Tuesday, April 15, 2025

Latest Posts

4 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಹಾರ್ದಿಕ್- ನತಾಶಾ: ಡಿವೋರ್ಸ್ ಕನ್‌ಫರ್ಮ್

- Advertisement -

Cricket News: ಇಷ್ಟು ದಿನ ಹಾರ್ದಿಕ್ ಪಾಂಡ್ಯಾ ಮತ್ತು ನತಾಶಾ ಡಿವೋರ್ಸ್ ತೆಗೆದುಕೊಳ್ಳುತ್ತಾರೆಂಬ ಸುದ್ದಿ ಹರಡಿತ್ತು. ಆ ಸುದ್ದಿ ಈಗ ಕನ್‌ಫರ್ಮ್ ಆಗಿದೆ. ನತಾಶಾ ಮತ್ತು ಹಾರ್ದಿಕ್ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.

ಈ ಬಗ್ಗೆ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಪೋಸ್ಟ್ ಹಾಕಿರುವ ಹಾರ್ದಿಕ್, ನಾವು ನಮ್ಮ 4 ವರ್ಷದ ವೈವಾಹಿಕ ಜೀವನಕ್ಕೆ ಅಂತ್ಯ ಹಾಡುತ್ತಿದ್ದೇವೆ. ನಾವು ಒಟ್ಟಾಗಿ ಬದುಕಲು ಸರ್ವ ಪ್ರಯತ್ನ ಮಾಡಿದ್ದೇವೆ. ಆದರೆ ನಾವು ಬೇರೆ ಬೇರೆ ಇರುವುದೇ ಉತ್ತಮ ಎಂದು ನಾವು ನಿರ್ಧರಿಸಿದ್ದೇವೆ. ಇದು ಕಠಿಣ ನಿರ್ಧಾರವಾಗಿದ್ದರೂ, ನಾವು ಬೇರೆ ಬೇರೆಯಾಗಲು ನಿರ್ಧರಿಸಿದ್ದೇವೆ. ಉತ್ತಮ ಭವಿಷ್ಯಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಇಂಥ ಸಮಯದಲ್ಲಿ ನಮ್ಮ ಖಾಸಗಿ ತನವನ್ನು ಗೌರವಿಸಿ ಎಂದು ಹಾರ್ದಿಕ್ ಮನವಿ ಮಾಡಿದ್ದಾರೆ.

ಹಾರ್ದಿಕ್ ಪಾಂಡ್ಯಾ ಮತ್ತು ನತಾಶಾ ವಿಶ್ವಕಪ್ ಪಂದ್ಯದ ಬಳಿಕ ಎಲ್ಲಿಯೂ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಅಂಬಾನಿ ಮಗ ಅನಂತ್ ಅಂಬಾನಿ ಮಗನ ಮದುವೆ ಕಾರ್ಯಕ್ರಮದಲ್ಲಿ ಹಾರ್ದಿಕ್ ಒಬ್ಬರೇ ಹಾಜರಾಗಿದ್ದರು. ಈ ವೇಳೆ ಡಿವೋರ್ಸ್ ಆಗುವುದು ಪಕ್ಕಾ ಅಂತಲೇ ಹೇಳಲಾಗಿತ್ತು.

ಹಾರ್ದಿಕ್ ಮತ್ತು ನತಾಶಾ 2020ರ ಮೇನಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ಅದೇ ವರ್ಷ ಜುಲೈನಲ್ಲಿ ಅವರಿಗೆ ಗಂಡು ಮಗು ಜನಿಸಿತ್ತು. ಬಳಿಕ 2023ರಲ್ಲಿ ಮಗನ ಎದುರು ಇವರಿಬ್ಬರು ವಿವಾಹವಾಗಿದ್ದರು.

- Advertisement -

Latest Posts

Don't Miss