Eshwara Halli :ಹಾಸನದಲ್ಲಿ ಭೀಕರ ಅಪಘಾತ: ನಾಲ್ಕು ಸಾವು

Hassan News : ಜಿಲ್ಲೆಯ ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿಗೆ ಬಳಿ ಭೀಕರ ಅಪಘಾತ ಸಂಭವಿಸಿದೆ. ಇನ್ನೋವಾ ಕಾರು ಹಾಗೂ ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹಾಸನ ತಾಲೂಕು ಕುಪ್ಪಳಿ ಗ್ರಾಮದ ಚೇತನ್, ಗುಡೇನಹಳ್ಳಿಯ ಅಶೋಕ್, ತಟ್ಟೆಕೆರೆಯ ಪುರುಷೋತ್ತಮ, ಆಲೂರು ತಾಲೂಕಿನ ಚಿಗಳೂರಿನ ದಿನೇಶ್ ಮೃತರು. ಮಂಗಳೂರು ಕಡೆಗೆ ತೆರುಳುತ್ತಿದ್ದ ಇನ್ನೋವಾ ಕಾರು ಹಾಗೂ ಹಾಸನ ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿ ಮುಖಾಮುಖಿ ಡಿಕ್ಕಿಯಾಗಿವೆ. ಇದರಿಂದ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.

Marriage : ಗರ್ಭವತಿಯಾಗಿಸಿ ಯಾಮಾರಿಸಲು ಯತ್ನ: ಗ್ರಾಮಸ್ಥರ ಸಮ್ಮುಖದಲ್ಲಿ ವಿವಾಹ …!

Matrimony: ಹಿಂದೂ ವಿವಾಹ ಪ್ರಮಾಣ ಪತ್ರ ಆನ್ಲೈನ್ ನಲ್ಲಿ ಲಭ್ಯ

Nandalike Road : ನಂದಳಿಕೆ ಕೊಪ್ಪಳ ರಸ್ತೆ ಕಾಮಗಾರಿ ಸ್ಥಗಿತ: ಓಡಾಟಕ್ಕೆ ಜನರ ಪರದಾಟ

About The Author