Haryana News: ದೇಶದ ಮೊದಲ ಹೈಡ್ರೋಜನ್ ಚಾಲಿತ ಪ್ರಯಾಣಿಕ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

Haryana News: ಇಂದು ಹರಿಯಾಣಾದ ಜಿಂಹ್‌ ರೈಲ್ವೆ ನಿಲ್ದಾಣದಲ್ಲಿ ದೇಶದ ಮೊದಲ ಹೈಡ್ರೋಜನ್ ಚಾಲಿತ ಪ್ರಯಾಣಿಕ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ಏನಿದರ ವಿಶೇಷತೆ..?

ಹತ್ತು ಬೋಗಿಗಳ ಈ ರೈಲು ಜಿಂದ್‌-ಸೋನಿಪತ್ ನಡುವಿನ 89 ಕಿ.ಮೀ. ಮಾರ್ಗದಲ್ಲಿ ಸಂಚರಿಸಲಿದೆ. ಸುಮಾರು 2,600 ಪ್ರಯಾಣಿಕರನ್ನು ಒಯ್ಯುವ ಸಾಮರ್ಥ್ಯ ಹೊಂದಿರುವ ರೈಲಿನ ಕಾರ್ಯಾಚರಣೆಯ ವೇಗ ಗಂಟೆಗೆ 75 ಕಿ.ಮೀ. ಆಗಿದ್ದು, ಗರಿಷ್ಠ ವೇಗ ಗಂಟೆಗೆ 110 ಕಿ.ಮೀ. ಆಗಿದೆ.

ಈ ರೈಲಿನಲ್ಲೇ ಅಳವಡಿಸಿರುವ ಹೈಡ್ರೋಜನ್ ಇಂಧನ ಕೋಶದಲ್ಲಿ, ಹೈಡ್ರೋಜನ್ ಮತ್ತು ವಾತಾವರಣದಲ್ಲಿರುವ ಆಮ್ಲಜನಕದ ನಡುವೆ ರಾಸಾಯನಿಕ ಕ್ರಿಯೆ ನಡೆದು ವಿದ್ಯುತ್ ಉತ್ಪಾದನೆಯಾಗುತ್ತದೆ. ಇದರಿಂದ ರೈಲಿನ ಮೋಟಾರ್‌ಗಳು ಕಾರ್ಯನಿರ್ವಹಿಸುತ್ತವೆ.

ಈ ಪ್ರಕ್ರಿಯೆಯಲ್ಲಿ ಇಂಧನ ದಹನವಾಗದ ಕಾರಣ ಹೊಗೆ, ಮಾಲಿನ್ಯ ಹಾಗೂ ನೇರ ಇಂಗಾಲ ಹೊರಸೂಸುವಿಕೆ ಇರುವುದಿಲ್ಲ. ಇದೊಂದು ಪರಿಸರ ಸ್ನೇಹಿ ರೈಲು ಆಗಿರಲಿದೆ. ಜರ್ಮನಿ,ಜಪಾನ್, ಚೀನಾ, ಅಮೆರಿಕ, ಫ್ರಾನ್ಸ್, ಇಟಲಿ, ಆಸ್ಟ್ರಿಯಾ, ಯುಕೆ ಬಳಿಕ ಹೈಡ್ರೋಜನ್ ರೈಲು ಬಳಸುತ್ತಿರುವ ಜಗತ್ತಿನ 9ನೇ ದೇಶವಾಗಿ ಭಾರತ ಹೊರಹೊಮ್ಮಿದೆ.

About The Author