Thursday, June 13, 2024

Latest Posts

Nandalike Road : ನಂದಳಿಕೆ ಕೊಪ್ಪಳ ರಸ್ತೆ ಕಾಮಗಾರಿ ಸ್ಥಗಿತ: ಓಡಾಟಕ್ಕೆ ಜನರ ಪರದಾಟ

- Advertisement -

Karkala News : ನಂದಳಿಕೆ ಗ್ರಾ.ಪಂ ವ್ಯಾಪ್ತಿಯಿಂದ ಗೋಳಿಕಟ್ಟೆ ಪಡುಬೆಟ್ಟು ರಸ್ತೆಯು ಸಂಪೂರ್ಣ ಕಾಂಕ್ರೀಟ್ ರಸ್ತೆಯ ನಿರ್ಮಾಣವಾಗಿದ್ದು ಕೆಲವೊಂದು ಭಾಗದಲ್ಲಿ ಇನ್ನೂ ಕೂಡ ಅಲ್ಲಲ್ಲಿ ರಸ್ತೆಯ ಕಾಮಗಾರಿ ಬಾಕಿ ಉಳಿದಿದ್ದು ಗುತ್ತಿಗೆದಾರ ವಿರುದ್ದ ಗ್ರಾಮಸ್ಥರು ಹಿಡಿ ಶಾಪವನ್ನು ಹಾಕುತ್ತಿದ್ದಾರೆ. ಬೋರ್ಡು ಶಾಲೆಯಿಂದ ಆರಂಭಗೊಂಡ ಕಾಮಗಾರಿಯೂ ಪೂರ್ಣಗೊಳ್ಳುವ ಮೊದಲೇ ರಸ್ತೆಯಲ್ಲಿ ಬಿರುಕು ಮತ್ತೆ ಗುತ್ತಿಗೆದಾರ ಸರಿಪಡಿಸಿದ ನಿದರ್ಶನ ಇಲ್ಲಿದ್ದು ಕಳಪೆ ಕಾಮಗಾರಿಗೆ ಇದು ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಬಾಕಿ ಉಳಿದ ಕಾಮಗರಿ : ಸಂಪೂರ್ಣ ಕಾಂಕ್ರೀಟೀಕೃತ ರಸ್ತೆಯ ಕಾಮಗಾರಿಯೂ ಪಡುಬೆಟ್ಟು ಭಾಗದಲ್ಲಿ ಸುಮಾರು 200 ಮೀಟರ್ ಉದ್ದರ ರಸ್ತೆ ಹಾಗೂ  ಕೊಪ್ಪಳ ಭಾಗದಲ್ಲಿ ಸುಮಾರು 100 ಮೀಟರ್ ನಷ್ಟು ರಸ್ತೆ ಭಾಕಿ ಉಳಿದಿದ್ದು ಸಂಪೂರ್ಣ ಹೊಂಡಗಳು ನಿರ್ಮಾಣಗೊಂಡಿದೆ. ಕಳೆದ ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ರಸ್ತೆಯಲ್ಲಿ ಸಂಪೂರ್ಣ ಕೆಸರು ನೀರು ನಿಂತು ಓಡಾಡುವುದೇ ಅಸಾಧ್ಯವಾದ ಪರಿಸ್ಥಿತಿ ಇಲ್ಲಿತ್ತು ಬಳಿಕ ಗುತ್ತಿಗೆದಾರ ಜಲ್ಲಿ ಕಲ್ಲುಗಳನ್ನು ಹಾಕಿ ಕಾಣೆಯಾಗಿದ್ದು ಇದೀಗ ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡವೊಂದು ನಿರ್ಮಾಣವಗಿದೆ ಇದರಿಂದ ವಾಹನ ಸವಾರರಿಗೆ ಓಡಾಡುವುದಕ್ಕೆ ನಿತ್ಯ ಕಷ್ಟವಗುತ್ತಿದೆ.

ವಾಹನ ಸಂಚಾರಕ್ಕೆ ತೊಂದರೆ : ರಸ್ತೆಯಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಿದ ಬಳಿಕ ಇದೀಗ ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡವೊಂದು ನಿರ್ಮಾಣವಾಗಿದ್ದು ಯಾವುದೇ ಬಸ್ಸು ಅಥವಾ ರಿಕ್ಷ ಅತ್ತಿತ್ತ ಚಲಿಸಲು ಕಷ್ಟವಾಗುತ್ತಿದೆ. ನಿತ್ಯ ಇಲ್ಲಿನ ರಸ್ತೆಯಲ್ಲಿ ಸುಮಾರು ಆರೇಳು ಬಸ್ಸುಗಳು ಓಡಾಡುತ್ತಿದ್ದು ಇದೀಗ ಹದಗೆಟ್ಟ ಈ ರಸ್ತೆಯಿಂದ ಬಸ್ಸು ಚಲಾಕರು ಕೂಡ ಈ ರಸ್ತೆಯಲ್ಲಿ ಬಸ್ಸು ಚಲಾಯಿಸಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ರಿಕ್ಷ ಚಾಲಕರಂತೂ ಇಲ್ಲಿನ ರಸ್ತೆಯ ಅವ್ಯವಸ್ಥೆಯಿಂದ ಇಲ್ಲಿನ ಬಾಡಿಗೆಯನ್ನೇ ಕೈಬಿಡುತ್ತಿದ್ದರೆ. ಕೆಲವೊಂದು ವಾಹನಗಳು ದೈರ್ಯವನ್ನು ಮಾಡಿಕೊಂಡು ವಾಹನ ಚಲಾಯಿಸಿದರೂ ಬಹುತೇಕ ವಾಹನಗಳು ಈಗಾಗಲೇ ಗ್ಯಾರೇಜ್ ಸೇರಿದೆ. ಕೆಲವೊಂದು ವಾಹನ ಸವಾರರು ರಸ್ತೆಯ ಬದಿಗೆ ಹಾಕಿರುವ ಮಣ್ಣಿನ ರಾಶಿಯ ಮೇಲೆ ವಾಹನವನ್ನು ಸಾಗಿಸುತ್ತಿದ್ದು ಯಾವುದೇ ಸಂದರ್ಭದಲ್ಲಿ ಭಾರೀ ಅನಾಹುತ ನಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.

ಅವೈಜ್ಞಾನಿಕ ಕಾಮಗಾರಿ : ಇಲ್ಲಿನ ಕಾಮಗಾರಿ ಅಲ್ಲಲ್ಲಿ ಮುಗಿಸಿದ ಬಳಿಕ ರಸ್ತೆಯ ಎರಡೂ ಬದಿಯಲ್ಲಿ ಮಣ್ಣು ಹಾಕಲಾಗಿದೆ ಆದರೆ ಎಲ್ಲೂ ಕೂಡ ವಾಹನವನ್ನು ರಸ್ತೆಯನ್ನು ಬಿಟ್ಟು ಕೆಳಗೆ ಇಳಿಸುವಂತಿಲ್ಲ. ಅಲ್ಲದೆ ಗೋಳಿಕಟ್ಟೆ ಇಳಿಜಾರು ರಸ್ತೆಯಲ್ಲಿ ರಸ್ತೆಯ ಪಕ್ಕದಲ್ಲೇ ಆಳವಾದ ಗುಂಡಿಯಿದ್ದರೂ ಪಕ್ಕದಲ್ಲಿ ಕಲ್ಲುಗಳನ್ನು ಕಟ್ಟಿ ಮಣ್ಣೂ ಹಾಕಿ ಸಮತಟ್ಟು ಮಾಡುವಲ್ಲಿ ಗುತ್ತಿಗೆದಾರರಿಗೆ ಪುರುಸೊತ್ತು ಇಲ್ಲದಾಗಿದೆ. ಇಲ್ಲಿ ವಾಹನ ಸವಾರರು ಸ್ವಲ್ಪ ಎಡವಿದರೂ ಅಥವಾ ವಾಹನಗಳು ಎದುರು ಬದುರುಗೊಳ್ಳುವ ಸಂದರ್ಭ ಸ್ವಲ್ಪ ರಸ್ತೆಯನ್ನು ಬಿಟ್ಟು ಕೆಲಗೆ ಇಳಿಸಿದರೂ ವಾಹನಗಳು ಸುಮಾರು 30ರಿಂದ 40 ಅಡಿ ಆಳದ ಪ್ರಪಾತಕ್ಕೆ ಕುಸಿಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಇಷ್ಟೋಂದು ಅಪಾಯಕಾರಿ ರಸ್ತೆಯಾದರೂ ಗುತ್ತಿಗೆದಾರ ಮಾತ್ರ ಕ್ಯಾರೆ ಇಲ್ಲದ ರೀತಿಯಲ್ಲಿದ್ದಾರೆ. ಅಲ್ಲದೆ ಇಲ್ಲಿನ ಸಮಸ್ಯೆಯ ಬಗ್ಗೆ ಗುತ್ತಿಗೆದಾರರಿಗೆ ಫೆÇೀನ್ ಮಾಡಿದರೂ ಯಾವುದೇ ಪ್ರಾಯೋಜನವಿಲ್ಲ. ಇಡೀ ರಸ್ತೆಯು ಅವೈಜ್ಞಾನಿಕ ಕಾಮಗಾರಿಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕಂಪೌಂಡ್ ಕುಸಿತಾ : ರಸ್ತೆಯ ಅವೈಜ್ಞಾನಿಕ ಕಾಮಗಾರಿಯಿಂದ ಕೊಪ್ಪಳ ಭಾಗದಲ್ಲಿ ಕಂಪೌಂಡ್‍ವೊಂದು ಕುಸಿದೆ. ಈ ಬಗ್ಗೆಯೂ ಇಲ್ಲಿವರೆಗೂ ಯಾವುದೇ ಕ್ರಮವನ್ನು ಗುತ್ತಿಗೆದಾರಾರು ಕೈಗೊಂಡಿಲ್ಲ. ಹೀಗೆ ಗುತ್ತಿಗೆದಾರ ಉದಾಸಿನತೆ ತೋರಿದರೆ ಕೆಲವೊಂದು ಭಾಗದಲ್ಲಿ ರಸ್ತೆಯು ಕುಸಿದು ಭಾರೀ ಅನಾಹುತಗಳು ನಡೆಯುವಂತಿದೆ.

ಘನವಾಹನ ಸಂಚಾರ : ಪಡುಬೆಟ್ಟು, ನಂದಳಿಕೆ ಭಾಗದಲ್ಲಿ ಕ್ರಶರ್ ಹಾಗೂ ಕಲ್ಲು ಕೋರೆಗಳಿದ್ದು ನಿತ್ಯ ನೂರಾರು ಘನ ವಾಹನಗಳು ಸಂಚರಿಸುತ್ತದೆ. ಹೀಗಾಗಿ ಘನ ವಾಹನದ ಆರ್ಭಟಕ್ಕೆ ಕೊಪ್ಪಳ ಭಾಗದಲ್ಲಿ ರಸ್ತೆಯ ಕಾಮಗಾರಿ ನಡೆಯದ ಜಾಗದಲ್ಲಿ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿದೆ. ರಸ್ತೆಯಲ್ಲಿ ಹೊಂಡ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಇನ್ನೂಕೂಡ ಕ್ರಮವನ್ನು ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಶಾಲಾ ಮಕ್ಕಳಿಗೆ ತೊಂದರೆ : ಕೊಪ್ಪಳದಲ್ಲಿ ರಸ್ತೆಯ ಕಾಮಗಾರಿ ನಡೆಯದೆ ಬೃಹತ್ ಹೊಂಡವೊಂದು ನಿರ್ಮಾಣವಾದ ಪರಿಣಾಮ ಶಾಲಾ ಮಕ್ಕಳಿಗೆ ನಿತ್ಯ ತೊಂದರೆಯಾಗುತ್ತಿದೆ. ಶಾಲಾ ವಾಹನಗಳು, ಶಾಲಾ ಮಕ್ಕಳನ್ನು ಕರೆತರುವ ರಿಕ್ಷ, ಕಾರು ಯಾವುದೂ ಕೂಡ ಈ ರಸ್ತೆಯಲ್ಲಿ ಬರಲು ಹಿಂದೇಟು ಹಾಕುತ್ತಿದ್ದಾರೆ ಇದರಿಂದ ಶಾಲಾ ಮಕ್ಕಳು ನಿತ್ಯ ಸಮಸ್ಯೆಯನ್ನು ಎದುರಿಸುವಂತಾಗಿದೆ. ಅಲ್ಲದೆ ಕೆಲವೊಂದಿಷ್ಟು ಮಕ್ಕಳು ಸರಿಯಾದ ವೇಳೆ  ವಾಹನ ಬಾರದ ಹಿನ್ನಲೆಯಲ್ಲಿ ಕಾಲು ನಡಿಗೆಯಲ್ಲೇ ಸಾಗುವಂತಾಗಿದೆ. ಕೂಡಲೇ ರಸ್ತೆಯ ಬಾಕಿ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಗ್ರಾಮಸ್ಥರ ಕಷ್ಟವನ್ನು ದೂರ ಮಾಡಬೇಕಾಗಿದೆ.

ಇಲ್ಲಿನ ರಸ್ತೆಯ ಕಾಮಗಾರಿ ಸಂಪೂರ್ಣ ಅವೈಜ್ಞಾನಿವಾಗಿದೆ. ಕಾಮಗಾರಿ ಬಾಕಿ ಉಳಿದಿದ್ದು ವಾಹನ ಸಂಚಾರಕ್ಕೆ ಕಷ್ಟವಾಗಿದೆ. ನಿತ್ಯ ಶಾಲಾ ಮಕ್ಕಳ ಸಹಿತ ಗ್ರಾಮಸ್ಥರು ಈ ರಸ್ತೆಯಿಂದ ಸಮಸ್ಯೆಯನ್ನು ಎದುರಿಸುವಂತಾಗಿದೆ.

Kannada habba:ಬೆಂಗಳೂರಿನಲ್ಲಿ ಕುಂದಾಪುರ ಕನ್ನಡ ಹಬ್ಬ

Tomato: ಟೊಮಾಟೋ ಬೆಳೆದು ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ರೈತ ಮಹಿಳೆ

Police:ಹೆಂಡತಿಯ ಶೀಲ ಶಂಕಿಸಿ ಕೊಲೆ ಮಾಡಿ ತಾನೆ ಪೋಲಿಸರಿಗೆ ಶರಣಾದನು

- Advertisement -

Latest Posts

Don't Miss