ಹಾಸನ :ಹಾಸನದ ಜೈಲಿನಲ್ಲಿ ಗಾಂಜಾ ಮಾರಾಟ ನಡೆಯುತ್ತಿರುವ ಘಟನೆ ವಿಷಯ ತಿಳಿದ ಪೊಲೀಸರು ಜೈಲಿನ ಮೇಲೆ ದಾಳಿ ನಡೆಸಿದ ಕರ್ಮ ಕಾಂಡದ ವೀಡಿಯೋ ವೈರಲ್ ಆಗಿದೆ.
ಇನ್ನು ಜೈಲಿನಲ್ಲಿ ಗಾಂಜಾ ಚರಸ್ ಮಾರಾಟ ಮಾಡುತ್ತಿರುವುದರ ಘಟನೆ ಬಗ್ಗೆ ಜೈಲಿನ ಖೇದಿಗಳಿಂದ ಮಾಹಿತಿ ತಿಳಿದ ಬೆನ್ನಲ್ಲೆ ಪೊಲೀಸರು ಜೈಲಿನ ಮೇಲೆ ದಾಳಿ ನಡೆಸಿದ್ದಾರೆ. ಹೊರಗಡೆಯಿಂದ ಕಡಿಮೆ ಹಣಕ್ಕೆ ತರಿಸಿಕೊಂಡು ಜೈಲಿನಲ್ಲಿ 10 ರಿಂದ 12 ಸಾವಿರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.ಇನ್ನು ಇದರ ಬಗ್ಗೆ ಮಾಹಿತಿಯನ್ನು ಜೈಲಿನ ಒಳಗಿರುವ ಖೈದಿಗಳು ವಿಡಿಯೋ ಮಾಡಿ ಕುಟುಂಬದ ಸದಸ್ಯರಿಗೆ ಕಳುಹಿಸಿದ್ದಾರೆ. ಜೈಲಿನೊಳಗೆ ಮೊಬೈಲ್ ಹಿಡಿದು ಗಾಂಜಾ ಮಾರಾಟದ ಬಗ್ಗೆ ವಿಡಿಯೋವನ್ನ ವಿಚಾರಣಾಧೀನ ಖೈದಿಗಳು ಮಾಡಿ ಹರಿಬಿಟ್ಟಿದ್ದಾರೆ.
ಅಗಸ್ಟ್ 18 ರ ರಾತ್ರಿ ದಿಢೀರ್ ದಾಳಿ ಮಾಡಿ 7 ಸ್ಮಾರ್ಟ್ ಫೋನ್ ಸೇರಿ 18 ಫೋನ್ ಗಳುನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ .ಇನ್ನು ಪೊಲೀಸರ ದಾಳಿ ನಡೆಸಿದ ಬೆನ್ನಲ್ಲೇ ಜೈಲಿನೊಳಗಿನ ಕರ್ಮ ಕಾಂಡದ ವೀಡಿಯೋ ವೈರಲ್ ಆಗಿದೆ. ಕಾರಾಗೃಹ ಇಲಾಖೆ ಅಧಿಕಾರಿಗಳು ಶಾಮೀಲಾಗೇ ಮಾದಕ ವಸ್ತು ಮಾರಾಟ ಎಂಬ ಬಗ್ಗೆ ಗಂಭೀರ ಆರೋಪ ಕೇಳಿಬರುತ್ತಿದೆ.
Raghavendra rajkumar :”ಚಿನ್ನದ ಮಲ್ಲಿಗೆ ಹೂವೇ” ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ ರಾಘಣ್ಣ
Hubli Ring Road : ಹುಬ್ಬಳ್ಳಿ ಹೊರವಲಯದಲ್ಲಿ ಮೂರು ವಾಹನಗಳು ಡಿಕ್ಕಿ, ಘಟನೆಯಲ್ಲಿ ಓರ್ವ ಸಾವು..!