟ್ಟು ದರ್ಶನ ಪಡೆದರೆ, ಸಕಲ ಕಷ್ಟಗಳಿಂದ ಮುಕ್ತಿ ಪಡೆಯಬಹುದು.

ಕಟಕ ರಾಶಿ: ಕಟಕ ರಾಶಿಯವರು ಮೌನ ಸ್ವಭಾವದವರಾದರೂ ಕೂಡ, ತಾಳ್ಮೆ ಸ್ವಲ್ಪ ಕಡಿಮೆ ಇರುತ್ತದೆ. ಇವರಿಗೆ ಬಹುಬೇಗ ಸಿಟ್ಟು ಬರುತ್ತದೆ. ಹೀಗಾಗಿ ಇವರು ತಾಳ್ಮೆ ತಂದುಕೊಳ್ಳಲು ರಾಮನಾಮ ಜಪ, ಹನುಮಾನ್ ಚಾಲೀಸಾ ಕೇಳಬೇಕು. ನಿರುದ್ಯೋಗ ಸಮಸ್ಯೆ ಇದ್ದವರು ಹನುಮಂತನ ಪೂಜೆ ಮಾಡಿದರೆ ಉತ್ತಮ.

ಸಿಂಹ ರಾಶಿ: ಈ ರಾಶಿಯವರ ಮೇಲೆ ಆಂಜನೇಯನ ಕೃಪೆ ಸದಾ ಇರುತ್ತದೆ. ಅಪಘಾತ ದುರಂತದ ಸಂದರ್ಭದಿಂದ ಹನುಮಂತ ನಿಮ್ಮನ್ನ ಪಾರು ಮಾಡುತ್ತಾನೆ. ನೀವು ಸದಾ ಹನುಮನನ್ನು ಆರಾಧಿಸಬೇಕು ಮತ್ತು ಸಾಧ್ಯವಾದಲ್ಲಿ ಹನುಮಾನ್ ಚಾಲೀಸಾ ಪಠಿಸಬೇಕು.

ವೃಶ್ಚಿಕ ರಾಶಿ: ಈ ರಾಶಿಯವರು ಯಾವುದಾದರೂ ಉತ್ತಮ, ಮಹತ್ತರವಾದ ಕೆಲಸ ಮಾಡುವುದಿದ್ದರೆ, ಆಂಜನೇಯನ ಆಶೀರ್ವಾದ ಬಹುಮುಖ್ಯವಾಗಿ ಪಡೆದುಕೊಳ್ಳಬೇಕು. ಹನುಮಂತನ ಕೃಪೆ ನಿಮ್ಮ ಮೇಲಿದ್ದು, ಉದ್ಯೋಗದಲ್ಲಿ ಸಮಸ್ಯೆ ಇದ್ದರೆ, ಹನುಮನ ಆರಾಧನೆಯಿಂದ ಪರಿಹಾರ ಸಿಗುವುದು.

ಕುಂಭ ರಾಶಿ: ಈ ರಾಶಿಯವರು ಅಷ್ಟೇನು ಹೆಚ್ಚಾಗಿ ಆರ್ಥಿಕ ಸಮಸ್ಯೆ ಎದುರಿಸುವುದಿಲ್ಲ. ಮಾತನಾಡುವುದರಲ್ಲಿ ಉತ್ತಮರೆನ್ನಿಸಿಕೊಂಡ ಇವರು, ಸಮಾಜದಲ್ಲಿ ಉನ್ನತ ಗೌರವ ಪಡೆಯುತ್ತಾರೆ. ಮತ್ತು ಇವರು ಶನಿಯ ಪ್ರಭಾವಕ್ಕೆ ಒಳಗಾಗುವ ಕಾರಣಕ್ಕೆ, ಹನುಮಂತನನ್ನು ಆರಾಧಿಸುವುದು ಅತ್ಯಗತ್ಯ.

ಮಕರ ರಾಶಿ: ಮಕರ ರಾಶಿಯವರ ಮೇಲೆ ಹನುಮಂತನ ಕೃಪೆ ಸದಾ ಇರುತ್ತದೆ. ಹನುಮಂತನನ್ನು ಆರಾಧಿಸಿದರೆ, ಈ ರಾಶಿಯವರು ಉದ್ಯಮ, ವ್ಯಾಪಾರ ವ್ಯವಹಾರಗಳಲ್ಲಿ ಉನ್ನತಿ ಹೊಂದುವಿರಿ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲು ಹನುಮನ ಆರಾಧನೆ ಸಹಾಯಕವಾಗಿದೆ.

- Advertisement -

Latest Posts

Don't Miss