Sunday, December 22, 2024

Latest Posts

ರವಿವರ್ಮನ ಪೇಂಟಿಂಗೇ ನಾಚುವಂತೆ ಕಂಗೊಳಿಸಿದ ಹರ್ಷಿಕಾ

- Advertisement -

ಇತ್ತೀಚೆಗೆ ಬೇಬಿ ಬಂಪ್​​ ಫೋಟೋಶೂಟ್ ಕಾಮನ್​ ಆಗಿದೆ. ಕೊಡಗಿನ ಕುವರಿ ನಟಿ ಹರ್ಷಿಕಾ ಪೂಣಚ್ಚ ತಮ್ಮ ಚೊಚ್ಚಲ ಮಗುವಿನ ನೀರಿಕ್ಷೆಯಲ್ಲಿದ್ದು, ಬೇಬಿ ಬಂಪ್​ ಫೋಟೋ ಶೂಟ್​ ಅನ್ನ ಮಾಡಿಸಿದ್ದಾರೆ. ಅರೇ, ಇದೇನಪ್ಪಾ ಇದರಲ್ಲೇನಿದೆ ಸ್ಪೆಷಲ್?​ ಅಂತ ನೀವು ಕೇಳಬಹುದು. ಆದ್ರೆ ನಟಿ ವಿಭಿನ್ನ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಸಿದ್ದು, ರವಿವರ್ಮ ಪೇಂಟಿಂಗ್ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಹರ್ಷಿಕಾ ಮೈಸೂರು ಸಿಲ್ಕ್ ಸೀರೆಯನ್ನುಟ್ಟು, ರವಿವರ್ಮನ ಕುಂಚದಲ್ಲಿ ಹರಳಿದ ಪೇಂಟಿಂಗೇ ನಾಚುವಂತೆ ಸಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಇನ್ನು ಭುವನ್​ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ಇಬ್ಬರು ಬಹುಕಾಲದ ಸ್ನೇಹಿತರು. ನಂತರ ಪ್ರೀತಿಯಲ್ಲಿಯೂ ಸಹ ಬಿದ್ದರು. ಕಳೆದ ವರ್ಷ ಆಗಸ್ಟ್ 24ರಂದು ನಟ ಭುವನ್​ ಪೊನ್ನಣ್ಣ ಜೊತೆ ಹರ್ಷಿಕಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಸದ್ಯ ಸ್ಯಾಂಡಲ್​ವುಡ್​ನಲ್ಲಿ ಮದರ್​ವುಡ್​ನ ಸಂಭ್ರಮ ಮನೆ ಮಾತಾಗಿದೆ. ಇತ್ತೀಚೆಗಷ್ಟೇ ನಟಿ ಅದಿತಿ ಪ್ರಭುದೇವ ಮನೆಗೆ ಮಹಾಲಕ್ಷ್ಮೀಯನ್ನು ಬರಮಾಡಿಕೊಂಡ್ರು. ನಂತರ ಸ್ಯಾಂಡಲ್​ವುಡ್​ನ ಲವ್​ ಬರ್ಡ್ಸ್ ಆದ ಡಾರ್ಲಿಂಗ್​ ಕೃಷ್ಣ ಹಾಗೂ ನಟಿ ಮಿಲನ ನಾಗರಾಜ್​ ಕೂಡ ತಮ್ಮ ಫ್ಯಾನ್ಸ್​ಗಳಿಗೆ ಗುಡ್​ ನ್ಯೂಸ್​ ನೀಡಿ, ಮೊದಲ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಇದೀಗ 7 ತಿಂಗಳ ಗರ್ಭಿಣಿಯಾಗಿರೋ ಹರ್ಷಿಕಾ ತಮ್ಮ ತಾಯ್ತನವನ್ನು ಎಂಜಾಯ್​ ಮಾಡ್ತಿದ್ದಾರೆ. ಹರ್ಷಿಕಾ ತಮ್ಮ ಬೇಬಿ ಬಂಪ್​ ಫೋಟೋ ಶೂಟ್​ ಅನ್ನ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದು, ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ ಎಂಬ ಹಾಡಿಗೆ ಫೋಟೋಶೂಟ್​ ವಿಡಿಯೋವನ್ನ ಶೇರ್​ ಮಾಡಿದ್ದಾರೆ. ವೀಡಿಯೋ ಸದ್ಯ ವೈರಲ್​ ಆಗ್ತಿದೆ. ಈ ವೀಡಿಯೋವನ್ನ ನೋಡಿದ ಅಭಿಮಾನಿಗಳಂತೂ ಹರ್ಷಿಕಾ ಫೋಟೋಶೂಟ್​ ಅನ್ನ ಸಿಕ್ಕಾ ಇಷ್ಟಪಟ್ಟಿದ್ದಾರೆ. ಎಷ್ಟು ಬ್ಯೂಟಿಫುಲ್​ ಆಗಿ ಕಾಣ್ತಿದ್ದೀರಾ, ವಾವ್! ನಿಮಗೆ ಕಂಡಿತ ದೃಷ್ಟಿ ಆಗುತ್ತೆ ಮೇಡಂ, ನಿಮ್ಮಂತೆ ಒಂದು ಮುದ್ದಾದ ಹೆಣ್ಣು ಮಗು ಆಗಲಿ ಅಂತ ಕಮೆಂಟ್​ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಇನ್ನು ಅಭಿಮಾನಿಗಳಷ್ಟೇ ಅಲ್ಲದೇ ಸ್ಯಾಂಡಲ್​ವುಡ್​ನ ಸೆಲೆಬ್ರೆಟಿಗಳು ಕೂಡ ವಾವ್​! ಎನ್ನುತ್ತಿದ್ದಾರೆ.

-ಸ್ವಾತಿ.ಎಸ್.

- Advertisement -

Latest Posts

Don't Miss