Sunday, September 8, 2024

Latest Posts

ಹಾಲಿವುಡ್ ಪ್ರಾಶಸ್ತಿ ಪಡೆದ ಕನ್ನಡ ನಟಿ ಹರಿಪ್ರಿಯಾ

- Advertisement -

www.karnatakatv.net ಹಾಲಿವುಡ್: ಕರ್ನಟಕ: ಸದ್ಯ ಸ್ಯಾಂಡಲ್ ವುಡ್ನ ಬಹು ಬೇಡಿಕೆಯ ಹಾಗೂ ಪ್ರತಿಭಾವಂತ ನಟಿ ಹರಿಪ್ರಿಯಾ ಅವರಿಗೆ ಶ್ರೆಷ್ಟ ನಟಿ ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ಕನ್ನಡದ ಮತ್ತೊಂದು ಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಹರಿಪ್ರಿಯಾ ಅಭಿನಯಿಸಿರುವ ಅಮೃತಮತಿ ಚಿತ್ರಕ್ಕೆ ಈ ಹೆಗ್ಗಳಿಕೆ ಸಿಕ್ಕಿದ್ದು ಮೊದಲು ಅಟ್ಲಾಂಟ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶ್ರೇಷ್ಠ ವಿದೇಶೀ ಭಾಷಾ ಚಿತ್ರ ಎಂಬ ಪ್ರಶಸ್ತಿಗೆ ಪಾತ್ರವಾಗಿತ್ತು. ಲಾಸ್ ಏಂಜಲೀಸ್ ಸನ್ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶ್ರೇಷ್ಠ ಚಿತ್ರ ಮತ್ತು ಬರಗೂರರಿಗೆ ಶ್ರೇಷ್ಠ ಚಿತ್ರಕತೆ ಲಭಿಸಿತ್ತು. ಈಗ ಈ ಚಿತ್ರಕ್ಕೆ ಮುಕುಟಕ್ಕೆ ಮತ್ತೊಂದು ಗರಿ ಸೇರಿಕೊಂಡಿದೆ. ನಟಿ ಹರಿಪ್ರಿಯಾಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ಇಲ್ಲಿವರೆಗೆ ಈ ಚಿತ್ರ ಹತ್ತಕ್ಕೂ ಹೆಚ್ಚು ಅಂತರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಪ್ರದರ್ಶನ ಕಂಡಿರುವುದು ವಿಶೇಷ. ಈ ಚಿತ್ರಕ್ಕೆ ಬರಗೂರು ಅವರ ಚಿತ್ರಕತೆ, ಸಂಭಾಷಣೆ, ಗೀತರಚನೆ ಹಾಗೂ ನಿರ್ದೇಶನವಿದೆ.

- Advertisement -

Latest Posts

Don't Miss