ಹಾಸನ :
ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ, ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ
ಹಾಸನ ಜಿಲ್ಲೆಯ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಮಾಡುತ್ತಿದ್ದೇನೆ.ಚುನಾವಣೆ ದಿನಾಂಕ ಘೋಷಣೆ ಸಮೀಪವಿದ್ದು ಎಲ್ಲರೂ ಎಲ್ಲ್ಆರು ನಮ್ಮ ಪಕ್ಷದ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ನಾನು ಗ್ರಾಮಗಳಿಗೆ ಹೋದಂತ ಸಂದರ್ಭದಲ್ಲಿ ನನಗೆ ರಥಯಾತ್ರೆ ವೇಳೆ ಜನತೆಯಿಂದ ಒಳ್ಳೆಯ ಬೆಂಬಲ ಬರುತ್ತಿದೆ. ಇನ್ನೂ ನಾನು ಹದಿನೈದು ವರ್ಷದಿಂದ ರಾಜಕೀಯದಲ್ಲಿ ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ.ಇದುವರೆಗೂ ಹೋಗದ ಬಾಗಕ್ಕೆ ಪ್ರಥಮ ಭಾರಿಗೆ ಯಾವುದೇ ಭಾಗಕ್ಕೆ ಹೋದರು ಜಾತಿ ಮರೆತು ಜನರ ಬೆಂಬಲ ಕಾಣುತ್ತಿದ್ದೇನೆ.
ಜೆಡಿಎಸ್‌ಗೆ ಎರಡು ಮೂರು ಜಿಲ್ಲೆ ಅಂತಿದ್ದರು. ದಕ್ಷಿಣಕನ್ನಡ, ಉಡುಪಿ ಜಿಲ್ಲೆ ಹೊರತುಪಡಿಸಿ ಉಳಿದ ಎಲ್ಲಾ ಕಡೆ ಅಕೌಂಟ್ ಓಪನ್ ಮಾಡ್ತಿವಿ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಾಯಕರ, ಕಾರ್ಯಕರ್ತರ ಕೊರತೆ ಇದೆ ಒಪ್ಕೊತಿನಿ. ಇನ್ನು ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಸಂಖ್ಯೆ ಜಾಸ್ತಿಯಾಗಲಿದೆ. ಎಂದರು.ಕಾಂಗ್ರೆಸ್, ಬಿಜೆಪಿ ಪಕ್ಷಗಳು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ನಕಲಿ ಸಮೀಕ್ಷೆಗಳ ಮುಖಾಂತರ ಆ ಪಕ್ಷದ ಸಂಖ್ಯೆ ಏರಿಕೊಳ್ಳಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.ಆದರೆ ಸಾರ್ವಜನಿಕರ ಸ್ಪಷ್ಟ ಅಭಿಪ್ರಾಯ ಇರುವುದು ಜೆಡಿಎಸ್ ಪಕ್ಷಕ್ಕೆ. ಎಂದು ನಂಬಿಕೆ ಹಿಮ್ಮಡಿಗೊಳಿಸಿದರು.
ನಾನು ಎಲ್ಲಾಕಡೆ ಪ್ರವಾಸ ಮಾಡುತ್ತಿದ್ದೇನೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಮೂವತ್ತರಿಂದ ನಲವತ್ತು ಹಳ್ಳಿಗಳಿಗೆ ಭೇಟಿ ಕೊಡುತ್ತಿದ್ದೇನೆ.ಎಲ್ಲೆಡೆ ಜೆಡಿಎಸ್ ಪಕ್ಷದ ಪರವಾದ ಬೆಂಬಲ ಕಾಣುತ್ತಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಡಬಲ್ ಇಂಜಿನ್ ಸರ್ಕಾರ ರೈತರ ನೆರವಿಗೆ ಬರದಿರುವುದು ಬಹಳ ದೊಡ್ಡ ಪರಿಣಾಮ ಬೀರಿದ್ದು. 2024 ಕ್ಕೆ ಘೋಷಣೆ ಮಾಡಿಕೊಂಡಿರುವ ಬಜೆಟ್ ಜಾಹೀರಾತಿನಲ್ಲಿ ಬರುತ್ತಿದೆ. ಬಿಜೆಪಿಯವರು ಘೋಷಿಸಿರುವ ಬಜೆಟ್ ಪುಸ್ತಕಕ್ಕೆ ಮಾತ್ರ ಸೀಮಿತವಾಗಿದೆ. ಮುಂದಿನ ಚುನಾವಣೆಯಲ್ಲಿ ಏನು ಫಲಿತಾಂಶ ಬರುತ್ತೆ ಅದರ ಆಧಾರದ ಮೇಲೆ ಬಜೆಟ್‌ಗೆ ಮಹತ್ವ ಬರಬಹುದು, ಬಿಜೆಪಿ ಪೂರ್ಣ ಬಹುಮತ ಬಂದರೆ ಬಜೆಟ್‌ಗೆ ಮಹತ್ವ ಬರುತ್ತೆ ಜಾಹೀರಾತಿಗಾಗಿ ಜನತೆಯ ತೆರಿಗೆ ಹಣ ಲೂಟಿ ಮಾಡುತ್ತಿದ್ದಾರೆ. ಸಾರ್ವಜನಿಕರ ದುಡ್ಡು ಶ್ವೇಚ್ಛಾರಾವಾಗಿ ಖರ್ಚು ಮಾಡಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ಕೊಡುತ್ತೇನೆ. ಎರಡು ರಾಷ್ಟ್ರೀಯ ಪಕ್ಷಗಳ ಆಂತರಿಕ ಬೆಳವಣಿಗೆ ಏನಿದೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಗುರಿ ಮುಟ್ಟಲು ಸಹಕಾರಿಯಾಗುತ್ತೆ.
ಮುಖ್ಯಮಂತ್ರಿ ಪಿಎ ಎಂದು 60 ಕಂಪನಿಗಳಿಗೆ ಮೋಸದ ಬಲೆ ಬೀಸಿದ ಮಾಜಿ ಕ್ರಿಕೆಟಿಗ
ಪ್ರಿತಿಸಿದ ಯುವತಿಯನ್ನು ಬಲವಂತವಾಗಿ ಲೈಂಗಿಕ ಕ್ರಿಯೆ ಮಾಡಿ ದಿಂಬಿನಿಂದ ಸಾಯಿಸಿದ ಪ್ರಿಯಕರ