Friday, August 8, 2025

Latest Posts

“ಸ್ವಯಂ ರಕ್ಷಣೆಗೆ ಕರಾಟೆ ಸಹಕಾರಿ”:ಶಾಸಕ ಪ್ರೀತಂಗೌಡ

- Advertisement -

Hassan News:

ವ್ಯಕ್ತಿಯ ಸ್ವಯಂ ರಕ್ಷಣೆಗೆ ಯಾವುದಾದರೂ ವಿಧ್ಯೆ ಕಲಿತಿರಬೇಕೆಂದರೇ ಅದು ಕರಾಟೆಯಾಗಿದ್ದು, ಕಷ್ಟದ ಸಮಯದಲ್ಲಿ ಸಹಕಾರಿಯಾಗಲಿದೆ ಎಂದು ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡ ತಿಳಿಸಿದರು.

ನಗರದ ಸಾಲಗಾಮೆ ರಸ್ತೆ ಬಳಿ ಇರುವ ಮಲೆನಾಡು ತಾಂತ್ರಿಕ ಕಾಲೇಜು ಆವರಣದಲ್ಲಿರುವ ಆಡಿಟೋರಿಯಂನಲ್ಲಿ ನ್ಯಾಷನಲ್ ಶೋಟೋಕಾನ್ ಕರಾಟೆ ಮಲ್ಟಿಪರ್ಪಸ್ ಫೆಡರೇಷನ್ ವತಿಯಿಂದ ಶನಿವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಕಾಲ ನಾಲ್ಕನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕರಾಟೆ ಎಂಬುದು ಮುಖ್ಯವಾಗಿ ಹೆಣ್ಣು ಮಕ್ಕಳು ತಮ್ಮನ್ನು ತಾವು ಸಮಾಜದಲ್ಲಿ ಗಟ್ಟಿಯಾಗಿ ಇರಬೇಕೆಂದರೆ ಒಂದು ಆಯುಧ ಇದೆ ಎಂದ್ರೆ ಅದೆ ಕರಾಟ ಎಂಬುದು ಪ್ರಮುಖ ಪಾತ್ರವಹಿಸುತ್ತದೆ. ಮಕ್ಕಳಲ್ಲಿ ಅನೇಕ ಕ್ರೀಡಾಸಕ್ತಿಗಳಿದ್ದು, ಅದರಲ್ಲಿ ಕರಾಟೆಯನ್ನು ಇಷ್ಟಪಡುತ್ತಾರೆ ಎಂದರು. ಪ್ರತಿ ಮಕ್ಕಳಲ್ಲೂ ತಮ್ಮದೆಯಾದ ಪ್ರತಿಭೆ ಎಂಬುದು ಇರುತ್ತದೆ ಆದರೆ ಅದಕ್ಕೆ ಪ್ರೋತ್ಸಹಿಸುವ ಕೆಲಸ ಪೋಷಕರು ಮಾಡಿದರೆ ಶಿಕ್ಷಣದ ಜೊತೆ ಜೊತೆಯಲ್ಲಿ ಒಂದು ಕ್ರೀಡೆಯಂತಹದನ್ನು ಕೂಡ ಕಲಿಯಬಹುದಾಗಿದೆ ಎಂದು ಕಿವಿಮಾತು ಹೇಳಿದರು.

​ ​ ಮಲೆನಾಡು ತಾಂತ್ರಿಕ ವಿದ್ಯಾಲಯದ ಕಾರ್ಯದರ್ಶಿ ಆರ್.ಟಿ. ದೇವೇಗೌಡ ಅವರು ಮಾತನಾಡಿ, ಮಕ್ಕಳಲ್ಲಿ ವಿಧ್ಯೆ ಜೊತೆಯಲ್ಲಿಯೇ ಇಂತಹ ಕರಾಟೆಯನ್ನು ಕೂಡ ತುಂಬಿದ್ರೆ ಮುಂದೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.  ರಾಷ್ಟ್ರಮಟ್ಟದ ಕರಾಟೆ ಕ್ರೀಡಾಕೂಟಕ್ಕೆ ವಿವಿಧ ರಾಜ್ಯಗಳಾದ ಆಂಧ್ರ ಪ್ರದೇಶದಿಂದ ಒಟ್ಟು ೫ ತಂಡಗಳು, ತೆಲಂಗಾಣದಿಂದ ೨ ತಂಡಗಳು, ಮಹಾರಾಷ್ಟ್ರದಿಂದ ೨ ತಂಡಗಳು, ಪಂಜಾಬ್ನಿಂದ ೧ ತಂಡ, ಉತ್ತರ ಪ್ರದೇಶದಿಂದ ೧ ತಂಡ, ಕೇರಳದಿಂದ ೧ ತಂಡ, ತಮಿಳುನಾಡಿನಿಂದ | ತಂಡ ಹಾಗೂ ಕರ್ನಾಟಕದಿಂದ ೧೦ ತಂಡಗಳು ಭಾಗವಹಿಸಲಿದೆ.

​ ​ ​ಕಾರ್ಯಕ್ರಮದಲ್ಲಿ ಎನ್.ಎಸ್.ಕೆ.ಎಂ.ಎಫ್. ಅಧ್ಯಕ್ಷರಾದ ಕೆ.ಜೆ. ಅನಂತಕುಂಆರ್, ಎಂಸಿಇ ಕಾಲೇಜು ಪ್ರಾಂಶುಪಾಲ ಡಾ. ಪ್ರದೀಪ್, ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಸಿದ್ದೇಶ್ ನಾಗೇಂದ್ರ, ನಗರಸಭೆ ಸದಸ್ಯರಾದ ದಯಾನಂದ್, ಎಂಸಿಇ ಕಾಲೇಜು ನೌಕರ ಕಲ್ಯಾಣ ಸಂಘದ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಜಂಠಿ ಕಾರ್ಯದರ್ಶಿ ಹೆಚ್.ಜಿ. ಕಾಂಚನಮಾಲ, ನಗರಸಭೆ ಸದಸ್ಯ ಹೆಚ್.ಎಂ. ರಕ್ಷಿತ್ ಕುಮಾರ್, ಬಿಜೆಪಿ ಮುಖಂಡರಾದ ಶೋಭನ್ ಬಾಬು, ಸುಜಾತ, ಎನ್.ಎಸ್.ಕೆ.ಎಂ.ಎಫ್. ತಾಂತ್ರಿಕ ತರಬೇತುದಾರರಾದ ಬಿ.ಎಸ್. ತೇಜಸ್ವಿ, ನ್ಯಾಷನಲ್ ಶೋಟೋಕಾನ್ ಕರಾಟೆ ಮಲ್ಟಿಪರ್ಪಸ್ ಫೆಡರೇಷನ್ ನ ತರಬೇತುದಾರ ಹೇಮಂತ್, ಅಭಿವೃದ್ಧಿ ಬೋಧಕರು ಹೆಚ್.ಕೆ. ಶಿವಕುಮಾರ್, ಸ್ಕೌಟ್ ಅಂಡ್ ಗೈಡ್ಸ್ ಜಿಲ್ಲಾ ಜಂಠಿ ಕಾರ್ಯದರ್ಶಿ ಹೆಚ್.ಜಿ. ಕಾಂಚನಮಾಲ, ಪಿ.ವಿ. ವಂದನ, ಬಾಲಕಿಯರ ತಾಂತ್ರಿಕ ತರಬೇತುದಾರರಾದ ಸೌಮ್ಯಶ್ರೀ ಇತರರು ಉಪಸ್ಥಿತರಿದ್ದರು.

ಮಂಗಳೂರಿನಲ್ಲಿ ಎಂ.ಎಸ್ ಧೋನಿ..?! ಆಗಮನದ ಕಾರಣವೇನು ಗೊತ್ತಾ..?!

ಮಂಡ್ಯ: ಜಿಲ್ಲಾ ಉಸ್ತುವಾರಿ ಸಚಿವರಿಂದ ಬಗರ್ ಹುಕ್ಕುಂ ಸಾಗುವಳಿ ಪತ್ರ ವಿತರಣೆ

ಹಾಸನ: ಮಿಕ್ಸಿ ಸ್ಫೋಟದ ಪ್ರಮುಖ ಆರೋಪಿ ಕೋರ್ಟ್ ಗೆ ಹಾಜರ್

- Advertisement -

Latest Posts

Don't Miss