ಹಾಸನ : ರಾಜ್ಯದಲ್ಲಿ ಎಲ್ಲರ ಪ್ರತಿಮೆ ನಿರ್ಮಿಸಿರುವಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪ್ರತಿಮೆಯನ್ನು ಬೆಂಗಳೂರಿನಲ್ಲಿರುವ ಕೆಂಪೇಗೌಡರ ಪ್ರತಿಮೆ ಪಕ್ಕದಲ್ಲಿ ನಿರ್ಮಾಣ ಮಾಡಬೇಕು ಮತ್ತು ಹಾಸನದ ಬುಸ್ತೇನಹಳ್ಳಿ ವೃತ್ತದಲ್ಲೂ ಪ್ರತಿಮೆ ನಿರ್ಮಿಸುವಂತೆ ಎಎಪಿ ಮುಖಂಡರಾದ ಅಗಿಲೆ ಯೋಗೀಶ್ ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಮಾಜಿ ಪ್ರಧಾನಿಗಳು ಕರ್ನಾಟಕದಿಂದ ಪ್ರಥಮ ಪ್ರಧಾನಿಯಾಗಿ ಎಲ್ಲಾ ವರ್ಗದವರಿಗೆ ರಾಜ್ಯದಲ್ಲಿ ಹಲವಾರು ಕೊಡುಗೆ ನೀಡಿದ್ದಾರೆ. ಕೆಂಪೇಗೌಡರ 108 ಅಡಿ ಪ್ರತಿಮೆ ನಿರ್ಮಾಣ ಮಾಡಿರುವಂತೆ ದೇವೇಗೌಡರ ಪ್ರತಿಮೆ ನಿರ್ಮಾಣ ಮಾಡಬೇಕು. ಅದು ಅವರ ಜೀವಿತಾವಧಿಯಲ್ಲಿಯೇ ಅಗಲಿ ಎಂದರು.
ಸಿದ್ದರಾಮಯ್ಯ ಅಂತಹ ನಾಯಕರು ಕ್ಷೇತ್ರ ಹುಡುಕಾಟ ನಡೆಸುವುದು ಶೋಚನೀಯ ಸಂಗತಿ : ಕೋಲಾರದಲ್ಲಿ ಸಂಸದ ಮುನಿಸ್ವಾಮಿ ವಾಗ್ದಾಳಿ
ಈ ಬಗ್ಗೆ ನಾವೆಲ್ಲಾ ಪಕ್ಷತೀತವಾಗಿ ಸೇರಿ ಒಂದು ಸಭೆ ಮಾಡಲು ನಿರ್ಧರಿಸಿದ್ದೇವೆ. ಮಂಗಳವಾರದಂದು ಎಲ್ಲಾ ಪಕ್ಷದವರು, ದೇವೇಗೌಡರ ಅಭಿಮಾನಿಗಳು ಸೇರಿ ಸಭೆ ಸೇರಲಾಗುತ್ತದೆ. ದೇವೇಗೌಡರು ಎಂದರೇ ಎಲ್ಲಾ ಸಮಾಜಕ್ಕೆ ಸೇರಿದವರು. ಬೆಂಗಳೂರು ಕಟ್ಟಿದವರು ಕೆಂಪೇಗೌಡರು ಆದರೆ ರಾಜ್ಯಕ್ಕೆ ಅಭಿವೃದ್ಧಿಯ ಕೊಡುಗೆ ಕೊಟ್ಟವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು. ಪ್ರತಿಮೆ ನಿರ್ಮಾಣ ಕುರಿತು ಸರಕಾರಕ್ಕೆ ಒತ್ತಾಯ ಮಾಡಲು ಜಿಲ್ಲಾಧಿಕಾರಿಗಳಿಗೆ ಮನವಿ ಕೂಡ ಮಾಡಲಾಗುತ್ತದೆ.
ಪರೀಕ್ಷೆಯಲ್ಲಿ ಕಾಪಿ ಚೀಟಿ ತಂದಿದ್ದಕ್ಕೆ ವಿದ್ಯಾರ್ಥಿನಿ ನಿಂದಿಸಿದ ಶಿಕ್ಷಕಿ : ಮನನೊಂದ ಬಾಲಕಿ ನೇಣಿಗೆ ಶರಣು
ಎಲ್ಲರ ಬಳಿ ಹಣ ಸಂಗ್ರಹಿಸಿ ಬುಸ್ತೆನಹಳ್ಳಿ ವೃತ್ತದಲ್ಲಿ ದೇವೇಗೌಡರ ಪ್ರತಿಮೆ ನಿರ್ಮಾಣಕ್ಕೆ ರಾಜಕೀಯ ಹೊರತುಪಡಿಸಿ ಸಿದ್ದತೆ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಅಮ್ ಆದ್ಮಿ ಪಕ್ಷದಿಂದ ಹಮ್ಮಿಕೊಳ್ಳಲಾಗಿರುವ ರೈತ ಯಾತ್ರೆ ಯಶಸ್ವಿಯಾಗಿದ್ದು, ಪ್ರತಿ ಗ್ರಾಮಕ್ಕೂ ತೆರಳಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಮುಖಂಡ ಫೈರೋಜ್, ಅಭಿಗೌಡ, ದಿನೇಶ್, ಮಂಜುನಾಥ್, ಗೋಪಿನಾಥ್ ಇತರರು ಉಪಸ್ಥಿತರಿದ್ದರು.